ಅತಿಥಿ ಉಪನ್ಯಾಸಕರ ಪ್ರತಿಭಟನೆ ವಿದ್ಯಾರ್ಥಿಗಳಿಗೆ ಸಂಕಷ್ಟ

ಇಂಜಿನಿಯರಿಂಗ್ ಕಾಲೇಜ್ ನಿಂದ ತಹಶೀಲ್ದಾರ್ ಗೆ ಮನವಿ

ಎವಿಬಿಪಿ ನೇತೃತ್ವದಲ್ಲಿ ಪ್ರತಿಭಟನೆ

ತರಗತಿಗಳು ಪೂರ್ಣಗೊಳಿಸುವಂತೆ ಮನವಿ

ಚಳ್ಳಕೆರೆ : ಪಾಠ ಪ್ರವಚನಗಳು ನಡೆಯದೇ ಶೈಕ್ಷಣಿಕ ವರ್ಷದಲ್ಲಿ ಹಿನ್ನಡೆ ಸಾಧಿಸುವ ಬೀತಿಯಿಂದ ಇಂದು ವಿದ್ಯಾರ್ಥಿಗಳು ನಗರದಲ್ಲಿ ಬೃಹತ್ ಪ್ರತಿಭಟನೆ ಮಾಡುವ ಮೂಲಕ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.

ಚಳ್ಳಕೆರೆ ನಗರದಲ್ಲಿ ಅಖಿಲ ಭಾರತೀಯ ವಿದ್ಯುತ್ ಪರಿಷತ್ತಿನಿಂದ ಆಯೋಜಿಸಿದ್ದ ಪ್ರತಿಭಟನೆಯು ಬಳ್ಳಾರಿ ರಸ್ತೆಯ ಇಂಜಿನಿಯರಿಂಗ್ ಕಾಲೇಜಿನಿಂದ ಸುಮಾರು ವಿದ್ಯಾರ್ಥಿಗಳು ಕಾಲ್ನಡಿಗೆಯ ಮೂಲಕ ನೆಹರು ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಆಗಮಿಸಿ ನಂತರ ತಾಲೂಕು ಕಛೇರಿಯಗೆ ದಾವಿಸಿ ಘೋಷಣೆಗಳನ್ನು ಕೂಗಿ ಮನವಿ ಪತ್ರ ಸಲ್ಲಿಸಿದರು

ಎವಿಬಿಪಿ ಬಾಲು ಮಾತನಾಡಿ, ಕಾಲೇಜುಗಳಲ್ಲಿ ಅತೀ ಹೆಚ್ಚಿನದಾಗಿ ಅತಿಥಿ ಉಪನ್ಯಾಸಕರು ಪಾಠ ಪ್ರವಚನ ಮಾಡುತ್ತಿದ್ದರು ಆದರೆ ಕಳೆದ ಹಲವು ದಿನಗಳಿಂದ ಉಪನ್ಯಾಸ ತೊರೆದು ತಮ್ಮ ಹಕ್ಕುಗಳಿಗೆ ಹೋರಾಟ ಮಾಡುವುದರಿಂದ ನಮ್ಮಗೆ ತೊಂದರೆಯಾಗಿದೆ ಪರೀಕ್ಷಾ ಸಮಯ ಬಂದಿದೆ ಆದರೆ ತರಗತಿಗಳು ನಡೆಯುತ್ತಿಲ್ಲ ಆದ್ದರಿಂದ ನಮಗೆ ಪಠ್ಯ ಮುಗಿಸಿ ಪರೀಕ್ಷೆಗೆ ಅನುವು ಮಾಡಬೇಕೆಂದು ಮನವಿಯನ್ನು ಶಿರಸ್ತೆದಾರ್ ಸದಾಶಿವಪ್ಪ ರವರಿಗೆ ನೀಡಿದರು.

ಇದೇ ಸಂಧರ್ಭದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!