ಚಳ್ಳಕೆರೆ : ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಜನ ಸಂಪರ್ಕ ಸಭೆ ನಡೆಸಿ, ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸಿದ ಪಿಎಸ್ಐ ಶಿವರಾಜ್.
ಗ್ರಾಮದಲ್ಲಿ ಹೆಚ್ಚಿನದಾಗಿ ಬಾಲ್ಯ ವಿವಾಹ, ಅಪ್ರಾಪ್ತ ವಯಸ್ಕರ ಹೆಣ್ಣು ಮಕ್ಕಳನ ಚುಡಾಯಿಸುವ ಪ್ರಕರಣಗಳು ಹೆಚ್ಚಿನದಾಗಿ ಕೇಳಿ ಬರುತ್ತಿದೆ. ಹಾಗೂ ದ್ವಿಚಕ್ರ ವಾಹನಗಳಿಗೆ ಆರ್ ಸಿ ಕಾರ್ಡ್, ಇನ್ಸೂರೆನ್ಸ್, ಡಿಎಲ್ ಇಲ್ಲದೆ ಹೆಚ್ಚಿನದಾಗಿ ವಾಹನ ಚಾಲನೆ ಮಾಡುತ್ತಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಆಸ್ಪತ್ರೆ, ಮುಂಭಾಗದಲ್ಲಿ ಮದ್ಯಪಾನ ಮಾಡಿ ಬಾಟಲಿ ಬಿಸಾಕಿ ಹೋಗುತ್ತಿದ್ದಾರೆ, ಎಂಬ ಆರೋಪ ಕೇಳಿ ಬರುತ್ತಿವೆ. ಇನ್ನು ಮುಂದೆ ಸಾರ್ವಜನಿಕ ಸ್ಥಳ ಶಾಲಾ ಆವರಣದಲ್ಲಿ ಮಧ್ಯಪಾನ ಮಾಡಿದರೆ, ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರನ ಚುಡಾಯಿಸಿದರೆ, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಿಎಸ್ಐ ಶಿವರಾಜ್ ತಿಳಿಸಿದರು.
ಜನರು ಪೋಲೀಸರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಂಡರೆ. ಅಕ್ರಮ ದಂಧೆಗಳಾದ ಮಟ್ಕಾ , ಜೂಜಟ್ ಗಾಂಜಾ ಮಾರಾಟ, ಬಾಲ್ಯ ವಿವಾಹ, ಶಾಲಾ ವಿದ್ಯಾರ್ಥಿನಿಯರನ್ನು ಚುಡಾಯಿಸುವುದು ಅಕ್ರಮ ದಂಧೆ ಕೋರರ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿದರೆ ಮಾಹಿತಿ ನೀಡಿದರೆ ಅವರ ಹೆಸರನ್ನು ಗೌಪ್ಯತೆ ಕಾಪಾಡುವುದರ ಮುಖಾಂತರ ಕಡಿವಾಣ ಹಾಕುತ್ತೇವೆ. ಇದಕ್ಕೆ ಸಾರ್ವಜನಿಕರು ಪೋಲಿಸರೊಂದಿಗೆ ಕೈಜೋಡಿಸಬೇಕೆಂದು ಎಎಸ್ಐ ತಿಪ್ಪೇಸ್ವಾಮಿ ತಿಳಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ರಾಧಮ್ಮತಿಪ್ಪೇಸ್ವಾಮಿ ಮಾತನಾಡಿ ಸಣ್ಣಪುಟ್ಟ ಸಮಸ್ಯೆಗಳನ್ನು ಗ್ರಾಮಗಳಲ್ಲಿ ಇತ್ಯರ್ಥ ಮಾಡಿ ಬಗೆಹರಿಸಿ ಕೊಡುತ್ತೇವೆ, ಕೆಲವೊಂದು ಸಮಸ್ಯೆಗಳನ್ನು ಪೊಲೀಸರ ಮುಖಾಂತರ ಬಗೆಹರಿಸಿಕೊಳ್ಳಲು ಪೊಲೀಸ್ ಠಾಣೆಗೆ ಹೋಗುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪ. ಅಧ್ಯಕ್ಷೆ ರಾಧಮ್ಮತಿಪ್ಪೇಸ್ವಾಮಿ, ಉಮೇಶ್, ಪ್ರಸನ್ನ, ಮಹಾಂತೇಶ್, ಸಣ್ಣಪ್ಪ, ಗ್ರಾಮಸ್ಥರು ಪೊಲೀಸರದ ಎಎಸ್ಐ.ತಿಪ್ಪೇಸ್ವಾಮಿ,ಮಂಜುನಾಥ್ ಮುಡಿಕಿ, ಇದ್ದರು.