ಚಳ್ಳಕೆರೆ ತಾಲ್ಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಗೌರಿ ಹುಣ್ಣಿಮೆಯ ಅಂಗವಾಗಿ ಗೌರಿ ಹಬ್ಬವನ್ನು ಸಂಭ್ರಮ ತಡಗರದಿಂದ ಆಚರಿಸಿ ಇಂದು ವಿಸರ್ಜನೆ ಮಾಡಿದರು.

ಗ್ರಾಮದಲ್ಲಿ ಗೌರಿ ಹುಣ್ಣಿಮೆಯಂದು ಕೆರೆ ಮಣ್ಣನ್ನು ತಂದು ಆನೆಯ ಮೂರ್ತಿಯನ್ನು ಮಣ್ಣಿನಲ್ಲಿ ತಯಾರಿಸಿ, ಅದರ ಮೇಲೆ ಗೌರಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿವಿಧ ಹೂಗಳಿಂದ ಅಲಂಕಾರ ಮಾಡಿ, ಐದು ದಿನಗಳ ಕಾಲ ಗ್ರಾಮದ ಹೆಣ್ಣು ಮಕ್ಕಳು ಸೀರೆಯನ್ನು ಹುಟ್ಟು ಅಲಂಕಾರಗೊಂಡು ಗೌರಮ್ಮನಿಗೆ ಆರತಿ ಹಿಡಿದು ವಿವಿಧ ರೀತಿಯ ಪೂಜೆಗಳನ್ನು ಸಲ್ಲಿಸುತ್ತಾರೆ.

ಗೌರಿಗೆ ಪ್ರತಿದಿನ ಹಳ್ಳಿಯ ಸೊಗಡಿನ ಜನಪದ ಗೀತೆ, ಕೋಲಾಟ, ಭಜನೆ ಕಾರ್ಯಕ್ರಮವನ್ನು ಪ್ರತಿದಿನ ಹಮ್ಮಿಕೊಂಡು ಗೌರಿ ಹಬ್ಬವನ್ನು ಆಚರಿಸುತ್ತಾರೆ.

ಗ್ರಾಮದಲ್ಲಿ ಗೌರಿ ಹಬ್ಬವನ್ನು 55 ವರ್ಷಗಳಿಂದ ಆಚರಿಸುತಿದ್ದೇವೆ, ನಮಗೆ ಸಮೃದ್ಧಿ ಮಳೆ ಆಗಲಿ ಮಳೆ ಆಗದೆ ಇರಲಿ ಯಾವ ವರ್ಷವೂ ಹಬ್ಬವನ್ನು ಕೈ ಬಿಡದೆ ಹಿಂದಿನಿಂದಲೂ ಆಚರಿಸಿಕೊಳ್ಳುತ್ತಾ ಬಂದಿದ್ದೇವೆ.
ಗೌರಿಯನ್ನು ವಿಸರ್ಜನೆ ಮಾಡುವ ಕೊನೆಯ ದಿನ, ಕೀಲು ಕುದುರೆ, ನಂದಿಕೋಲು, ಡೋಲು ಕುಣಿತ, ವೀರಗಾಸೆ, ನೃತ್ಯ ಪ್ರದರ್ಶನ ಹೀಗೆ ವಿವಿಧ ರೀತಿಯ ಕಲಾತಂಡಗಳನ್ನು ಪ್ರತಿ ವರ್ಷವೂ ಕರೆತಂದು ಗೌರಿಯನ್ನು ಹೂವಿನ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡುವ ಮೂಲಕ ವರ್ಷದಿಂದ ವರ್ಷ ಯಶಸ್ವಿಗೊಳಿಸಿಕೊಂಡು ಬಂದಿದ್ದೇವೆ ಎಂದು ಗ್ರಾಮದ ಶ್ರೀನಿವಾಸ್ ತಿಳಿಸಿದರು.

About The Author

Namma Challakere Local News
error: Content is protected !!