ರಾಮು ದೊಡ್ಮನೆ. ಚಳ್ಳಕೆರೆ
ಚಳ್ಳಕೆರೆ : ನಿರಂತರವಾಗಿ ಗ್ರಾಮೀಣ ಪ್ರದೇಶದಲ್ಲಿ ದಾರಿ ಸಮಸ್ಯೆಗಳ ವಿವಾಧಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು ರೈತರಿಗೆ ಪರಿಹಾರ ಮಾತ್ರ ಇನ್ನೂ ಸಿಕ್ಕಿರಲಿಲ್ಲ, ದಿನನಿತ್ಯ ಸರಕಾರದ ಕಛೇರಿಗಳಿಗೆ ಅಲೆಯುವ ರೈತರ ಸಂಕಷ್ಟಗಳನ್ನು ತಿಳಿದ ತಹಶೀಲ್ದಾರ್ ರೇಹಾನ್ ಪಾಷ, ಕೆಲವೇ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳ ಸುಮಾರು ದಾರಿ ವಿವಾಧಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಹೌದು ನಿಜಕ್ಕೂ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಗ್ರಾಮೀಣ ಪ್ರದೇಶದ ಹಲವು ಸಾರ್ವಜನಿಕರು ದಾರಿ ಇಲ್ಲದೆ ಪರಿತಪ್ಪಿಸಿ ವಿವಾಧಗಳಲ್ಲಿ ಸಿಲುಕಿ ತಮ್ಮ ಜೀವನ ಹಾಳು ಮಾಡಿಕೊಳ್ಳುವ ದಿನಮಾನಗಳಲ್ಲಿ ಗ್ರಾಮೀಣ ಪ್ರದೇಶದ ಮುಗ್ದ ಜನರಿಗೆ ದಾರಿ ಸಮಸ್ಯೆಯಿಂದ ಮುಕ್ತಿ ಕಾಣಿಸಿದ್ದಾರೆ.
ತಾಲೂಕಿನ ಸಾಣೀಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಣೀಕೆರೆ, ಕಾಪರಹಳ್ಳಿ ಮತ್ತು ಜಡೇಕುಂಟೆ ಮತ್ತು ಕಮ್ಮತ್ ಮರಿಕುಂಟೆ ಗ್ರಾಮಗಳ ದಾರಿ ಸಮಸ್ಯೆ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಸ್ಥಳದಲ್ಲೆ ನಕಾಶೆ ಕಂಡ ದಾರಿವಿವಾಧಕ್ಕೆ ಇತ್ಯರ್ಥಪಡಿಸಿದ್ದಾರೆ.
ಅದರಂತೆ ಹಳ್ಳಿಗಳಲ್ಲಿ ಕೋಮುಗಲಬೆಗಳು ಹೆಚ್ಚಿನದಾಗಿ ಈ ದಾರಿಗಳಿಂದ ವೈಮನಸ್ಸು ದ್ವೇಷ ಅಸೂಹೆ, ಈಗೇ ಕೊಮುಗಲಭೆ ಕದಡುವ ಈ ದಾರಿ ಸಮಸ್ಯೆಗಳಿಗೆ ವಿಶೇಷವಾದ ತಂಡ ರಚನೆ ಮಾಡಿ, ವಾರದಲ್ಲಿ ತಲಾ ಒಂದು ಹೋಬಳಿಯ ಆಯ್ದ ಹಳ್ಳಿಗಳ ದಾರಿ ಸಮಸ್ಯೆಗಳನ್ನು ಪಟ್ಟಿಮಾಡಿ, ನಕಾಶೆ ಕಂಡ ದಾರಿ, ರೂಢಿಗತದಾರಿ, ಕಾಲುದಾರಿ, ಹಾಗೂ ಬಂಡಿದಾರಿ ಇಗೇ ದಾರಿಸಮಸ್ಯೆ ವಿವಾಧಕ್ಕೆ ನಾಂಧಿ ಹಾಡಿದ್ದಾರೆ.
ಒಟ್ಟಾರೆ ತಾಲೂಕಿನಲ್ಲಿ ಗಡಿಭಾಗದ ದಾರಿ ಸಮಸ್ಯೆಗಳನ್ನು ಮುಕ್ತಿ ಕಾಣಿಸುವ ಮೂಲಕ ಮಾದರಿ ತಹಶೀಲ್ದರ್ ಹಾಗಿ ಹೊರಹೊಮ್ಮಿದ್ದಾರೆ. ಇನ್ನೂ ಹಲವು ವರ್ಷಗಳಿಂದ ರೈತರ ತನ್ನ ಹೊಲಕ್ಕೆ ದಾರಿ ಇಲ್ಲದೆ ಕಛೇರಿಗೆ ಅಲೆಯುವುದನ್ನು ತಪ್ಪಿಸಲು ವಿಶೇಷ ಅಂದೋಲನದ ಮೂಲಕ ಸ್ಥಳೀಯ ಶಾಕರ ಟಿ.ರಘುಮೂರ್ತಿ ರವರ ಸಹಕಾರದೊಂದಿಗೆ ಕ್ಷೇತ್ರದಲ್ಲಿ ಎಲ್ಲಿಯೂ ದಾರಿ ವಿವಾಧಗಳು ನಡೆಯದಂತೆ ಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆಯ ಜಂಟಿ ಕಾರ್ಯಚರಣೆಯಲ್ಲಿ ರೈತರ ಹೊಲಕ್ಕೆ ಹೋಗುವ ನಕಾಶೆ ಕಂಡ ದಾರಿಗಳಿಗೆ ಹೊಸ ದಿಕ್ಸೂಚಿಯಾಗಿದ್ದಾರೆ.
ಸರಕಾರದ ನಿಯಮಾವಳಿಗಳ ಪ್ರಕಾರ ನಕಾಶೆ ಕಂಡ ದಾರಿಗಳನ್ನು ಹುಡುಕಿ ಅ ಭಾಗದ ರೈತರಿಗೆ ನೆರವಾಗಿದ್ದಾರೆ, ಇನ್ನೂ ಹಳ್ಳಿಗಳಲ್ಲಿ ಸೌಹಾರ್ದಯುತ ಜೀವನ ನಡೆಸಲು ಅಲ್ಲಿನ ದಾರಿ ಹೊಂದಾಣಿಕೆ ಸೂತ್ರದೊಂದಿಗೆ ಅವರ ಅನ್ಯೂನ್ಯತೆಗಳನ್ನು ಅವರಿಂದ ಸರಿಪಡಿಸುವ ಅರಿವು ಕಾರ್ಯಕ್ರಮಗಳ ಮೂಲಕ ತಾಲೂಕಿನಲ್ಲಿ ಹೊಲಕ್ಕೆ ಹೋಗುವ ದಾರಿ ಸಮಸ್ಯೆಗಳಿಗೆ ಮುಕ್ತಿ ಕಾಣಿಸಿದ್ದಾರೆ.
ಹೇಳಿಕೆ..:
ತಾಲೂಕಿನಲ್ಲಿ ದಿನನಿತ್ಯವೂ ಹೆಚ್ಚಿನದಾಗಿ ದಾರಿ ಸಮಸ್ಯೆಗಳು, ಸಾಮಾಜಿಕ ಭದ್ರತೆ ಸಮಸ್ಯೆಗಳು ಹೊತ್ತು ಗ್ರಾಮೀಣ ಭಾಗದ ಮುಗ್ದ ಜನರು ತಾಲೂಕು ಕಛೇರಿಗೆ ಬರುವುದು ಗಮನಿಸಿ ಸ್ಥಳದಲ್ಲೆ ಪರಿಹಾರ ನೀಡುವಂತಹ ಮಹತ್ವದ ಕಾರ್ಯ ಕಂದಾಯ ಅಧಿಕಾರಿಗಳಿಂದ ನಿರಂತರವಾಗಿ ನಡೆಯುತ್ತದೆ. ತಾಲೂಕು ಕಛೇರಿಯತ್ತ ಹಳ್ಳಿಯ ಜನರು ಅಲೆಯಬಾರದು ಎಂಬದೃಷ್ಠಿ ಕೋನದಿಂದ ಗ್ರಾಮೀಣ ಭಾಗದ ಜನರು ಇದ್ದಲ್ಲೆಗೆ ಸರಕಾರದ ಯೋಜನೆÀಗಳನ್ನು ತಲುಪಿಸುವಂತಹ ಮಹತ್ವದ ಕಾರ್ಯಕ್ರಮ ತಾಲೂಕಿನಲ್ಲಿ ನಡೆಯುತ್ತಿದೆ.—ರೇಹಾನ್ ಪಾಷ, ತಹಶೀಲ್ದಾರ್ ಚಳ್ಳಕೆರೆ
ಪೋಟೋ ಚಳ್ಳಕೆರೆ ತಾಲೂಕಿನ ಸಾಣೀಕೆರೆ, ಕಾಪರಹಳ್ಳಿ ಗ್ರಾಮದ ರೈತರ ಹೊಲದ ದಾರಿ ಸಮಸ್ಯೆಗೆ ಬಗ್ಗೆ ಪರೀಶೀಲನೆ ನಡೆಸುತ್ತಿರುವ ತಹಶೀಲ್ದಾರ್ ರೇಹಾನ್ ಪಾಷ, ಕಂದಾಯ ಅಧಿಕಾರಿ ಲಿಂಗೇಗೌಡ, ಸರ್ವೇ ಅಧಿಕಾರಿ ರವಿಕುಮಾರ್, ಗ್ರಾಮ ಲೆಕ್ಕಾಧಿಕಗಳು