ಅಡುಗೆ ತಯಾರಕರ ತರಬೇತಿ ಕಾರ್ಯಗಾರ..!
ಶಿಕ್ಷಕರು ಆಹಾರ ಪರೀಶಿಲಿಸಿದ ನಂತರವೇ ಮಕ್ಕಳಿಗೆ ಆಹಾರ ನೀಡಿ : ಬಿಇಓ ಕೆ.ಎಸ್.ಸುರೇಶ
ಚಳ್ಳಕೆರೆ : ಅಡುಗೆ ತಯಾರು ಮಾಡುವಾಗ ಅಡುಗೆ ಸಹಾಯಕರು ಸ್ವಚ್ಚತೆಯಿಂದ ಮಕ್ಕಳ ಆಹಾರ ತಯಾರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಹೇಳಿದರು.
ಅವರು ನಗರದ ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಕಛೇರಿಯಲ್ಲಿ ಆಯೋಜಿಸಿದ್ದ ಅಡುಗೆ ತಯಾರಕರ ತರಬೇತಿ ಕಾರ್ಯಗಾರದ ಒಂಭತ್ತನೆ ದಿನದ ಕಾರ್ಯಗಾರದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಡುಗೆ ಸಹಾಯಕರು ಸ್ವಚ್ಚತೆಯಿಂದ ಅಡುಗೆ ಕೊಠಡಿಗೆ ಹೋಗಬೇಕು, ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಪೌಷ್ಠಿಕ ಆಹಾರ ತಯಾರು ಮಾಡಲು ಸರಕಾರದ ನಿದೇರ್ಶನದಂತೆ ಬೆಳಿಗ್ಗೆ ಹಾಲು, ಮಧ್ಯಾಹ್ನ ಬಿಸಿಯೂಟ ಮೊಟ್ಟೆ, ಬಾಳೆಹಣ್ಣು ಈಗೇ ಮಕ್ಕಳ ಪೌಷ್ಠಿಕ ಆಹಾರ ನೀಡಲು ಶುಚಿತ್ವ ಕಾಪಾಡಬೇಕು ಎಂದರು.
ಇನ್ನೂ ಅಕ್ಷರದಾಸೋಹ ಸಹಾಯಕ ಅಧಿಕಾರಿ ತಿಪ್ಪೆಸ್ವಾಮಿ ಮಾತನಾಡಿ, ಅಡುಗೆ ತಯಾರು ಮಾಡುವಾಗ ಸಹಾಯಾಕಿಯರು ಮೊದಲು ತಲೆಗವಸು, ಶುಭ್ರ ಬಟ್ಟೆ, ಈಗೇ ಮೊದಲು ತಾವು ಶುಚಿತ್ವದಿಂದ ಇದ್ದು, ಅಡುಗೆ ತಯಾರಿಸಬೇಕು ಇನ್ನೂ ಗ್ಯಾಸ್ ಬಳಕೆ ಬಗ್ಗೆ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು, ಮಕ್ಕಳನ್ನು ಸಾಲಾಗಿ ಕುರಿಸಿದ ನಂತರವೇ ಊಟ ಬಡಿಸಬೇಕು, ಮೊದಲು ಶಿಕ್ಷಕರು ಆಹಾರ ಪರೀಶಿಲಸಿದ ನಂತರವೇ ಮಕ್ಕಳಿಗೆ ನೀಡಬೇಕು, ಶುದ್ದ ಕುಡಿಯುವ ನೀರು ಬಳಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ದೈಹಿಕ ಶಿಕ್ಷಣದ ಪರೀಕ್ಷಕರಾದ ಶಿವನಾಯ್ಕ್, ಸಂಪನ್ಮೂಲ ವ್ಯಕ್ತಿಗಳಾದ ರಾಧಾ, ಶಿವಣ್ಣ, ನಾಗರಾಜ್, ಅಡುಗೆ ಸಹಾಯಕರು ಇತರರು ಇದ್ದರು.