ಚಳ್ಳಕೆರೆ : ಚಳ್ಳಕೆರೆ ನಗರಸಭೆಯಲ್ಲಿ ಯಾವೋಂದು ಕೆಲಸಗಳು ‌ನಡೆಯುತ್ತಿಲ್ಲ, ಇಲ್ಲಿನ ಪೌರಾಯುಕ್ತರು ಎಲ್ಲೂ ಇಲ್ಲದ ಕಾನೂನು ತೋರುತ್ತಿದ್ದಾರೆ ಎಂದು ನಗರಸಭೆ ಸದಸ್ಯ ವೈ.ಪ್ರಕಾಶ್ ಆರೋಪ ಮಾಡಿದ್ದಾರೆ.

ನಗರದಲ್ಲಿ ‌ಮಾಧ್ಯಮದೊಂದಿಗೆ ಮಾತನಾಡಿದ ಅವರು ನಗರಸಭೆಯಲ್ಲಿ ಸಾರ್ವಜನಿಕರ ಸೇವೆ ಮಾಡಲು ಸಾವಿರಾರು ಮತಗಳಿಂದ ಗೆದ್ದು ಬಂದರು ಇಲ್ಲಿ ಜನಪ್ರತಿನಿಧಿಗಳಿಗೆ ಸರಿಯಾದ ಗೌರವ ಸಿಗುತ್ತಿಲ್ಲ.

ಇನ್ನೂ ಸಾರ್ವಜನಿಕರ ಪಾಡೇನು ಇಲ್ಲಿ ಒಂದು ಇಸ್ವತ್ತು ಕೊಡಲು ತಿಂಗಳುಗಳೇ ಕಳೆದ ಹೋಗುತ್ತವೆ ಇನ್ನು ಪ್ರತಿಯೊಂದು ಇಸ್ವತ್ತುಗೂ ಹೊಸದೊಂದು ಕಾನೂನು ರೂಪಿಸುತ್ತಾರೆ.

ಇಲ್ಲಿನ ಸಾರ್ವಜನಿಕರು, ದಿನ ನಿತ್ಯ ಬಂದು ಕಛೇರಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ, ನಗರ ಹೆಮ್ಮರವಾಗಿ ಬೆಳೆಯುತ್ತಿದೆ ಅದಕ್ಕೆ ತಕ್ಕಂತೆ ರೆವಿನ್ಯೂ ನಗರಸಭೆ ಖಜಾನೆಗೆ ಬರುತ್ತದೆ ಆದರೆ ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ತಾತ್ಸರ ಮನೋಭಾವದಿಂದ ಹಳ್ಳಹಿಡಿಯುತ್ತಿದೆ ಎಂದು ಸಾರ್ವಜನಿಕರು, ಲೇಔಟ್ ಮಾಲೀಕರು ಕಿಡಿಕಾರಿದ್ದಾರೆ.

ಇನ್ನೂ ನಗರಸಭೆಗೆ ಅಧ್ಯಕ್ಷರು ಇಲ್ಲದೆ ಇರುವ ಕಾರಣ ಇಲ್ಲಿನ ಕೆಲಸಗಳಂತು ಕೇಳಬಾರದು ಹಾಗಿದೆ, ಆಡಳಿತಾಧಿಕಾರಿಗಳು ಒಮ್ಮೆಯಾದರೂ ಇಂತಹ ಜಡ್ಡುಗಟ್ಟಿದ ನಗರಸಭೆಗೆ ಪರಿಹಾರ ದೊರಕಿಸುವರೋ ಕಾದು ನೋಡಬೇಕಿದೆ.

ಜಿಲ್ಲಾಧಿಕಾರಿಗಳು ಇಲ್ಲಿನ ಆಡಳಿತಾಧಿಕಾರಿಗಳು ಅದ್ದರಿಂದ ಇಲ್ಲಿನ ಕೆಲಸಗಳು ಕುಂಠಿತವಾಗುತ್ತಿವೆ ಎಂದು ಅಧಿಕಾರಿಗಳು ಜಾಣ ಕುರುಡುತನದಿಂದ ನುಣುಚಿಕೊಳ್ಳುತ್ತಾರೆ ಎಂದು ರೇವಣ್ಣ ಕಿಡಿಕಾರಿದ್ದಾರೆ.

ಇದೇ ಸಂಧರ್ಭದಲ್ಲಿ ನಗರಸಭೆ ಸದಸ್ಯ ಮಲ್ಲಿಕಾರ್ಜುನ, ಶಿವಕುಮಾರ್, ಚಂದ್ರಶೇಖರ್, ತಮ್ಮಣ್ಣ, ಶ್ರೀನಿವಾಸ್, ಪ್ರಸನ್ನ ಇತರರು ಇದ್ದರು.

Namma Challakere Local News
error: Content is protected !!