ಚಿತ್ರದುರ್ಗ
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸ್ವಯಂ ಸೇವಾ ಸಂಸ್ಥೆಗಳು ನಿಯಮಿತವಾಗಿ ಶೈಕ್ಷಣಿಕ, ಪರಿಸರ ಮತ್ತು ನೈರ್ಮಲ್ಯತೆ ಕುರಿತ ಜಾಗೃತಿ ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂದು ಜೋಡಿಚಿಕ್ಕೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಡಶಾಲಾ ಮುಖ್ಯಶಿಕ್ಷಕ ಸೋಮಣ್ಣ ಹೇಳಿದರು
ಚಿತ್ರದುರ್ಗ ತಾಲೂಕು ಕಸಬಾ ಹೋಬಳಿ ವ್ಯಾಪ್ತಿಯ ಜೋಡಿಚಿಕ್ಕೇನಹಳ್ಳಿ ಗ್ರಾಮದ ಸಹಿಪ್ರಾ ಶಾಲಾ ಆವರಣದಲ್ಲಿ ಮಂಗಳವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಚಿತ್ರದುರ್ಗ ಕಲಾ ಕಾಲೇಜಿನ ಸ್ಕೌಟ್ಸ್ ಅಂಡ್ ಗೈಡ್ಸ್ ವಿಭಾಗ, ಗ್ರಾಮದ ಸರ್ಕಾರಿ ಪ್ರೌಢಶಾಲೆ, ಪ್ರಾಥಮಿಕ ಶಾಲೆಯ ವತಿಯಿಂದ ಆಯೋಜಿಸಿದ್ದ ಶೈಕ್ಷಣಿಕ, ಪರಿಸರ ಮತ್ತು ನೈರ್ಮಲ್ಯ ಕುರಿತ ಜಾಗೃತಿ ಕಾರ್ಯಕ್ರವನ್ನು ಉಧ್ಘಾಟಿಸಿ ಮಾತನಾಡಿದರು
ಚಿತ್ರದುರ್ಗ ಕಲಾ ಕಾಲೇಜಿನ ಸ್ಕೌಟ್ಸ್ ಸಂಸ್ಥೆಯ ವತಿಯಿಂದ ನಿಯಮಿತವಾಗಿ ಗಡಿಭಾಗದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಹತ್ತು ಹಲವು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಉತ್ತಮವಾದ ಕಾರ್ಯ ಎಂದು ಶ್ಲಾಘಿಸಿದರು
ಜೆಸಿಹಳ್ಳಿ ಸಹಿಪ್ರಾ ಶಾಲಾ ಮುಖ್ಯಶಿಕ್ಷಕಿ ರೇಣುಕಾ ಮಾತನಾಡಿ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯು ಶಾಲಾ ಹಂತದ ವಿದ್ಯಾರ್ಥಿಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಉದ್ದೇಶ, ಸಮಾಜೋಪಯೋಗಿ ಕಾರ್ಯಗಳ ಕುರಿತು ಮನವರಿಕೆ ಮಾಡಿಕೊಡುತ್ತಿದ್ದಾರೆ ಎಂದರು
ಇದೇ ವೇಳೆ ಪರಿಸರ ಶಿಕ್ಷಣ ಸಮಾಜ ಸೇವೆ, ಆಟಗಳು ರಸಪ್ರಶ್ನೆ ಹೀಗೆ ವಿವಿಧ ಚಟುವಟಿಕೆಗಳನ್ನು ಕೈಗೊಂಡು ವಿಜೇತರಿಗೆ ಬಹುಮಾನ ನೀಡಿದರು
ಸಂದರ್ಭದಲ್ಲಿ ಸ್ಕೌಟ್ಸ್ ಸಂಸ್ಥೆಯ ಸ್ವಯಂ ಸೇವಕ ಚಿದಾನಂದ, ಮುಖ್ಯಶಿಕ್ಷರಾದ ಸೋಮಣ್ಣ, ರೇಣುಕಾ, ಶಿಕ್ಷಕರಾದ ಮಲ್ಲೇಶ, ಮಮತಾ, ವಿಶ್ವನಾಥ, ಕೆಂಚೇಶ್ವರ, ಚಿತ್ರದುರ್ಗ ನಗರದ ಕಲಾ ಕಾಲೇಜಿನ ಸ್ಕೌಟ್ಸ್ ಸಂಸ್ಥೆಯ ಶಿಬಿರಾರ್ಥಿಗಳು ಶಾಲಾ ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು
ಪೋಟೋ (ಪಿಆರ್‌ಪುರ ಜಾಗೃತಿ 28)
ಚಿತ್ರದುರ್ಗ ತಾಲೂಕು ಕಸಬಾ ಹೋಬಳಿ ವ್ಯಾಪ್ತಿಯ ಜೋಡಿಚಿಕ್ಕೇನಹಳ್ಳಿ ಗ್ರಾಮದ ಸಹಿಪ್ರಾ ಶಾಲಾ ಆವರಣದಲ್ಲಿ ಮಂಗಳವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಚಿತ್ರದುರ್ಗ ಕಲಾ ಕಾಲೇಜಿನ ಸ್ಕೌಟ್ಸ್ ಅಂಡ್ ಗೈಡ್ಸ್ ವಿಭಾಗ, ಗ್ರಾಮದ ಸರ್ಕಾರಿ ಪ್ರೌಢಶಾಲೆ, ಪ್ರಾಥಮಿಕ ಶಾಲೆಯ ವತಿಯಿಂದ ಆಯೋಜಿಸಿದ್ದ ಶೈಕ್ಷಣಿಕ, ಪರಿಸರ ಮತ್ತು ನೈರ್ಮಲ್ಯ ಕುರಿತ ಜಾಗೃತಿ ಕಾರ್ಯಕ್ರವನ್ನು ಜೆಸಿಹಳ್ಳಿ ಪ್ರೌಢಶಾಲಾ ಮುಖ್ಯಶಿಕ್ಷಕ ಸೋಮಣ್ಣ ಉಧ್ಘಾಟಿಸಿದರು ಮುಖ್ಯಶಿಕ್ಷಕಿ ರೇಣುಕಾ, ಶಿಕ್ಷಕರಾದ ಮಲ್ಲೇಶ, ಮಮತಾ, ವಿಶ್ವನಾಥ, ಕೆಂಚೇಶ್ವರ, ಚಿತ್ರದುರ್ಗ ನಗರದ ಕಲಾ ಕಾಲೇಜಿನ ಸ್ಕೌಟ್ಸ್ ಸಂಸ್ಥೆಯ ಶಿಬಿರಾರ್ಥಿಗಳು ಶಾಲಾ ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು