ನಾಯಕನಹಟ್ಟಿ:: ಹೋಬಳಿ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮಸಾಗರ ಗ್ರಾಮದಲ್ಲಿ ಪ್ರತಿವರ್ಷದ ಸಾಂಪ್ರದಾಯದಂತೆ ಈ ಬಾರಿ ಸಹ ಮಂಗಳವಾರ ಶ್ರೀ ಶ್ರೀ ಗಾದ್ರಿಪಾಲನಾಯಕ ಸ್ವಾಮಿಯ ದೀವಳಿಗೆ ಹಬ್ಬ ಧೂಳೆ ಪಾಂಡುವ ಜಾತ್ರಾ ಮಹೋತ್ಸವ ಸಂಭ್ರಮ ಸಡಗರದಿಂದ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು..
ಮ್ಯಾಸನಾಯಕರ ಬುಡಕಟ್ಟು ಸಂಸ್ಕೃತಿಯ ಆಚರಣೆಯಂತೆ
ಮಂಗಳವಾರ ಗಟ್ಟಿ ಮುತ್ತಪ್ಪ ನಾಯಕ ವಂಶಸ್ಥರು ರಾಮಸಾಗರ ಚೌಳಕೆರೆ ಸೂರಮನಹಳ್ಳಿ ಹಾಗೂ ಎಲ್ಲಾ ಅಣ್ಣತಮ್ಮಂದಿರು ಸೇರಿ ರಾಮಸಾಗರ ಗ್ರಾಮದಲ್ಲಿ ಸಂಜೆ ನಾಲ್ಕು ಗಂಟೆ ವೇಳೆಗೆ ದೇವರ ಎತ್ತುಗಳನ್ನ ಗ್ರಾಮಕ್ಕೆ ಕರೆತಂದು ಶ್ರೀ ಗಾದ್ರಿಪಾಲನಾಯಕ ಸ್ವಾಮಿಯ ದೀವಳಿಗೆ ಹಬ್ಬ ಪ್ರಯುಕ್ತ ವಿಶೇಷವಾಗಿ ದೇವಸ್ಥಾನದಲ್ಲಿ ಶ್ರೀ ಗಾದಿ ಪಾಲನಾಯಕ ಸ್ವಾಮಿಯ ಪೂಜಾ ಕೈ ಕಾರ್ಯಗಳನ್ನ ನೆರವೇರಿಸಿ ನಂತರ ಆವರಣದಲ್ಲಿ ದೇವರ ಎತ್ತುಗಳನ್ನು ಓಡಿಸಲಾಯಿತು ಮಣಿವು ಕಾರ್ಯ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಗಟ್ಟಿ ಮುತ್ತಪ್ಪ ನಾಯಕ ವಂಶಸ್ಥರು ರಾಮಸಾಗರ ಚೌಳಕೆರೆ ಸೂರಮನಹಳ್ಳಿ ಹಾಗೂ ಎಲ್ಲಾ ಅಣ್ಣ ತಮ್ಮಂದಿರು ಸಮಸ್ತ ರಾಮಸಾಗರ ಗ್ರಾಮಸ್ಥರು ಇದ್ದರು