ಚಳ್ಳಕೆರೆ
ಬೆಳಕಿನ ಹಬ್ಬ ದೀಪಾವಳಿಯಲ್ಲಿ ರಾಷ್ಟ್ರಧ್ವಜದ ಬಣ್ಣಗಳಿಂದ ಎತ್ತುಗಳನ್ನು ಅಲಂಕರಿಸಿದ ರೈತ ಮಂಜುನಾಥ
ಚಳ್ಳಕೆರೆ : ಬೆಳಕಿನ ಹಬ್ಬ ದೀಪಾವಳಿಯನ್ನು ಗ್ರಾಮೀಣ ಭಾಗಗಳಲ್ಲಿ ಒಂದು ತಿಂಗಳುಗಳ ಕಾಲ ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಾರೆ. ಈ ಬಾರಿಯ ದೀಪಾವಳಿ ಹಬ್ಬವನ್ನು ಚಳ್ಳಕೆರೆ ತಾಲೂಕಿನ ಸಾಣಿಕೆರೆ ಗ್ರಾಮದ ರೈತನದ ಮಂಜುನಾಥ ಅವರು ತಮ್ಮ ಎತ್ತುಗಳಿಗೆ ರಾಷ್ಟ್ರಧ್ವಜದ ಬಣ್ಣಗಳಾದ ಕೇಸರಿ, ಬಿಳಿ, ಹಸಿರು, ಎಂಬ ಹೂಗಳಿಂದ ಅಲಂಕಾರವನ್ನು ಮಾಡಿದ್ದು ಅದರ ಜೊತೆಯಲ್ಲಿ ಕೇಸರಿ ಬಿಳಿ ಹಸಿರು ಎಂಬ ಬಲೂನುಗಳನ್ನು ಕಟ್ಟಿ ಎತ್ತುಗಳನ್ನು ಸಿಂಗಾರ ಮಾಡಿ ದೀಪಾವಳಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಿದ್ದಾರೆ.
ಈ ಬಾರಿಯ ದೀಪಾವಳಿ ಹಬ್ಬದಲ್ಲಿ ರಾಷ್ಟ್ರ ಧ್ವಜದ ಬಣ್ಣಗಳಿಂದ ಅಲಂಕಾರಗೊಂಡ ಎತ್ತುಗಳನ್ನು ನೋಡಲು ಗ್ರಾಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಎತ್ತುಗಳನ ನೋಡಿ ಅದರ ಜೊತೆ ಫೋಟೋವನ್ನು ತೆಗೆಸಿಕೊಳ್ಳಲು ಮುಗಿ ಬಿದ್ದರು. ಕೇಸರಿ ಬಿಳಿ ಹಸಿರು ಬಣ್ಣಗಳಿಂದ ಅಲಂಕಾರಗೊಂಡಿದ್ದ ಎತ್ತುಗಳು ಈ ಬಾರಿಯ ದೀಪಾವಳಿಯಲ್ಲಿ ಆಕರ್ಷಣೆಯಾಗಿ ಗಮನ ಸೆಳೆದವು.