ವಿವಿಧ ಬೇಡಿಕೆಗಳನ್ನು ಈಡೇರಿಕೆಗಾಗಿ ಆಗ್ರಹಿಸಿ ರೈತ ಸಂಘದಿಂದ ಬೃಹತ್ ಪ್ರತಿಭಟನೆ,,,,,,
,,, ಚಳ್ಳಕೆರೆ,,
ರೈತರ ಸಾಲ ಮನ್ನಾ ಕೃಷಿ ಪಂಶೆಟ್ಟುಗಳಿಗೆ ೮ ಗಂಟೆ ವಿದ್ಯುತ್ ಸರಬರಾಜು, ಬರ ಪರಿಹಾರ, ಕೃಷಿಕರ ಬೆಳೆ ವಿಮೆ, ಬೆಳೆ ಪರಿಹಾರ, ಹಾಗೂ ಪುರುಶಾಂಪುರ ಹೋಬಳಿಯ ಚೋಳೂರು ಮಾರ್ಗದಲ್ಲಿ ಸೂರನಹಳ್ಳಿ ,ಒಡೆಯರಹಳ್ಳಿ, ಇನ್ನು ಅನೇಕ ಗ್ರಾಮಗಳಿಗೆ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗಲು ಬಸ್ಸಿನ ಸೌಕರ್ಯವಿಲ್ಲದೆ
ಪರದಾಡುತ್ತಿದ್ದಾರೆ ,,,,,
ಇ ಎಲ್ಲಾ ಸೌಲಭ್ಯಗಳನ್ನು ರೈತರಿಗೆ ರಾಜ್ಯ ಸರ್ಕಾರ ಸೌಲಭ್ಯಗಳನ್ನು ಒದಗಿಸಿ ಕೊಡಬೇಕೆಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ, ಸೋಮ ಗುಡ್ಡು ರಂಗಸ್ವಾಮಿ ಆಕ್ರೋಶ ಹೊರಹಾಕಿದರು,,,,
ಇವರು ನಗರದ ಚಳ್ಳಕೆರೆಮ್ಮ ದೇವಸ್ಥಾನದಿಂದ ನೆಹರು ಸರ್ಕಲ್ ಗೆ ಬಂದು ಮಾನವ ಸರ್ಪಳಿ ರಚಿಸಿ ರಸ್ತೆ ತಡೆ ನಡೆಸಿ ಮಾತನಾಡಿದ ಇವರು,,,,
ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ರೈತರು ದೇಶದ ಬೆನ್ನೆಲುಬು ಎಂದು ಘಂಟಾಘೋಷವಾಗಿ ಹೇಳುತ್ತಾರೆ,,,,,
ಆದರೆ ರೈತರಿಗೆ ಯಾವುದೇ ಸೌಲಭ್ಯ ಕೊಡದೆ ರೈತರ ಬೆನ್ನೆಲುಬನ್ನು ಇಂದಿನ ಸರ್ಕಾರ ಮುರಿಯುತ್ತಿದೆ,,,,
ಕಳೆದ ವರ್ಷ ಅತಿವೃಷ್ಟಿ ಅನಾವೃಷ್ಟಿಯಿಂದ ರೈತಾಪಿ ವರ್ಗವು ಬೆಳೆ ಹಾನಿ ಮಾಡಿಕೊಂಡು ಬೆಳೆ ಪರಿಹಾರ, ಬೆಳೆ ವಿಮೆ, ಬ್ಯಾಂಕಿಗೆ ಸಾಲ ಕಟ್ಟದೇ ಜನರ ಹತ್ತಿರ ಕೈ ಸಾಲ ಮಾಡಿ ರೈತರು ನೇಣಿಗೆ ಶರಣಾಗುತ್ತಿದ್ದಾರೆ,,,,,,
ದೇಶದಲ್ಲಿ ರೈತ ಬೆಳೆದರೆ ಮಾತ್ರ ಅನ್ನ ಸಿಗಲು ಸಾಧ್ಯ ಇದನ್ನು ಅರಿಯದ ಸರ್ಕಾರ ರೈತರ ಹೆಗಲನ್ನು ಮುರಿಯುತ್ತಿದ್ದಾರೆ,,
ರೈತರಿಗೆ ಸೂಕ್ತವಾದ ಬೆಳೆ ವಿಮೆ ಪರಿಹಾರ ಬರ ಪರಿಹಾರ ವಿದ್ಯುತ್ ಸೌಕರ್ಯ ಜಾನುವಾರುಗಳಿಗೆ ಮೇವು ನೀರು ಸಕಾಲಕ್ಕೆ ಕೊಡದಿದ್ದರೆ ಇನ್ನು ಉಗ್ರವಾಗಿ ಪ್ರತಿಭಟಿಸಲಾಗುವುದು ಎಂದು ರೈತ ಸಂಘದ ಮುಖಂಡ
ಕೆಲ ಹೊತ್ತು ಟ್ರಾಫಿಕ್ ಜಾಮ್ ಆಗಿತ್ತು ,ತಾಲೂಕ ಕಚೇರಿಯ ಸಿರಸ್ದಾರ್ ಮನವಿ ಪತ್ರ ಸ್ವೀಕರಿಸಿದರು,
ಇನ್ನೂ ಈ ಪ್ರತಿಭಾಭಟನಾ ಸಮಯದಲ್ಲಿ ತಾಲೂಕು ಅಧ್ಯಕ್ಷ ಕೆ ,ಚಿಕ್ಕಣ್ಣ ,ತಾಲೂಕು ಉಪಾಧ್ಯಕ್ಷ ಜಂಪಣ್ಣ ,ತಾಲೂಕು ಗೌರವಾಧ್ಯಕ್ಷ ಕೃಷ್ಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಹನುಮಂತಪ್ಪ, ಶಾಂತಣ್ಣ, ಖಾದರ್ ಭಾಷಾ, ನಾಗೇಂದ್ರಪ್ಪ ,ಗಿರೀಶ್ ರೆಡ್ಡಿ, ಅಣ್ಣಪ್ಪ, ನವೀನ್ ಗೌಡ, ಸೇರಿದಂತೆ ಅನೇಕ ರೈತ ಮುಖಂಡರು ಹಾಜರಿದ್ದರು,,,,