ಚಳ್ಳಕೆರೆ:: ನಾಯಕನಹಟ್ಟಿ ಯೋಜನೆ ಕಚೇರಿ ವ್ಯಾಪ್ತಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ, ಕಾರ್ಯಕ್ರಮವನ್ನು.
ನಗರದ ಶ್ರೀ ಸಾಯಿ ಮಂದಿರ, ಚಳ್ಳಕೆರೆಯಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಪುಷ್ಪ ಸಂಜೀವ ಮೂರ್ತಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಮಧುರ. ಮಹಿಳೆ ಮತ್ತು ಮಕ್ಕಳ ಸಂರಕ್ಷಣೆ ಹಾಗೂ ಕಾನೂನು ಅರಿವಿನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದರು..

ತಾಲೂಕು ಯೋಜನಾಧಿಕಾರಿ ಶ್ರೀಯುತ ಪಿ ಎಸ್ ಅಣ್ಣಪ್ಪ ಮಾತನಾಡಿ ಜ್ಞಾನವಿಕಾಸ ಕಾರ್ಯಕ್ರಮದಿಂದ ಮಹಿಳೆಯರು ಸಬಲೀಕರಣ ಆಗುತ್ತಿರುವುದು ಸಂತೋಷ ತಂದಿದೆ ಎಂದರು.

ಇದೇ ಸಂದರ್ಭದಲ್ಲಿ ಕೆ ಎಂ ತಿಪ್ಪೇಸ್ವಾಮಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು, ನಲಗೇತನಹಟ್ಟಿ ಪತ್ರಕರ್ತ ಕೆ ಟಿ ಓಬಳೇಶ್, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶ್ರೀಮತಿ ಪಿ .ಯಶೋಧ ಹಾಗೂ ನಾಯಕನಹಟ್ಟಿ ತಾಲೂಕಿನ ಎಲ್ಲಾ ಮೇಲ್ವಿಚಾರಕ ವರ್ಗದ ಸಿಬ್ಬಂದಿಗಳು ಸೇವಾ ಪ್ರತಿನಿಧಿಗಳು ಹಾಗೂ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Namma Challakere Local News
error: Content is protected !!