ಎನ್ ಮಹದೇವಪುರ ರೇಷ್ಮೆ ತೋಟಕ್ಕೆ. ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ್ಯದರ್ಶಿ ಡಾ.ಶಮ್ಲಾಇಕ್ಬಾಲ್ ಭೇಟಿ.
ನಾಯಕನಹಟ್ಟಿ:: ರೇಷ್ಮೆಯಲ್ಲಿ ಉತ್ತಮ ಆದಾಯವನ್ನು ಗಳಿಸಬಹುದು ಎಂದು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್ ಹೇಳಿದ್ದಾರೆ.
ಅವರು ಸೋಮವಾರ ಹೋಬಳಿಯ ಎನ್ ಮಹದೇವಪುರ ಗ್ರಾಮದ ಬಸಯ್ಯ ಬಿನ್ ದಾಸರ ಓಬಯ್ಯ ರವರ ರೇಷ್ಮೆ ಹುಳ ಸಾಕಾಣಿಕೆ ಮನೆ ಹಾಗೂ ಹಿಪ್ಪು ನೇರಳೆ ತೋಟಕ್ಕೆ ಭೇಟಿ ನೀಡಿ ರೇಷ್ಮೆ ಬೆಳೆಗಾರರ ಕುರಿತು ಮಾತನಾಡಿದ್ದಾರೆ. ರೇಷ್ಮೆ ಹುಳ ಸಾಕಾಣಿಕೆಯಲ್ಲಿ ಉತ್ತಮ ಆದಾಯವನ್ನು ಗಳಿಸಬಹುದು ಈ ಭಾಗದಲ್ಲಿ ರೇಷ್ಮೆಗೆ ಫಲವತ್ತತೆಯ ಭೂಮಿ ಇದೆ ಅಂತಹ ಭೂಮಿಯಲ್ಲಿ ರೈತರು ರೇಷ್ಮೆ ಹುಳ ಸಾಕುವುದರ ಜೊತೆಗೆ ಹಿಪ್ಪು ನೇರಳೆ ಸಾಕಾಣಿಕೆಯ ಮಾಡುವುದು ಉತ್ತಮ ಆದಾಯವನ್ನು ಗಳಿಸಬಹುದು ಎಂದು ರೇಷ್ಮೆ ಬೆಳೆಗಾರರಿಗೆ ಮನವರಿಕೆ ಮಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು , ಜಿಲ್ಲಾ ಉಪ ವಿಭಾಗಾಧಿಕಾರಿ ಎಂ ಕಾರ್ತಿಕ್, ತಹಶೀಲ್ದಾರ್ ರೇಹಾನ ಪಾಷಾ, ಜಿಲ್ಲಾ ಪಂಚಾಯತ್ ಚಿತ್ರದುರ್ಗ ರೇಷ್ಮಾ ಉಪ ನಿರ್ದೇಶಕರಾದ ಶ್ರೀ ಮಾರಪ್ಪ ಹಾಗೂ ರೇಷ್ಮೆ ಸಹಾಯಕ ನಿರ್ದೇಶಕ ಡಿ ಮೋಹನ್, ನಾಯಕನಹಟ್ಟಿ ನಾಡಕಚೇರಿಯ ರಾಜಸ್ವ ನಿರೀಕ್ಷಕ ಚೇತನ್ ಕುಮಾರ್, ಚಳ್ಳಕೆರೆ ರೇಷ್ಮೆ ನಿರೀಕ್ಷಕ ಡಿ ಟಿ ಬೋರಯ್ಯ, ರೇಷ್ಮೆ ಬೆಳೆಗಾರರಾದ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಿ.ನಾಗರಾಜ್, ಬಿ ಗುಂಡು ಬೋರಯ್ಯ, ಶ್ರೀನಿವಾಸ್, ಬಿ ಶಾಂತರಾಜ್, ಡಿ ತಮ್ಮಣ್ಣ, ವಲಸೆ ನಾಗಣ್ಣ, ಬಿ ಬೋರಣ್ಣ, ಎಂ ಬಾಬು ಸ್ವಾಮಿ ,ಸೇರಿದಂತೆ ಇದ್ದರು