ನಾಯಕನಹಟ್ಟಿ:: ವಲಯದ ಹಬ್ಬೇನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂತು ಕೊಲ್ಲಮ್ಮನಹಳ್ಳಿ ಗ್ರಾಮದ ಶ್ರೀ ಗಾದ್ರಿ ಪಾಲನಾಯಕ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಒಂದು ಲಕ್ಷ ಡಿಡಿ ವಿತರಣಾ ಕಾರ್ಯಕ್ರಮ*
ತಾಲೂಕಿನ ಯೋಜನಾಧಿಕಾರಿ ಅಣ್ಣಪ್ಪ ಪಿ ಎಸ್ ಅವರು ಕ್ಷೇತ್ರದಿಂದ ಬಹಳ ಹಿಂದಿನಿಂದಲೂ ದಾನ ಧರ್ಮಗಳನ್ನು ಮಾಡುತ್ತಾ ಬಂದಿದ್ದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗ್ರಾಮಗಳ ಸರ್ವಾಂಗಿನ ಅಭಿವೃದ್ಧಿಯ ಉದ್ದೇಶದಿಂದ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಹಾಗೂ ಹಾಲಿನ ಸೊಸೈಟಿಗಳ ನಿರ್ಮಾಣಕ್ಕೆ ಕ್ಷೇತ್ರದಿಂದ ಅನುದಾನವನ್ನು ನೀಡುವುದಾಗಿ ತಿಳಿಸಿದರು.

ಮುಂದುವರೆದು ಗ್ರಾಮ ಮಟ್ಟಗಳಲ್ಲಿ ಸ್ವಸಹಾಯ ಸಂಘಗಳನ್ನ ರಚನೆ ಮಾಡಿ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಬ್ಯಾಂಕುಗಳ ಮುಖಾಂತರ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ಕೊಡಿಸುವುದರ ಮುಖಾಂತರ ಮಹಿಳೆಯರ ಸ್ವಾವಲಂಬಿ ಬದುಕು ಹಾಗೂ ಸ್ವ ಉದ್ಯೋಗ ಮಾಡಲು ಸಹಕಾರಿ ಯಾಗಿದೆ ಸಂಘಗಳ ಸದಸ್ಯರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ವಿಮಾ ಕಾರ್ಯಕ್ರಮ ಮಾಡುತ್ತಿದ್ದು ಜೊತೆಯಲ್ಲಿ ಪ್ರಗತಿ ಬಂದು ಸ್ವಸಹಾಯ ಸಂಘಗಳ ಮಕ್ಕಳ ವೃತ್ತಿಪರ ಶಿಕ್ಷಣಕ್ಕೆ ಪ್ರತಿ ತಿಂಗಳು ಸುಜ್ಞಾನ ನಿಧಿ ಶಿಷ್ಯ ವೇತನವನ್ನು ನೀಡುವುದರ ಕುರಿತು ಮಾಹಿತಿ ನೀಡಿದರು.

ಇದೇ ವೇಳೆ ಚಿತ್ರದುರ್ಗ ಜಿಲ್ಲಾ ಆಪ್ ಕಾಮನ ಅಧ್ಯಕ್ಷ ಎಂ ವೈ ಟಿ ಸ್ವಾಮಿ ಅವರು ಮಾತನಾಡಿ ಧರ್ಮಸ್ಥಳದ ಧರ್ಮಾಧಿಕಾರಿಗಳ ಬಳಿ ಯಾವುದೇ ಸಹಾಯ ಕೇಳಿಕೊಂಡು ಹೋದರು ಇಲ್ಲ ಎನ್ನುವ ಮಾತೇ ಅವರ ಬಳಿ ಬರುವುದಿಲ್ಲ ಏನಾದರೂ ಸಹಾಯ ಮಾಡಿ ಕಳಿಸುತ್ತಾರೆ ಇಡೀ ರಾಜ್ಯದ್ಯಂತ ಸುಮಾರು 6 ಲಕ್ಷ ಸಂಘಗಳನ್ನ ರಚನೆ ಮಾಡಿಕೊಂಡಿದ್ದು ಸದಸ್ಯರಿಗೆ ಉತ್ತಮವಾದ ಮಾಹಿತಿ ನೀಡುತ್ತಾ ಮಹಿಳೆಯರು ಆರ್ಥಿಕವಾಗಿ ಸಫಲರಾಗುವಂತೆ ಮಾಹಿತಿ ನೀಡುತ್ತಿದ್ದಾರೆ ಮುಂದುವರೆದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಒಂದು ದೇವಸ್ಥಾನಕ್ಕೆ ಮಂಜೂರಾದ ಒಂದು ಲಕ್ಷದ ಮೊತ್ತವನ್ನ ತಾಲೂಕಿನ ಯೋಜನಾಧಿಕಾರಿಗಳಾದ ಅಣ್ಣಪ್ಪ ಪಿ ಎಸ್ ಹಾಗೂ ಚಿತ್ರದುರ್ಗ ಜಿಲ್ಲಾ ಆಪ್ ಕಮ್ ನ ಅಧ್ಯಕ್ಷರಾದ ಎಂ ವೈ ಟಿ ಸ್ವಾಮಿ ಅವರು ಶ್ರೀ ಗಾದ್ರಿ ಪಾಲನಾಯಕ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಡಿಡಿ ಯನ್ನು ವಿತರಣೆ ಮಾಡಿದರು.

ಇದೇ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಸಂತೋಷ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಪಾಪಮ್ಮ ಆನಂದಪ್ಪ, ಶ್ರೀ ಗಾದ್ರಿ ಪಾಲನಾಯಕ ದೇವಸ್ಥಾನದ ಅಧ್ಯಕ್ಷೆ. ಟಿ ಮಂಜುನಾಥ್, ಉಪಾಧ್ಯಕ್ಷರು ರಾಮಚಂದ್ರಪ್ಪ, ಕಾರ್ಯದರ್ಶಿ ಕಿಲಾರಿ ಪಾಪಣ್ಣ, ಪೂಜಾರಿ ಬೋರಯ್ಯ,ಜಿ ಪಿ ಪಾಲಯ್ಯ, ಬಿ ಪ್ರಕಾಶ್ ಪಾಪಯ್ಯ ಹಾಗೂ ಊರಿನ ಮುಖಂಡರುಗಳು ಶರಣಪ್ಪ ಪಾಲಯ್ಯ ಅನಿತಮ್ಮ ಹಾಗೂ ಗ್ರಾಮಸ್ಥರು ಹಾಗೂ ಸೇವಾ ಪ್ರತಿನಿಧಿ ಹೇಮಾವತಿ ಭಾಗವಹಿಸಿದ್ದರು

About The Author

Namma Challakere Local News
error: Content is protected !!