ಚಳ್ಳಕೆರೆ : ಚಿಕ್ಕ ವಯಸ್ಸಿನಲ್ಲೆ ದೇಶದ ಹೆಮ್ಮೆಯ ಮಹಾತ್ಮರನ್ನು ಗುರುತಿಸುವ ಕೆಲಸವಾಗಬೇಕು ಮಹಾತ್ಮರ ಹಾದಿಯಲ್ಲಿ ಮಕ್ಕಳು ಸಾಗಬೇಕು, ಅವರ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ದೊಡ್ಢೇರಿ ಗ್ರಾಪಂ ಅಧ್ಯಕ್ಚ ಜಿ.ಎನ್.ವೆಂಕಟೇಶ್ ಹೇಳಿದರು.
ಅವರು ತಾಲೂಕಿನ ದೊಡ್ಡೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರಾಷ್ಟ್ರನಾಯಕರ ಪೋಟೊಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿದರು. ಶಿಕ್ಷಕರು ಮಕ್ಕಳಿಗೆ ಕೇವಲ ಮಾತಿನಲ್ಲಿ ಹೇಳಿದರೆ ಸಲಾದು ಬದಲಾಗಿ ಅವರ ಭಾವಚಿತ್ರದೊಂದಿಗೆ ಮಕ್ಕಳಿಗೆ ರಾಷ್ಟ್ರ ನಾಯಕರು ದೇಶಕ್ಕಾಗಿ ಮಾಡಿದ ತ್ಯಾಗ ಬಲಿದಾನಗಳ ನೆನಪು ಮಾಡುವಂತಾಗಬೇಕು ಎಂದರು.
ಇನ್ನೂ ಈದೇ ಸಂಧರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕ ನಾಗರಾಜ್ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ, ದೇಶಕ್ಕಾಗಿ ಹೋರಾಟ ಮಾಡಿದ ವೀರ ಯೋಧರು ಹಾಗೂ ಶಾಂತಿ ಸಂಕೇತವಾಗಿ ಸ್ವಾತಂತ್ರö್ಯ ತಂದು ಕೊಟ್ಟ ಮಹಾನೀಯರ ಭಾವಚಿತ್ರಗಳನ್ನು ಮಕ್ಕಳಿಗೆ ಕಾಣುವಾಗೆ ಪ್ರದರ್ಶಿಸಿದರೆ ಇತಿಹಾಸದ ಬಗ್ಗೆ ತಿಳಿಸಲು ಸಹಕಾರಿಯಾಗಲಿದೆ ಇನ್ನೂ ಇಂತಹ ಮಹಾನೀಯರ ಭಾವಚಿತ್ರಗಳನ್ನು ಕೊಡುಗೆ ನೀಡಿದ ಗ್ರಾಪಂ.ಅಧ್ಯಕ್ಷ ಜಿ.ಎನ್.ವೆಂಕಟೇಶ್ ಸೇವೆ ಅನನ್ಯ ಇಂತಹ ದೇಶ ಭಕ್ತರ ಭಾವಚಿತ್ರಗಳನ್ನು ಮಕ್ಕಳಿಗೆ ನೀಡಿರುವುದು ಶ್ಲಾಘನೀಯ ಎಂದರು.
ಈದೇ ಸಂಧರ್ಭದಲ್ಲಿ ಸಿಆರ್‌ಪಿ ರಾಧಾ ಶಾಲಾ ಸಹಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

Namma Challakere Local News

You missed

error: Content is protected !!