ಚಳ್ಳಕೆರೆ : ನಮ್ಮ ಪಕ್ಷ ಬಿ.ವೈ.ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಅವಕಾಶ ಮಾಡಿಕೊಟ್ಟಿದೆ, ವಿಜಯೇಂದ್ರರನ್ನು ನಾನು ಕಳೆದ ಮೂವತ್ತು ವರ್ಷಗಳಿಂದ ನೋಡಿದ್ದೆನೆ ಅವರ ದುಖಃದಲ್ಲಿ ಹಾಗೂ ಸುಖದಲ್ಲಿ ಹತ್ತಿರದಿಂದ ಕಂಡಿದ್ದೆನೆ, ಮುಖ್ಯಮಂತ್ರಿ ಮಗ ಅಂತ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ದೊರೆತಿಲ್ಲ, ಬದಲಾಗಿ ರಾಜ್ಯದಲ್ಲಿ ಒಳ್ಳೆಯ ನಾಯಕತ್ವ ಗುಣಗಳು ಇರುವುದರಿಂದ ಅವರಿಗೆ ಹೊದಗಿ ಬಂದಿದೆ ಎಂದು ಚಿತ್ರದುರ್ಗದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು ಪಾರ್ಟಿ ಜಾವಾಬ್ದಾರಿ ಸ್ಥಾನ ನೀಡಿದೆ, ಅವರ ನಾಯಕತ್ವದಲ್ಲಿ ಪಕ್ಷದಲ್ಲಿ ಅನೇಕ ಜಾವಬ್ದಾರಿ ಕೆಲಸಗಳನ್ನು ಮಾಡಿಕೊಂಡು ಬಂದಾಗ ಪಕ್ಷ ಅವರನ್ನು ಗುರುತಿಸಿ ಸ್ಥಾನ ನೀಡಿದೆ ಎಂದರು.