ಚಳ್ಳಕೆರೆ: ತಾಲ್ಲೂಕಿನ ಮೈಲನಹಳ್ಳಿಯಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಹಲವು ಮನೆಗಳಲ್ಲಿ ನೋಪಿ ಗೌರಿಯನ್ನ ಪ್ರತಿಷ್ಠಾಪಿಸಿ ಸಂಭ್ರಮದಿAದ ಹಬ್ಬವನ್ನ ಆಚರಿಸಿದರು.
ಅಮಾವಾಸ್ಯೆಯ ಮೊದಲ ದಿನವಾದ ಭಾನುವಾರ ಸಂಜೆ ತಳೀರು-ತೋರಣ, ಚೆಂಡು ಹೂಗಳಿಂದ ಅಲಂಕೃತಗೊAಡ ಮಂಟಪದಲ್ಲಿ ನೊಂಪಿ ಗೌರಿಯ ಕಳಸವನ್ನು ಒಡವೆ ವಸ್ತ್ರಗಳು, ವಿಶೇಷ ಹೂವುಗಳಿಂದ ಅಲಂಕರಿಸಿ, ಪ್ರತಿಷ್ಠಾಪಿಸಿ, ಕುಟುಂಬ ಸದಸ್ಯರೆಲ್ಲರೂ ಸೇರಿ ಪೂಜಿಸಿದರು. ನಂತರ ಗುರುಗಳ ಪಾದಪೂಜೆಯನ್ನು ನೆರವೇರಿಸಿದರು.
ಹಬ್ಬದ ಎರಡನೇ ದಿನವಾದ ಸೋಮವಾರ ಮುಂಜಾನೆ ಕೇದಾರೇಶ್ವರ ವ್ರತ, ಜಗನ್ಮಾಥೆ ದೇವಿರಮ್ಮ ದೇವಿಯ ಆರಾಧನೆ ಪ್ರಯುಕ್ತ, ಚಿಗಳಿ-ತಂಬಿಟ್ಟುಗಳ ಮಹಾ ಆರತಿ, ತುಂಬೆ ಹೂವಿನ ಅಲಂಕಾರ ಮಂಗಲಾರುತಿ ನಡೆಯಿತು. ಸಂಜೆ ಗ್ರಾಮದ ಚನ್ನವೀರಪ್ಪ, ಗೌಡ್ರು ಬಸವರಾಜಪ್ಪ, ಬಸೆಟಪ್ಪರ ತಿಪ್ಪೇಸ್ವಾಮಿ ಯವರ ಮನೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ನೋಪಿಗೌರಿಯನ್ನ ಸರಳ – ಸಾಮೂಹಿಕವಾಗಿ ಮೆರವಣಿಗೆ ಮೂಲಕ ಗ್ರಾಮದ ಹೊರವಲಯದ ನೀರು ಸಂಗ್ರಹವಿದ್ದ ತೊಟ್ಟಿಯಲ್ಲಿ ಮಹಾ ಮಂಗಳಾರತಿ ನಡೆಸಿ ವಿಸರ್ಜನೆ ಮಾಡಲಾಯಿತು.
ಸರಳ ಮೆರವಣಿಗೆಯಲ್ಲಿ ಮೈಲನಹಳ್ಳಿ ದಿನೇಶ್, ಅಶೋಕ್, ಸತೀಶ್, ಗೌಡ್ರು ಕರಿಬಸವರಾಜ್, ಭರತ್ ಪಟೇಲ್, ವಸಂತ್, ಬಸವರಾಜ್, ಜಯಚಂದ್ರಪ್ಪ, ಅಭಿಲಾಷ್, ತ್ಯಾಗರಾಜ್, ದರ್ಶನ್, ನಿಖಿಲ್, ಈಶ್ವರಪ್ಪ, ಸೇರಿದಂತೆ ಗಂಡು ಹೆಣ್ಣುಮಕ್ಕಳು ಸಮನಾಗಿ ಭಾಗವಹಿಸಿದರು.