ಚಳ್ಳಕೆರೆ : ಪೌರಕಾರ್ಮಿಕರ ಮಾದರಿಯಲ್ಲಿ ನೇರಪಾವತಿಗೊಳಪಡಿಸಲು ಆಗ್ರಹಿಸಿ ನ.15 ರಂದು ರಾಜ್ಯಾದ್ಯಂತ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಧರಣಿ ಮಾಡುವ ಅಂಗವಾಗಿ ಇಂದು ಪೌರಕಾರ್ಮಿಕರು ಪೌರಾಯುಕ್ತ ಸಿ.ಚಂದ್ರಪ್ಪಗೆ ಮನವಿ ಮಾಡಿದರು.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಚುನಾವಣಾ ಪ್ರಣಾಳಿಕೆ ಘೊಷಣೆ ಯಲ್ಲಿ ಮೊದಲ ಹಂತವಾಗಿ ಪೌರಕಾರ್ಯಮಿಕರ ಸಂಕಷ್ಟಕ್ಕೆ ದಾವಿಸುವುದು ಎಂದು ಘೋಷಿಸಿತು ಆದರೆ ಈವರೆಗೆ ಹೊರಗುತ್ತಿಗೆ ಪೌರ ಕಾರ್ಮಿಕರ ಬಗ್ಗೆ ಗಮನಹರಿಸಿಲ್ಲ. ಕನಿಷ್ಠ ಜೀವನ ನಡೆಸುವ ಪೌರಕಾರ್ಮಿಕರ ರಕ್ಷಣೆಗೆ ದಾವಿಸಬೇಕು ಎಂದು ಜಿಲ್ಲಾ ಉಸ್ತೂವಾರಿ ಮಂತ್ರಿಗಳ ಕಛೇರಿ ಎದುರು ಧರಣಿ ನಡೆಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನಗರಸಭೆ ಹೊರಗುತ್ತಿಗೆ ನೌಕರ ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸ್, ಪೆನ್ನೇಶ್ ಮಂಜುನಾಥ್, ಮಹೇಶ್, ಪ್ರಭು ದಿವಾಕರ್, ತಿಪ್ಪೇಸ್ವಾಮಿ, ನಾಗರಾಜ್ ಇತರರು ಪಾಲ್ಗೊಂಡಿದ್ದರು