ಆಧುನಿಕ ಕಾಲಘಟ್ಟಕ್ಕೆ ಅನುಗುಣವಾಗಿ ಪಠ್ಯ ಸಹಪಠ್ಯ ಬೋಧನೆಗೆ ಪೂರಕವಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸರ್ಕಾರ ಆಯ್ಕೆ ಮಾಡಿಕೊಳ್ಳುತ್ತಿದೆ ಎಂದು ಜೆಸಿಹಳ್ಳಿಗೊಲ್ಲರಹಟ್ಟಿ ಸಹಿಪ್ರಾ ಶಾಲಾ ಪ್ರಭಾರಿ ಮುಖ್ಯಶಿಕ್ಷಕ ಒ ಚಿತ್ತಯ್ಯ ಹೇಳಿದರು
ಚಿತ್ರದುರ್ಗ ತಾಲೂಕು ಕಸಬಾ ಹೋಬಳಿ ವ್ಯಾಪ್ತಿಯ ಜೆಸಿಹಳ್ಳಿಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಾಲಾ ಸಮಿತಿ ಹಾಗೂ ಸಹಿಪ್ರಾ ಶಾಲೆಯ ವತಿಯಿಂದ ಆಯೋಜಿಸಿದ್ದ ಶೈಕ್ಷಣಿಕ ಜಾಗೃತಿ ಹಾಗೂ ಹೊಸದಾಗಿ ಆಯ್ಕೆಯಾಗಿ ಬಂದ ಶಿಕ್ಷಕರಿಗೆ ಸ್ವಾಗತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಸಾಮಾಜಿಕ ಬದಲಾವಣೆ ಹಾಗೂ ತಂತ್ರಜ್ಞಾನಾಧಾರಿತ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಕೋನದಿಂದ ಇತ್ತೀಚೆಗೆ ಸರ್ಕಾರ ಪದವೀಧರರನ್ನು ಪ್ರಾಥಮಿಕ ಹಂತದ ಶಿಕ್ಷಣ ನೀಡಲು ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಇದರಿಂದ ಪ್ರಾಥಮಿಕ ಹಂತದಲ್ಲೇ ಭಾಷೆಯೂ ಸೇರಿದಂತೆ ಐಚ್ಚಿಕ ವಿಷಯಗಳನ್ನು ವೈಜ್ಞಾನಿಕವಾಗಿ ಮಕ್ಕಳಿಗೆ ಮಾರ್ಗದರ್ಶನ ನೀಡಲು ಸಹಕಾರಿಯಾಗುತ್ತದೆ ಎಂದರು
ಜಿಪಿಟಿ ಶಿಕ್ಷಕ ವಿ ಶರಣಪ್ಪ ಮಾತನಾಡಿ ಇಂದಿನ ಪೀಳೆಗೆಯು ಸಾಂಪ್ರದಾಯಕ ಶಿಕ್ಷಣ ಕ್ರಮದಲ್ಲಿ ಕಲಿಯಲು ಆಸಕ್ತಿ ತೋರುವುದಿಲ್ಲ ಬದಕಾಗಿ ಚಟುವಟಿಕೆಯ ಶಿಕ್ಷಣದ ಮೂಲಕ ಬೋಧಿಸಿದರೆ ಕಲಿಕೆಯಲ್ಲಿ ಆಸಕ್ತಿ ತೋರಿಸುವರು ಎಂದರು
ಇದೇ ವೇಳೆ ಶಾಲಾ ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು ಸಂದರ್ಭದಲ್ಲಿ ಶಾಲಾ ಸಮಿತಿಯ ಅಧ್ಯಕ್ಷ ಆರ್ ತಿಪ್ಪೇಸ್ವಾಮಿ, ಹಿರಿಯ ಶಿಕ್ಷಕ ಎಸ್ ಟಿ ಮಂಜುನಾಥ, ಶಿಕ್ಷಕರಾದ ವಿ ಶರಣಪ್ಪ, ಪಿ ಮೇಘಾ, ಮುಖ್ಯ ಅಡುಗೆ ಸಿಬ್ನಂದಿ ಸರೋಜಾ, ಸಹಾಯಕ ಅಡಿಗೆಯವರಾದ ತಿಪ್ಪಮ್ಮ ವಿದ್ಯಾರ್ಥಿಗಳಾದ ಅಕ್ಷಿತಾ, ಟಿ ಲಕ್ಷಿö್ಮÃ, ಎಸ್ ದೀಕ್ಷಾ, ಎಸ್ ಆಕಾಶ, ಗಿರೀಶ, ಕಿರಣ್‌ಕುಮಾರ ವೈಷ್ಣವಿ, ದೀಕ್ಷಾ ಟಿ ಪುಣ್ಯಶ್ರೀ ಯಶವಂತ ಇದ್ದರು
ಪೋಟೋ (ಎಜುಕೇಷನ್ 11 )
ಚಿತ್ರದುರ್ಗ ತಾಲೂಕು ಕಸಬಾ ಹೋಬಳಿ ವ್ಯಾಪ್ತಿಯ ಜೆಸಿಹಳ್ಳಿಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಾಲಾ ಸಮಿತಿ ಹಾಗೂ ಸಹಿಪ್ರಾ ಶಾಲೆಯ ವತಿಯಿಂದ ಆಯೋಜಿಸಿದ್ದ ಶೈಕ್ಷಣಿಕ ಜಾಗೃತಿ ಹಾಗೂ ಹೊಸದಾಗಿ ಆಯ್ಕೆಯಾಗಿ ಬಂದ ಶಿಕ್ಷಕರಿಗೆ ಸ್ವಾಗತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಮುಖ್ಯಶಿಕ್ಷಕ ಒ ಚಿತ್ತಯ್ಯ ಮಾತನಾಡಿದರು