ಎಸ್.ಆರ್.ಎಸ್. ಹೆರಿಟೇಜ್ ಶಾಲಾ ಮಕ್ಕಳಿಂದ ದೀಪಾವಳಿ ಹಬ್ಬ ಆಚರಣೆ

ಚಳ್ಳಕೆರೆ: ನಗರದ ಎಸ್.ಆರ್.ಎಸ್. ಹೆರಿಟೇಜ್ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಬೆಳಕಿನ ಹಬ್ಬ ದೀಪಾವಳಿಯನ್ನು ಶಾಲಾ ಆವರಣದಲ್ಲಿ ಆಚರಿಸಲಾಗಿದೆ.ಕರ್ನಾಟಕ ರಾಜ್ಯ ನಕ್ಷೆ ಮತ್ತು ಶಾಲೆಯ ಲಾಂಛನವನ್ನು ಚಿತ್ರಿಸಿ ದೀಪ ಹಾಗೂ ಹೂವುಗಳಿಂದ ಅಲಂಕರಿಸಿ ಸುಮಾರು 5-6 ಸಾವಿರ ಮಣ್ಣಿನ ದೀಪಗಳಿಂದ ಕಂಗೊಳಿಸುವAತೆ ಮಾಡಲಾಗಿತ್ತು. ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಾಲಾ ಸಂಘಟಕರು ಸೇರಿ ದೀಪಗಳನ್ನು ಬೆಳಗಿಸಲಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖಾಂತರ ದೀಪಾವಳಿಯನ್ನು ವಿಜೃಂಭಣೆಯಿAದ ಆಚರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಲಿಖಿತಾ ಅಮೋಘ್ ರವರು ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿ, ವಿದ್ಯಾರ್ಥಿಗಳು ಹಾಗೂ ಭಾಗವಹಿಸಿದ ಪೋಷಕರಿಗೆ ಪಟಾಕಿ ಸಿಡಿತದಿಂದ ಆಗುವ ಅನಾಹುತಗಳ ಬಗ್ಗೆ ತಿಳಿಸಿ ದೀಪದ ಬೆಳಕಿನ ಮಹತ್ವವನ್ನು ವರ್ಣಿಸಿರುತ್ತಾರೆ. ಪಟಾಕಿಗಳನ್ನು ಸಿಡಿಸದೆ ಎಲ್ಲರೂ ಸುರಕ್ಷಿತವಾಗಿ, ಪರಿಸರಕ್ಕೆ ಹಾನಿಯನ್ನುಂಟು ಮಾಡದೆ ದೀಪಾವಳಿಯನ್ನು ಆಚರಿಸಬೇಕೆಂದು ಸಂದೇಶವನ್ನು ನೀಡಿರುತ್ತಾರೆ. ಎಸ್ ಆರ್ ಎಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ. ಎ ಲಿಂಗಾರೆಡ್ಡಿ ಅವರು, ಶಾಲೆಯ ಪ್ರಾಂಶುಪಾಲರಾದ ಶ್ರೀ ವಿಜಯ್ ಬಿ ಎಸ್ ಅವರು ಹಾಗೂ ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಬೆಳಕಿನ ಹಬ್ಬ ದೀಪಾವಳಿಯ ಶುಭ ಕೋರಿದ್ದಾರೆ.

About The Author

Namma Challakere Local News

You missed

error: Content is protected !!