ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿದ ಬಯಲು ಸೀಮೆಯ ನಾಟಕಕಾರ ರಂಗಭೂಮಿ ಕಲಾವಿದ ಪಿ.ತಿಪ್ಪೇಸ್ವಾಮಿ ರವರನ್ನು ಹಾಗೂ ನೂತಾನವಾಗಿ ಚಿತ್ರದುರ್ಗ ಜಿಲ್ಲಾ ಕೆ.ಡಿ.ಪಿ.ಸದಸ್ಯರಾಗಿ ಆಯ್ಕೆಯಾದ ಓ.ರಂಗಸ್ವಾಮಿ ರವರನ್ನು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಆತ್ಮೀಯವಾಗಿ ಸನ್ಮಾನಿಸಿದರು.
ಈದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಪ್ಪ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರಕಾಶ್ಮೂರ್ತಿ, ರಾಜ್ಯ ಕುಶಲ ಕರ್ಮಿಗಳ ವಿಭಾಗದ ರಾಜ್ಯಾಧ್ಯಕ್ಷ ಆರ್.ಪ್ರಸನ್ನಕುಮಾರ್, ಮುಖಂಡರುಗಳಾದ ಕೃಷ್ಣಮೂರ್ತಿ, ಡಾ.ಆನಂದಕುಮಾರ್, ಫರೀದ್ಖಾನ್, ಬಸವರಾಜ್, ಜಯಣ್ಣ, ಶಿವಣ್ಣ, ಗುಜ್ಜಾರಪ್ಪ, ಚೇತನ್ ಕುಮಾರ್, ರಂಗಸ್ವಾಮಿ, ಬಸವರಾಜ್, ಸುದರ್ಶನರೆಡ್ಡಿ, ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.