ಚಳ್ಳಕೆರೆ
ಮಳೆ ತಂದ ಅವಾಂತರ ಸಂಕಷ್ಟಕ್ಕೆ ಸಿಲುಕಿದ ರೈತ
ಚಳ್ಳಕೆರೆ : ಬಯಲು ಸೀಮೆಯಲ್ಲಿ ತಡರಾತ್ರಿ ಸುರಿದ ಮಳೆಯಿಂದಾಗಿ ತಾಲೂಕಿನ ನಾಯಕನಹಟ್ಟಿ ಹೋಬಳಿಯ ಕುದಾಪುರ ಗ್ರಾಮದ ಭಾಗ್ಯಮ್ಮ ಪಾಲಯ್ಯ ಎಂಬುವವರ ಜಮೀನಿನಲ್ಲಿ ನಾಲ್ಕು ಎಕರೆ ಮೆಕ್ಕೆಜೋಳ ಬಿತ್ತನೆ ಮಾಡಿದ್ದು ಮೆಕ್ಕೆಜೋಳ ಬೆಳೆಯುವ ಮಳೆ ನೀರಿನ ರಭಸಕ್ಕೆ ಮಣ್ಣಿನ ಸವಕಳಿ ಹೆಚ್ಚಾಗಿ ಮೆಕ್ಕೆಜೋಳ ಸಸಿಗಳು ಬೇರು ಸಮೇತ ನೀರಿನಲ್ಲಿ ಕಿತ್ತು ಹೋಗಿರುವುದರಿಂದ ರೈತ ಆತಂಕಕ್ಕೆ ಒಳಗಾಗಿದ್ದಾನೆ.
ರೈತರು ಈ ವರ್ಷ ಮಳೆ ಬಾರದೆ ಇರುವುದರಿಂದ ಕೆಲ ರೈತರುಗಳು ನೀರಾವರಿಯನ್ನು ಮಾಡಿಕೊಂಡು ಬೆಳೆಗಳನ್ನು ಬೆಳೆದು ಕೊಳ್ಳಲು ಮುಂದಾಗಿದ್ದು. ಜಮೀನಿನಲ್ಲಿ ಬಿತ್ತನೆ ಮಾಡಲು ಒಂದು ಎಕರೆಗೆ ಮೂರು ಸಾವಿರದಂತೆ 4 ಎಕರೆಗೆ ವ್ಯವಸಾಯ, ಗೊಬ್ಬರ, ಬೀಜ, ಸೇರಿದಂತೆ 30 ಸಾವಿರಕ್ಕೂ ಅಧಿಕ ಹಣ ಸಾಲ ಮಾಡಿ ಬಿತ್ತನೆ ಮಾಡಿದ್ದು. ಆದರೆ ತಡರಾತ್ರಿ ಸುರಿದ ಧಾರಾಕಾರ ಮಳೆಯ ಅವಾಂತರದಿಂದ ಮೆಕ್ಕೆಜೋಳ ಸಸಿಗಳು ನೀರಿನಲ್ಲಿ ಬೇರು ಸಮೇತ ಕೊಚ್ಚಿ ಹೋಗಿರುವುದರಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಇದಕ್ಕೆ ಮಳೆಯಿಂದ ಹಾನಿಯಾದ ಮೆಕ್ಕೆಜೋಳ ಬೆಳೆಯ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಬೆಳೆ ಪರಿಹಾರ ಕುಡಿಸಬೇಕೆಂದು ಅಧಿಕಾರಿಗಳಲ್ಲಿ ರೈತ ಬಸವರಾಜ್ ಮನವಿ ಮಾಡಿಕೊಂಡರು.