ಮನಮೈನಹಟ್ಟಿಯಲ್ಲಿ ಅವೈಜ್ಞಾನಿಕ ಸೇತುವೆಯ ಮೇಲೆ ನೀರು ಹರಿವಿದು ವಿರೋಧಿಸಿ ಗ್ರಾಮಸ್ಥರು ಪಿಡಬ್ಲ್ಯೂಡಿ ಅಧಿಕಾರಿಗಳ ವಿರುದ್ಧ ಆರೋಪಿಸಿದ್ದಾರೆ.
ನಾಯಕನಹಟ್ಟಿ :: ಸಮೀಪದ ಮನಮೈನಹಟ್ಟಿ ಗ್ರಾಮದಲ್ಲಿ ಪಿಡಬ್ಲ್ಯೂಡಿ ಇಲಾಖೆ ವತಿಯಿಂದ ಸೇತುವೆ ನಿರ್ಮಾಣ ಮಾಡಲಾಯಿತು ಸೇತುವೆ ಎತ್ತರದಿಂದ ಮಾಡದೆ ತಗ್ಗು ಪ್ರದೇಶದಲ್ಲಿ ಮಾಡಿರುವ ಸೇತುವೆಯು ನೀರು ಹರಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಗ್ರಾಮದ ಊರ ಒಳಗೆ ನೀರು ನಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ಗ್ರಾಮ ಪಂಚಾಯಿತಿ ಸದಸ್ಯ ಎಚ್ ಶಿವಣ್ಣ ,ರವರು ಸೇತುವೆ ದುರಸ್ತಿ ಪಡಿಸುವಂತೆ ಆಗ್ರಹಿಸಿದ್ದಾರೆ.
ಇನ್ನೂ ಬುಧವಾರ ಸಂಜೆ 6 ಗಂಟೆಗೆ ಆರಂಭವಾದ ಮಳೆ ರಾತ್ರಿ 9:00 ವರೆಗೆ ಗುಡುಗು ಸಿಡಿಲು ಸಹಿತ ಭಾರಿ ಮಳೆ ಸುರಿದ ಹಿನ್ನೆಲೆ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಸದಸ್ಯ ರಮೇಶ್ ರವರ ಮನೆ ಸೇರಿದಂತೆ ಸುಮಾರು 10 ಮನೆಗಳಿಗೆ ಮಳೆ ನೀರು ನುಗ್ಗಿದ್ದು ಜನರು ಹೈರಾಣು ಆಗಿದ್ದಾರೆ.
ಇದೇ ವೇಳೆ ಮಾಜಿ ಗ್ರಾಮ ಪಂಚಾಯತಿ ಸದಸ್ಯ ರಮೇಶ್ ಮಾತನಾಡಿ ನಮ್ಮ ಗ್ರಾಮದಲ್ಲಿ ನಮ್ಮ ಮನೆಗಳು ತಗ್ಗು ಪ್ರದೇಶದಲ್ಲಿದ್ದು ಕಳೆದ ಮೂರು ವರ್ಷದಿಂದ ಮಳೆ ಬಂದ ಸಮಯದಲ್ಲಿ ಮನೆಗಳಿಗೆ ನೀರು ನುಗ್ಗುದು ಸಾಮಾನ್ಯವಾಗಿದೆ. ಮನೆಯಲ್ಲಿದ್ದ ದವಸಧಾನ್ಯ ಸೇರಿದಂತೆ ಸಂಪೂರ್ಣವಾಗಿ ಜಲರುತಗೊಂಡಿವೆ ಎಂದು ಬೇಸರವನ್ನ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಶಿವಣ್ಣ,ಎಲ್. ನಾಗರಾಜ್ ನಾಯ್ಕ, ವಿ . ಪ್ರಕಾಶ್, ಠಾಕ್ರ ನಾಯ್ಕ, ಗುರುಸ್ವಾಮಿ, ಕುಮಾರನಾಯ್ಕ, ತಿಪ್ಪೇಸ್ವಾಮಿ, ಪ್ರಜ್ವಲ್ ,ಮಂಜುನಾಥ್,