ನಾಯಕನಹಟ್ಟಿ ::ಹೋಬಳಿ ಎನ್ ಮಹದೇವಪುರ ಗ್ರಾ.ಪಂ. ವ್ಯಾಪ್ತಿಗೆ ಬರುವ ಕುದಾಪುರ ಗ್ರಾಮದಲ್ಲಿ ಪ್ರತಿ ಸರಿ ಮಳೆ ಬಂದರೂ ಸುಮಾರು ಹತ್ತರಿಂದ 15 ಮನೆಗಳಿಗೆ ನೀರು ನುಗ್ಗುತ್ತವೆ ಎಂದು ಸಾಕಷ್ಟು ಬಾರಿ ಗ್ರಾಮ ಪಂಚಾಯತಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸಹ ಕ್ಯಾರೆ ಎನ್ನುತ್ತಿಲ್ಲ ಎಂದು ಗ್ರಾಮದ ಬಿ.ಓಬಣ್ಣ ಆರೋಪಿಸಿದ್ದಾರೆ.
ಅವರು ಗುರುವಾರ ಗ್ರಾಮದ ವಿವಿಧ ಮನೆಗಳಿಗೆ ನೀರು ನುಗ್ಗಿರುವುದನ್ನ ವೀಕ್ಷಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಸುಮಾರು ಹತ್ತರಿಂದ ಹದಿನೈದು ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿರುವಂತಹ ದವಸ ಧಾನ್ಯ ಬಟ್ಟೆ ಅಡಿಗೆ ಬಳಸುವಂತಹ ಅಕ್ಕಿ ರಾಗಿ ಸೇರಿದಂತೆ ನೀರಲ್ಲಿ ನಿಂದು ಹೋಗಿದ್ದ ರಾತ್ರಿ ಎಲ್ಲಾ ನಿದ್ದೆ ಇಲ್ಲದೆ ಮನೆಯಲ್ಲಿರುವ ನೀರನ್ನು ಹೊರಗೆ ಹಾಕುವಂತ ಪರಿಸ್ಥಿತಿ ಬಂದಿದೆ ಸಾಕಷ್ಟು ಬಾರಿ ಗ್ರಾಮ ಪಂಚಾಯತಿಗೆ ಚರಂಡಿ ವ್ಯವಸ್ಥೆ ಹಾಗೂ ತಡಗೋಡೆ ನಿರ್ಮಿಸುವಂತೆ ಮನವಿ ಮಾಡಿದ್ದರೂ ಸಹ ಅಧಿಕಾರಿಗಳು ಮೌನವಹಿಸಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಚರಂಡಿ ವ್ಯವಸ್ಥೆ ಕಲ್ಪಿಸಿ ತಡಗೋಡೆಯನ್ನು ನಿರ್ಮಿಸಿ ಕೊಡುವಂತೆ ಆಗ್ರಹಿಸಿದ್ದಾರೆ.

ಇದೆ ವೇಳೆ ಗ್ರಾಮಸ್ಥರಾದ ಆರ್ ರಾಜಣ್ಣ ,ಮಾತನಾಡಿ ಕಳೆದ ಮೂರು ವರ್ಷದಿಂದ ಮಳೆಗಾಲದಲ್ಲಿ ನರಕ ಯಾತನೆಯನ್ನು ಅನುಭವಿಸುತ್ತಿದ್ದೇವೆ ಗ್ರಾಮ ಪಂಚಾಯತಿ ಪಿಡಿಓ ಅವರಿಗೆ ಮನವಿ ನೀಡಿದ್ದೇವೆ ಆದರು ಸಹ ಪ್ರಯೋಜನವಿಲ್ಲ ನಮ್ಮ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರು ಪರಿಸ್ಥಿತಿ ನೋಡಿ ಹಾಗೆ ಹೋಗುತ್ತಾರೆ. ನಮ್ಮ ಸಮಸ್ಯೆಯನ್ನು ಯಾರಿಗೆ ಹೇಳುವುದು ಚಳ್ಳಕೆರೆಯ ಮಾನ್ಯ ತಹಸಿಲ್ದಾರ್ ಅವರು ಕೂಡಲೇ ನಮಗೆ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಬಿ ಓಬಣ್ಣ, ಆರ್ ರಾಜಣ್ಣ ಟಿ ಎಸ್ ಪಾಪನಾಯಕ ,ಬಿ ಕುಮಾರ್, ಗೋವಿಂದಪ್ಪ, ಉಮೇಶ್, ನೇತ್ರಾವತಿ, ಗೌರಮ್ಮ, ಗೀತಮ್ಮ, ಬಿ ಹರೀಶ್, ಆರ್ ಮಿಥುನ್, ಡಿ ಬಸವರಾಜ್, ಬೋರಣ್ಣ ಕೆ ಬಿ ಕಲ್ಲೇಶ್, ಬಿ ಬೋರಣ್ಣ, ವಿ. ಗಿರೀಶ್ ಸೇರಿದಂತೆ ಇದ್ದರು

About The Author

Namma Challakere Local News
error: Content is protected !!