ಮಕ್ಕಳ ಸಭೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನೇರಲಗುಂಟೆ ಗ್ರಾಮ ಪಂಚಾಯತಿ ಅಧ್ಯಕ್ಷ ಗೋಪಾಲನಾಯಕ

ನಾಯಕನಹಟ್ಟಿ:: ಪ್ರತಿಯೊಬ್ಬ ತಂದೆ ತಾಯಿಯು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲ ನಾಯಕ ಹೇಳಿದ್ದಾರೆ.

ಅವರು ಗುರುವಾರ ನೇರಲಗುಂಟೆ ಶಿಶು ಅಭಿವೃದ್ಧಿ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಮಕ್ಕಳ ಸಭೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ್ದಾರೆ ಇಂದಿನ ಮಕ್ಕಳೇ ಮುಂದಿನ ಭವಿಷ್ಯದ ಬುನಾದಿ ಎನ್ನುವಂತೆ ನಮ್ಮ ಗ್ರಾಮ ಪಂಚಾಯಿತಿ ವತಿಯಿಂದ ಮಕ್ಕಳ ಸಮಸ್ಯೆಯನ್ನು ಬಗೆಹರಿಸಲು ಮಕ್ಕಳ ಗ್ರಾಮ ಸಭೆಯನ್ನು ಏರ್ಪಡಿಸಿದ್ದಾರೆ ಮಕ್ಕಳಿಗಾಗಿ ಮಕ್ಕಳಿಗೋಸ್ಕರ ಮಕ್ಕಳಿಂದ ಮಕ್ಕಳ ಗ್ರಾಮಸಭೆಯನ್ನು ಮಕ್ಕಳಿಗೆ ಸುಂದರ ಪರಿಸರ ನಿರ್ಮಾಣ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡುವಂತೆ ಮನವರಿಕೆ ಮಾಡುವುದು ದುಶ್ಚಟ ಮಕ್ಕಳನ್ನು ದೂರವಿರಿಸುವಂತೆ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸಲು ಪ್ರತಿಯೊಬ್ಬ ತಂದೆ ತಾಯಿಯ ಮತ್ತು ಶಿಕ್ಷಕರ ಕಾರ್ಯ ಶ್ಲಾಘನೀಯ ಮಕ್ಕಳಿಗೆ ಶುದ್ಧ ನೀರು ಶುದ್ದ ಗಾಳಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮುಂಚೂಣಿಯಲ್ಲಿರಬೇಕು ಎಂದು ತಿಳಿಸಿದರು.

ಇದೇ ವೇಳೆ ಶಿಶು ಅಭಿವೃದ್ಧಿ ಇಲಾಖೆಯ ನಾಯಕನಹಟ್ಟಿ ವಲಯ ಮೇಲ್ವಿಚಾರಕಿ ಆರ್. ನಾಗರತ್ನಮ್ಮ ಮಾತನಾಡಿ ನಮ್ಮ ತಾಲ್ಲೂಕಿನಲ್ಲಿ ಬಾಲ್ಯ ವಿವಾಹ ಅತಿ ಹೆಚ್ಚು ನಡೆಯುತ್ತವೆ ಹೆಣ್ಣಿಗೆ 18 ವರ್ಷಗಳು ತುಂಬಿರಬೇಕು ಪುರುಷಗೆ 21 ವರ್ಷಗಳು ತುಂಬಿರಬೇಕು ಹಾಗಾದರೆ ಮಾತ್ರ ವಿವಾಹವಾಗಲು ಸಾಧ್ಯ. ವಿದ್ಯಾರ್ಥಿಗಳು ಬಾಲ್ಯ ವಿವಾಹವನ್ನು ನಡೆದಂತೆ ಪ್ರತಿಯೊಬ್ಬ ತಂದೆ ತಾಯಿಗೆ ಮನವರಿಕೆ ಮಾಡಬೇಕು.
ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಬಾಲ್ಯ ವಿವಾಹ ಕಂಡು ಬಂದರೆ 1098 ಸಂಖ್ಯೆಗೆ ಕರೆ ಮಾಡಿ ಬಾಲ್ಯ ವಿವಾಹವನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಲ್ಲಿ ಮಾನವರಿಕೆ ಮಾಡಿದರು..

ಇನ್ನೂ ವಿದ್ಯಾರ್ಥಿಗಳು ಗ್ರಾಮ ಪಂಚಾಯತಿಯ ಅಧಿಕಾರಿಗಳಿಗೆ ಪ್ರಶ್ನೆಯನ್ನು ಕೇಳಿದರು.
ಇದಕ್ಕೆ ಉತ್ತರಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಸ್. ಹನುಮಂತ ಕುಮಾರ್, ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮ ಶಿಕ್ಷಣ ಪಡೆಯುವಲ್ಲಿ ಮುಂಚೂಣಿಯಲ್ಲಿರಬೇಕು ನಮ್ಮ ಗ್ರಾಮ ಪಂಚಾಯತಿ ವತಿಯಿಂದ ಶಾಲಾ ಕಟ್ಟಡ ಸ್ವಚ್ಛತೆ ಪರಿಸರ ಸೇರಿದಂತೆ ಮುಂತಾದ ಸೌಲಭ್ಯಗಳನ್ನು ಒದಗಿಸಿ ಕೊಡಲಾಗುವುದು ಎಂದು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ತಿಳಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಎ.ಒ.ಗೋಪಾಲನಾಯಕ ನಾಯಕನಹಟ್ಟಿ ವಲಯ ಮೇಲ್ವಿಚಾರಕಿ ಆರ್ ನಾಗರತ್ನಮ್ಮ, ಪಿಡಿಒ ಎಸ್.ಹನುಮಂತ ಕುಮಾರ್, ಗ್ರಾಮಸ್ಥರಾದ ಪಾಪಣ್ಣ, ನಾಗಭೂಷಣ್, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕಿ ನಾಗರತ್ನಮ್ಮ, ಪ್ರೌಢಶಾಲೆಯ ಶಿಕ್ಷಕಿ ಎಸ್ ಕಾವ್ಯಶ್ರೀ, ಶಿಕ್ಷಣ ಪೌಂಡೇಶನ್ ತಾಲೂಕು ಸಂಯೋಜಕ ಟಿ. ರಾಜಣ್ಣ, ನೇರಲಗುಂಟೆ ಬಿಲ್ ಕಲೆಕ್ಟರ್ ತಿಪ್ಪೇಸ್ವಾಮಿ, ವಿ ಆರ್ ಡಬ್ಲ್ಯೂ ರಮೇಶ್ ಸೇರಿದಂತೆ ಅಂಗನವಾಡಿ ಶಿಕ್ಷಕಿಯರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು

Namma Challakere Local News
error: Content is protected !!