ವಿಕಲಚೇತನರಿಗೆ ಪಿಂಚಣಿ ಆದೇಶ ಪತ್ರ ವಿತರಣೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹನುಮಂತಪ್ಪ ವಿತರಿಸಿದರು
ನಾಯಕನಹಟ್ಟಿ:: ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ವಿಕಲಚೇತನರ ಶ್ರಯ ಅಭಿವೃದ್ಧಿಗೆ ಶ್ರಮಿಸುವುದಾಗಿ ಪಿಡಿಒ ಹನುಮಂತಪ್ಪ ಹೇಳಿದ್ದಾರೆ.
ಅವರು ಶನಿವಾರ ಹೋಬಳಿಯ ನೇರಲಗುಂಟೆ ಗ್ರಾಮ ಪಂಚಾಯತಿಯಲ್ಲಿ ವಿಕಲಚೇತನರಿಗೆ ಪಿಂಚಣಿ ಆದೇಶ ಪ್ರತಿ ವಿತರಣೆ ಮಾಡಿ ಮಾತನಾಡಿದ್ದಾರೆ. ಗ್ರಾಮೀಣ ಪ್ರದೇಶದ ವಿಕಲಚೇತನರಿಗೆ ಸರ್ಕಾರ ಪ್ರತಿ ತಿಂಗಳು ಪಿಂಚಣಿಯನ್ನು ನೀಡುತ್ತಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಇದೆ ವೇಳೆ ಎಸ್ ಡಿ ಎ ಎನ್.ಬಿ ವೀರನಾಯಕ ಮಾತನಾಡಿ ವಿಕಲಚೇತನರು ಸರ್ಕಾರ ನೀಡುತ್ತಿರುವ ಪಿಂಚಣಿಯನ್ನು ಪಡೆದುಕೊಂಡು ಉತ್ತಮ ಜೀವನ ನಡೆಸಲು ಪ್ರತಿಯೊಬ್ಬ ವಿಕಲಚೇತನರು ಮುಂದಾಗಬೇಕು ವಿಕಲಚೇತನರಿಗೆ ಸರ್ಕಾರ ನೀಡುವ ಪಿಂಚಣಿಯಿಂದ ವಿದ್ಯಾಭ್ಯಾಸ ಆರೋಗ್ಯದ ಸಮಸ್ಯೆ ಸೇರಿದಂತೆ ವಿಕಲಚೇತನರಿಗೆ ನೀಡುವ ಸಹಾಯಧನವು ಅನುಕೂಲವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಚನ್ನಕೇಶವ, ಗ್ರಾಮಸ್ಥರಾದ ನಾಗರಾಜ್, ಪಿ ಡಿ ಓ ಹನುಮಂತಪ್ಪ, ಎಸ್ ಡಿ ಎ ಎನ್ ಬಿ ವೀರನಾಯಕ, ವಿ ಆರ್ ಡಬ್ಲ್ಯೂ ರಮೇಶ್, ಕಾರ್ಯದರ್ಶಿ ಕೆ ಎಸ್ ಜಯಣ್ಣ, ನೇರಲಗುಂಟೆ ಬಿಲ್ ಕಲೆಕ್ಟರ್ ತಿಪ್ಪೇಸ್ವಾಮಿ, ಹಾಗೂ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು