ಚಳ್ಳಕೆರೆ : ಬೀಡಾ ವ್ಯಾಪರಿಯೊಬ್ಬ ಮನನೊಂದು ನೇಣಿಗೆ ಶರಾಣದ ಘಟನೆ ಚಳ್ಳಕೆರೆ ನಗರದಲ್ಲಿ ನಡೆದಿದೆ.
ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯಲ್ಲಿ ಬೀಡಾ ಅಂಗಡಿ ನಡೆಸುತ್ತಿದ್ದ ಮೃತ ಸೀತಾರಾಮ(49) ಬಾಪೂಜಿ ಕಾಲೇಜ್ ರಸ್ತೆಯ ಕೇದರನಾಥ ಹಾರ್ಡ್ ವೇರ್ ಮೇಲೆ ಬಾಡಿಗೆ ಕೊಠಡಿಯ ಬಾತ್ ರೂಂ ನಲ್ಲಿ ಆತ್ಮಹತ್ಯೆ ಗೆ ಶರಣಾಗಿದ್ದಾನೆ.
ಇಬ್ಬರು ಮಕ್ಕಳೊಂದಿಗೆ ಮಡದಿ ಕುಂದಾಪುರದಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ, ಮೃತನ ಗೆಳೆಯರು ಹಾಗೂ ಗ್ರಾಹಕರು ಬೆಳಂ ಬೆಳಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತನ ದರ್ಶನ ಪಡಯುವ ದೃಶ್ಯ ಕಂಡು ಬಂತು ಸ್ಥಳಕ್ಕೆ ಚಳ್ಳಕೆರೆ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಡೆತ್ ನೋಟ್ ವೈರಲ್ :
ಡೆತ್ ನೋಟಿನಲ್ಲಿ ನನಗೆ ಪರಿಸ್ಥಿತಿ ಒತ್ತಡ ನಿಬಾಯಿಸೋಕೆ ಆಗದೆ ಈ ರೀತಿ ನಿರ್ಧಾರ ಮಾಡಿದ್ದೇನೆ, ದಯವಿಟ್ಟು ನನ್ನನ್ನು ಕ್ಷಮಿಸಿ, ಅಣ್ಣ ನನ್ನನ್ನು ಕ್ಷಮಿಸು ನನ್ನ ಹೆಂಡತಿ ಮಕ್ಕಳನ್ನು ಚನ್ನಾಗಿ ನೋಡಿಕೋ ಪ್ರವೀಣ್ ನನ್ನ ಹೆಂಡತಿ ಮಕ್ಕಳನ್ನು ಚನ್ನಾಗಿ ನೋಡಿಕೋ. ಎಲ್ಲರೂ ನನ್ನು ಕ್ಷಮಿಸಿ ಇಂತಿ ನಿಮ್ಮ ಸೀತರಾಮ.