ಚಳ್ಳಕೆರೆ : ಸರಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ದೊಡ್ಡೇರಿ ಗ್ರಾಮಪಂಚಾಯತಿ ವತಿಯಿಂದ ಡಿ.ಉಪ್ಪಾರಹಟ್ಟಿ ಗ್ರಾಮಪಂಚಾಯತಿಯಲ್ಲಿ ಆಯೋಜಿಸಿದ್ದ, ಏಳು ದಿನಗಳ ಎನ್ ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶ್ರೀ ಕರಿಬಸವೇಶ್ವರ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.
ವಿಶೇಷ ಆಹ್ವಾನಿತರಾಗಿ ನಿವೃತ್ತ ಜಂಟಿ ನಿರ್ಧೇಶಕರಾದ ಕೃಷ್ಞ ಪ್ರಸಾದ್ ಮಾತನಾಡುತ್ತ ಸಮಾಜದ ಒಡನಾಟ ಇಲ್ಲದೇ ಬೆಳೆಯುವ ಇಂದಿನ ಮಕ್ಕಳ ಉತ್ತಮ ಭವಿಷ್ಯಕ್ಕೆ ಇಂತಹ ಶಿಬಿರಗಳು ಅವಶ್ಯಕ ಎಂದು ತಿಳಿಸಿದರು.
ಏಳು ದಿವಸಗಳ ಕಾಲ ಉಪ್ಪಾರಹಟ್ಟಿ ಗ್ರಾಮದ ಜನತೆಗೆ ಸ್ವಚ್ಛತೆಯ ಜಾಗೃತಿ, ಶಾಲಾವರಣದ ಸಂಪೂರ್ಣ ಸ್ವಚ್ಛತೆ, ಉಚಿತ ಆರೋಗ್ಯ ತಪಾಸಣೆ, ಸಸ್ಯ ಶ್ಯಾಮಲದಂತಹ ಪರಿಸರದ ಕಾರ್ಯಕ್ರಮಗಳು, ಹಾಗೂ ಸಂಜೆಯ ಉಪನ್ಯಾಸ ಕಾರ್ಯಕ್ರಮಗಳಲ್ಲಿ ಮತ್ತು ಮುಂಜಾವಿನ ಯೋಗಕಾರ್ಯಗಳಲ್ಲಿ ಶಿಬಿರಾರ್ಥಿಗಳ ಭಾಗವಹಿಸುವಿಕೆಗೆ ಮೆಚ್ಚಿದ ಉಪ್ಪಾರಹಟ್ಟಿ ಗ್ರಾಮಸ್ಥರು ಎಲ್ಲಾ ಶಿಬಿರಾರ್ಥಿಗಳಿಗೆ ದೊಡ್ಢೇರಿ ಪಂಚಾಯತಿ ವತಿಯಿಂದ ಅಭಿನಂದನಾ ಪತ್ರಗಳನ್ನು ವಿತರಿಸಿದರು.
ದೊಡ್ಡೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ವೆಂಕಟೇಶ್, ಉಪ್ಪಾರಹಟ್ಟಿ ಗ್ರಾಮ ಪಂಚಾಯತಿ ಸದಸ್ಯರುಗಳಾದ ಸಿರಿಗೊಂಡಪ್ಪ, ಶೇಖರಪ್ಪ, ಶಿಲ್ಪಾವೆಂಕಟೇಶ್, ಎಲ್ಲಾ ಉಪ್ಪಾರಹಟ್ಟಿ ಯುವಕರು, ಎಲ್ಲಾ ಗ್ರಾಮಸ್ಥರಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕಾಲೇಜಿನ ಪರವಾಗಿ ಪ್ರಾಚಾರ್ಯರು ಹಾಗೂ ಕಾರ್ಯಕ್ರಮಾಧಿಕಾರಿಗಳು ಧನ್ಯವಾದಗಳನ್ನು ಅರ್ಪಿಸಿದರು.