ಚಳ್ಳಕೆರೆ : ಬಯಲು ಸೀಮೆಯ ಗೋವುಗಳನ್ನು ಉಳಿಸುವ ಮೂಲಕ ಭಾರತ ದೇಶದ ಗೋ ಸಂಪತ್ತು ಉಳಿಸುವ ಅಗತ್ಯವಿದೆ ಸರಕಾರ ಕೇವಲ ಬರಗಾಲ ಎಂಬುದು ಘೋಷಣೆ ಮಾಡಿದರೆ ಸಲಾದು ತುರ್ತಾಗಿ ಅಗತ್ಯ ನೆರವು ನೀಡಬೇಕು ಎಂದು ಶ್ರೀ ರಾಮ ಕೃಷ್ಣ ಆಶ್ರಮದ ಜಪಾನಂದ ಜೀ ಮಹಾರಾಜು ಹೇಳೀದರು.
ಅವರು ನಗರದ ಪ್ರವಾಸಿ ಮಂದಿರಲ್ಲಿ ಸುಧಾಮೂರ್ತಿ ಮೂರ್ತಿ ಪೌಂಡೇಷನ್ ಹಾಗೂ ರಾಮಕೃಷ್ಣ ಸೇವಾಶ್ರಮ ಹಾಗೂ ಶ್ರೀ ಸ್ವಾಮಿವಿವೇಕನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಸೇವಾ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಮೊಳಕಾಲ್ಮೂರು ಹಾಗೂ ಚಳ್ಳಕೆರೆ ತಾಲೂಕಿನ ವಿವಿಧ ಗ್ರಾಮದಲ್ಲಿರುವ ದೇವರ ಎತ್ತುಗಳಿಗೆ ಉಚಿತ ಮೇವು ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸ್ವಾಮಿ ಮೊದಲು ಹುಸಿರಾಡಲು ಮೇವು ನೀರು ಕೊಡಿ ಪ್ರಾಣ ಬಿಡುವ ಸ್ಥಿತಿಯಲ್ಲಿ ಮೂಕ ಪ್ರಾಣಿಗಳು ಇವೆ, ಮೂಖವೇಧನೆ ಅರ್ಥ ಮಾಡಿಕೊಳ್ಳುವ ಔದಾರ್ಯ ಎಲ್ಲಿಂದ ಬರಬೇಕು ಅದಷ್ಟು ಬೇಗ ಗೋವುಗಳಿಗೆ ಮೆವು ಹೊದಗಿಸಿ ಎಂದರು.
ಸರಕಾರ ಬರಗಾಲೆ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದರೂ ಸಹ ಅನುದಾನ ಬಿಡುಗಡೆ ಮಾಡದೆ ಇರುವುದು ಅಭಿವೃದ್ಧಿಗೆ ಕುಂಠಿತವಾಗಿದೆ. ಮೊಳಕಾಲ್ಮೂರು, ಚಳ್ಳಕೆರೆ, ಕೂಡ್ಲಗಿ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಸಾವಿರಾರು ಎತ್ತುಗಳಿದ್ದು ಮೇವಿಲ್ಲದ ಅಪೌಷ್ಠಿಕತೆಯಿಂದ ಬಳಲಿ ಸಾಯುವ ಹಂತಕ್ಕೆ ತಲುಪಿವೆ ಆದರೂ ಸಹ ಸರಕಾರ ಇನ್ನು ಗೋಶಾಲೆ ತೆರಯಲು ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ಮೇವಿಗಾಗಿ ಪುಡಿಗಾಸು ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಬುಡಕಟ್ಟು ಸಂಸ್ಕೃತಿಯ ಜನರು ದೇವರ ಹೆಸರಿನಲ್ಲಿ ಬಿಡುವ ಜಾನುವಾರುಗಳಿಗೆ ಕಿವಿ ಚುಚ್ಚುವ ಪದ್ದತಿಯಿಂದ ದೂರವಿದ್ದಾರೆ ಇಂತಹ ಎತ್ತುಗಳಿಗೆ ಉಚಿತ ಮೇವು ವಿತರಣೆ ಮಾಡುವುದಿಲ್ಲ ಎಂದರೆ ಎಷ್ಟು ಸರಿ? .ಬಿರು ಬಿಸಿನ ಕಾವು ಹಾಗೂ ಚುನಾವಣೆಯ ಕಾವಿನ ನಡುವೆ ದೇವರ ಎತ್ತುಗಿಗಳನ್ನು ಕಡೆಗಣಿಸುತ್ತಿರುವುದರಿಂದ ಮೇವು ನೀರಿಲ್ಲದೆ ಬಳಲುವ ಪರಿಸ್ಥಿತಿ ನಿರ್ಮಾಣವಾಗಿದ್ದು ಸರಕಾರಗಳು ಪಶುಪಂಪತ್ತನ್ನುಉಳಿಸಲು ಉಚಿತ ಮೇವು ಸರಬರಾಜು ಮಾಡುವಂತೆ ಸರಕಾರಕ್ಕೆ ಒತ್ತಾಯಿಸಿದರು.
ತಾಲೂಕಿನರ‍್ಲಕಟ್ಟೆ, ರ‍್ಲಗುಂಟೆ, ನೆಲಗೇತನಹಟ್ಟಿ, ಭೀಮಗೊಂಡನಹಳ್ಳಿ, ಜೋಗಿಹಟ್ಟಿ, ಚನ್ನಬಯಯ್ಯನಹಟ್ಟಿ, ಅಬ್ಬೇನಹಳ್ಳಿ, ಮೊಳಕಾಲ್ಮೂರು ತಾಲೂಕಿನ ಸೂರಮ್ಮನಹಳ್ಳಿ, ಮುತ್ತಿಗಾರಹಳ್ಳಿ ಗ್ರಾಮಗಳಲ್ಲಿ ಸುಮಾರು 1500ರಿಂದ ಎರಡು ಸಾವಿರ ಕ್ಕೂ ಹೆಚ್ಚು ದೇವರ ಎತ್ತುಗಳಿದ್ದು ಮೇವು ನೀರಿನಲ್ಲದೆ ಪ್ರಾಣ ಬಿಡುವ ಹಂತಕ್ಕೆ ತಲುಪಿವೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ಮುಂದಿನ ಮಳೆ ಬರುವ ತನಕ ದೇವರ ಎತ್ತುಗಳಿಗೆ ಉಚಿತವಾಗಿ ಮೇವು ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಈಗಾಗಲೆ ಪಾವಗಡ ತಾಲೂಕಿನ ಮೇವು ವಿತರಣೆ ಕೇಂದ್ರವನ್ನು ಪ್ರಾರಂಬಿಸಿದ್ದು ಮೇವಿನ ಕೊರತೆ ಇರುವವರು ಬಂದು ಮೇವು ಪಡೆಯ ಬಹುದು ಆದರೆ ಇಲ್ಲಿ ದೇವರ ಎತ್ತುಗಳು ಆಗಿರುವುದರಿಂದ ಕಾಡಿನಲ್ಲಿ ಮೀವಿನ ಕೊರತೆಯಿಂದ

ನಮ್ಮ ನೆಲ ನಿಮ್ಮ ವಶಕ್ಕೆ : ಗೋವುಗಳ ಅಳಲು ಕೇಳುವರ‍್ಯಾರು :
ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ಡಿಆರ್‌ಡಿಓ, ಬಾರ್ಕ್ನಂತÀಹ ಸಂಸ್ಥೆಗಳಿಗೆ ನೀಡಿದು ಇದರಿಂದ ನಮ್ಮ ಗೋವುಗಳಿಗೆ ಮೆಯಲು ಕಾವಲು ಇಲ್ಲದೆ ಶೌಚನೀಯ ಸ್ಥಿತಿ ಬಂದೋದಗಿದೆ.
ಕಾAಪೌAಡ್ ನಿರ್ಮಾಣದಿಂದ ಜಾನುವಾರುಗಳನ್ನು ಮೇಹಿಸಲು ಭೂಮಿಯಿಲ್ಲದಂತಾಗಿದೆ..ಸ್ವಯA ಸಂಸ್ಥೆಗಳು ಮೇವು ವಿತರಣೆ ಮಾಡಿದರೂ ಸಹ ಸರಕಾರ ಮಾತ್ರ ಮೇವು ವಿತರಣೆ ಮಾಡಲು ಮುಂದೆ ಬರುತ್ತಿಲ್ಲ

ಬಾಕ್ಸ್ ಮಾಡಿ :
ಸ್ವಾಮಿ ಗೋವುಗಳ ಉಳಿವಿಗೆ ಮೇವು ಕೊಡಿ, ನಾನು ಸಮುದಾಯ ಭವನ ಕೊಡಿ, ಕಟ್ಟಡ ಕೊಡಿ ಎಂದು ವೈಯುಕ್ತ ಅಭಿವೃದ್ಧಿಗೆ ಅನುದಾನ ಕೇಳುತ್ತಿಲ್ಲ ಗೋಸಂಪತ್ತು ಉಳಿವಿಗಾಗಿ ಮೇವು ಕೊಡಿ ಎಂದು ಕೇಳುತ್ತಿದ್ದೇನೆ ಮುಂದಿನ ದಿನಗಳ ಮೇವು ನೀಡುವಂತೆ ಒತ್ತಾಯಿಸಿ ತಾಲೂಕಿನ ಎಲ್ಲಾ ಗೋವು ಸಂರಕ್ಷಣೆಯ ಕಿಲಾರಿಗಳು ರೈತರೊಂದಿಗೆ ಶಾಸಕರು, ಜಿಲ್ಲಾಧಿಕಾರಿಗಳ ಕಛೇರಿ ಹಾಗೂ ವಿಧಾನ ಸೌಧದ ಮುಂದೆ ಪ್ರತಿಭಟಣೆ ಮಾಡಲಾಗುವುದು –ಶ್ರೀ ರಾಮ ಕೃಷ್ಣ ಆಶ್ರಮದ ಜಪಾನಂದ ಜೀ ಮಹಾರಾಜು

ಇದೇ ಸಂಧರ್ಭದಲ್ಲಿ ಗೋ ಸಂರಕ್ಷಕರಾದ ಮಹೇಶ್, ಸಿದ್ದೇಶ್, ಕಿಲಾರಿಗಳಾದ ಮಂಜಣ್ಣ, ಪಾಲಯ್ಯ, ಬೋರೇಶ್, ಪಾಲಯ್ಯ, ಮುತ್ತಯ್ಯ, ಇತರರಿದ್ದರು.

About The Author

Namma Challakere Local News
error: Content is protected !!