ಸಮಾಜಮುಖಿ ಕಾರ್ಯಕ್ರಮಗಳಿಗೆ ಪರಿಶ್ರಮ ಪ್ರೇರಣಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮುಂದು : ಎಂ.ಪರಶುರಾಮ್
ಚಿತ್ರದುರ್ಗ: ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವಲ್ಲಿ ಈ ಸಂಸ್ಥೆಯ ಪಾತ್ರ ಅಪಾರ, ಹಾಗೆ ಸಂಸ್ಥೆಯ ವತಿಯಿಂದ ಇದುವರೆಗೂ ಆದ ಖರ್ಚು ವೆಚ್ಚಗಳ ಬಗ್ಗೆ ಸಂಕ್ಷಿಪ್ತವಾಗಿ ಎಲ್ಲ ನಿರ್ದೇಶಕರ ಸಮ್ಮುಖದಲ್ಲಿ ಮಂಡಿಸಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿಗಳಾದ ಎಂ.ಪರಶುರಾಮ್ ಹೇಳಿದರು.
ಅವರುಚಿತ್ರದುರ್ಗ ಜಿಲ್ಲೆಯ ಪ್ರವಾಸಿ ಮಂದಿರದಲ್ಲಿ ಪರಿಶ್ರಮ ಪ್ರೇರಣಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ದ್ವಿತೀಯ ಕಾರ್ಯಕಾರಿ ಸಮಿತಿ ಸಭೆಯನ್ನು ನಡೆಸಲಾಯಿತು ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ್. ಪಿ.ಎಸ್ ಮತ್ತು ಎಲ್ಲ ಪದಾಧಿಕಾರಿಗಳ ಸಮ್ಮುಖದಲ್ಲಿ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು..
ಕೆಲಸ ಯಾವುದಾದರೇನು ಅದು ನಮಗೆ ಒಂದು ತುತ್ತು ಅನ್ನ ಕೊಡುತ್ತಿದ್ದಾರೆ ಅದರ ಮೇಲೆ ಗೌರವ ಇರಬೇಕು ಜೊತೆಗೆ ತಾನು ಬೆಳೆದು ಇತರರನ್ನು ಬೆಳೆಸುವ ಮನಸ್ಸು ಇದ್ದರೆ ಅದು ನಮಗೂ ನಮ್ಮ ಸಂಸ್ಥೆಗೂ ಗೌರವ ತಂದು ಕೊಡುತ್ತದೆ, ಆ ನಿಟ್ಟಿನಲ್ಲಿ ಸಂಸ್ಥೆಯ ಪ್ರತಿಯೊಬ್ಬರೂ ಆಲೋಚಿಸಿ ಹಾಲಿನ ಆಯಸ್ಸು ಒಂದು ದಿನ ಆದರೂ ದಿರ್ಘಾಯಸ್ಸು ಹೊಂದಿರುವ ತುಪ್ಪವೂ ಅದರಲ್ಲಿ ಅಡಗಿದೆ.
ನಮ್ಮ ಸಂಸ್ಥೆಯೂ ತುಪ್ಪದಂತೆ ದೀರ್ಘ ಆಯಸ್ಸು ಹೊಂದುವ ಮೂಲಕ ಸಾರ್ಥಕ ಸಾಧನೆ ಮಾಡಿ ಸಮಾಜದ ಹೊಳಿತಿಗಾಗಿ ಶ್ರಮಿಸಬೇಕು. ಆ ರೀತಿಯ ಆಲೋಚನೆ ದೂರದೃಷ್ಟಿ ನಮ್ಮ ಧ್ಯೇಯ ವಾಕ್ಯ ಆಗಬೇಕು ಎಂದು ಎಲ್ಲಾ ನಿರ್ದೇಶಕರಿಗೆ ತಿಳಿಸಿ ಹೇಳಿ ಅವರಲ್ಲಿ ಸಮಾಜಮುಖಿ ಕಾರ್ಯಕ್ಕೆ ಕಾರ್ಯ ಪ್ರವೃತ್ತರಾಗಬೇಕು ಎಂದು ಕಿವಿ ಮಾತು ಹೇಳಿದರು.

ತದ ನಂತರ ಎಲ್ಲ ನಿರ್ದೇಶಕರು ತಮ್ಮ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯ ವ್ಯಕ್ತಪಡಿಸಿದರು ಹಾಗೂ ಸಲಹೆಗಳನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಸಿದ್ದೇಶ್ವರ.ಆರ್, ವಿಜಯ್ ಕುಮಾರ್, ತಿಪ್ಪೇಸ್ವಾಮಿ, ಆರ್.ನಾಗರಾಜ್.ಡಿ, ಲಕ್ಷ್ಮಣ್.ಕೆ, ಯಶೋಧರ ಉಪಸ್ಥಿತರಿದ್ದರು, ಸಂಸ್ಥೆಯ ಶಿವಮೂರ್ತಿ.ಟಿ ಕೋಡಿಹಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರು, ನಾಗರಾಜ್.ಡಿ ಸ್ವಾಗತಿಸಿದರು, ಸಿದ್ದೇಶ್ವರ.ಆರ್ ವಂದಿಸಿದರು.

About The Author

Namma Challakere Local News
error: Content is protected !!