ಚಳ್ಳಕೆರೆ ಅ೨೫. ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ವಿಜಯದಶಮಿ ಹಾಗೂ ಆಯುದ ಪೂಜೆ ಅಂಗವಾಗಿ ಶ್ರೀ ದ್ಯಾಮಲಾಂಭ, ಮೈಲಾರಲಿಂಗೇಶ್ವರ, ಯಲ್ಲಮ್ಮ. ನರಸಿಂಹಸ್ವಾಮಿ, ರಂಗನಾಥಸ್ವಾಮಿ ದೇವರುಗಳು ಮಂಗಳವಾರ ಸಂಜೆ ಹೊಳೆ ಪೂಜೆ ಮುಗಿಸಿ ನಂತರ ಬನ್ನಿ ಮುಡಿದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಗುಡಿದುಂಬಿದವು.
ಶ್ರೀ ದ್ಯಾಮಲ್ಯಾಂಭ ದೇವಸ್ಥಾನದ ಆವರಣದಲ್ಲಿ ಮಂಗಳವಾರ ರಾತ್ರಿ ೧೦-೩೦ ಸಮಯದಲ್ಲಿ ಅಗ್ನಿಹೊಂಡ ಹಾಗೂ ಶ್ರೀ ಮೈಲಾರಲಿಂಗೇಶ್ವರಸ್ವಾಮಿ ದೇವಾಸ್ಥಾನದ ಆವರಣದಲ್ಲಿ ಬುಧವಾರ ಬೆಳಗ್ಗೆ ಗೊರವಗಳ (ದೋಣಿ) ಸೇವೆ ಸಡಗರ ಸಂಭ್ರಮದಿAದ ಜರುಗಿತು.
ದೋಣಿಸೇವೆ:- ಗೊರವಗಳ ಸೇವೆಯಲ್ಲಿ ಚಿತ್ರದುರ್ಗ, ಮಾಳಪ್ಪನಹಟ್ಟಿ, ಹಿರೆಮಧುರೆ, ಗಂಜಿಗುAಟೆ, ಗರ‍್ಲತು,ಕೂಡ್ಲಹಳ್ಳಿ, ಬುಡರಕುಂಟೆ, ಬೇಡರಹಳ್ಳಿ, ಮಠದಹಟ್ಟಿ, ಹಾಗೂ ಗೋಪನಹಳ್ಳಿ ಗ್ರಾಮದ ಸುಮಾರು ೪೦ ಕ್ಕೂ ಹೆಚ್ಚು ಗೊರವಗಳು ಬುಧವಾರ ಬೆಳಿಗ್ಗೆ ೯ ಗಂಟೆಗೆ ಗಂಗಾಸ್ನಾನ ಮುಗಿಸಿ ೧೦ ಗಂಟೆಗೆ ರ ಸರಿಯಾಗಿ ನಡೆಮುಡಿಯೊಂದಿಗೆಏಳುಕೋಟಿ ಮೈಲಾರಲಿಂಗೇಶ್ವರ ಚಾಂಗಮಲೋ ಎಂಬ ಘೋಷಣೆಗಳೊಂದಿಗೆ ದೇವಾಸ್ಥಾನದ ಮೈಲಾರಲಿಂಗೇ¸ಶ್ವರ ದೇವಸ್ಥಾನದ ಆವರಣಕ್ಕೆ ಬರುತ್ತಾರೆ. ನಂತರ ಗೊರವಗಳ ದೋಣಿ ಹಾಗೂ ತಾಮ್ರಗಳ ಪಾತ್ರೆಗಳಲ್ಲಿ ಭಕ್ತರು ತಂದ ಬಾಳೆಹಣ್ಣು, ಹಾಲು, ಸಕ್ಕರೆ, ತುಪ್ಪ ಶ್ರದ್ದೆ, ಭಕ್ತಿಯಿಂದ ದೋಣಿಗಳಿಗೆ ಹಾಕುವ ಮೂಲಕ ತಮ್ಮ ಹರಕೆಯನ್ನು ತೀರಿಸಿಕೊಳ್ಳುತ್ತಾರೆ.
ಗೊರವಗಳು ಡಮರುಗಳನ್ನು ಹಿಡಿದು ಭಕ್ತರು ಹಾಕಿದ ಬಾಳೆಹಣ್ಣು, ಹಾಲು, ತುಪ್ಪಗಳ ದೋಣಿಗಳನ್ನು ಸುತ್ತು ಏಳು ಕೋಟಿ ಚಾಂಗಮಲೋ ಘೋಷಣೆಗಳನ್ನು ಹಾಕುತ್ತಾರೆ. ಈ ಸಂದರ್ಭದಲ್ಲಿ ಕೆಲವು ಗೊರವಗಳು ಮೈದುಂಬಿ ಭಕ್ತರ ಮೇಲೆ ಹಾಗೂ ಗೊರವಗಳ ಮೇಲೆ ಎರಗುತ್ತಾರೆ. ರೊಚ್ಚಿಗೆದ್ದ ಗೊರವಗಳ ಮೇಲೆ ಪೂಜಾರಿ ದೇವರ ಬಂಡಾರ ತೀರ್ಥವನ್ನು ಗೊರವಗಳ ಬೆನ್ನಿಗೆ ತಟ್ಟಿ ಸಮಾದಾನ ಪಡಿಸುತ್ತಾರೆ. ಮೊತ್ತಬ್ಬಗೊರವ ಬಾಯಿಗೆ ಬೀಗ ಹಾಕಿಕೊಂಡು ದೋಣಿಸೇವೆಯಲ್ಲಿ ತೊಡಗಿ ಭಕ್ತರ ಕಣ್ಮನೆ ಸೆಳೆಯುತ್ತಾನೆ.
ನಂತರ ದೋಣಿಗಳಿಗೆ ಪೂಜೆ ಪುರಸ್ಕಾರ ಮುಗಿದ ನಂತರ ಗೊರವುಗಳು ದೋಣಿಗಳಿಗೆ ಬಾಯಿ ಹಾಕಿ ಎಂಜಲು ಮಾಡಿದಾಗ ಅವುಗಳನ್ನು ತೆಗೆದು ಭಕ್ತರಿಗೆ ವಿತರಿಸುತ್ತಾರೆ. ಈ ಗೊರವಳ ದೋಣಿ ಸೇವೆ ಪೂರ್ವಜರ ಕಾಲದಿಂದಲೂ ಭಯ, ಭಕ್ತಿ, ಶ್ರದ್ದೆಯಿಂದ ಇಂತ ಜಾನಪದ ಕಲೆಯನ್ನು ಇಂದಿಗೂ ಉಳಿಸಿಕೊಳ್ಳುವ ಮೂಲಕ ದೋಣಿಸೇವೆಯನ್ನು ಆಚರಿಸಿಕೊಳ್ಳುತ್ತಾ ಬರುತ್ತಿದ್ದಾರೆ.
ಕೆಂಡ ತುಳಿತ: ಶ್ರೀ ದ್ಯಾಮಲಾಂಭ ದೇವಾಸ್ಥಾನದ ಆವರಣದಲ್ಲಿ ವಿಜಯದಶಮಿ ಹಾಗೂ ದಸರ ಹಬ್ಬದ ಅಂಗವಾಗಿ ಮಂಗಳವಾರ ರಾತ್ರಿ ೧೦ ಗಂಟೆಗೆ ಕೆಂಡ ತುಳಿಯುವ ಸೇವೆ ಕಾರ್ಯಕ್ರಮ ಜರುಗಿತು.
ಕೆಂಡಕ್ಕಾಗಿ ಗಟ್ಟಿಮುಟ್ಟಾದ ಸೌದೆಗಳನ್ನುಭಕ್ತರು ದೇವಸ್ಥಾನಕ್ಕೆ ತಂದು ಹಾಕುತ್ತಾರೆ ನಂತರ ಕೆಂಡವನ್ನು ಮಾಡಲಾಗುತ್ತದೆ. ದ್ಯಾಮಲ್ಯಾಂಭ ದೇವಿ ಹೊಳೆ ಪೂಜೆ ಮುಗಿಸಿ ಬನ್ನಿ ಮುಡಿದು ದೇವಸ್ಥಾನ ಆವರಣರಕ್ಕೆ ಬಂದ ನಂತರ ಗುಡಿಯ ಸುತ್ತ ಮೂರು ಪ್ರದಕ್ಷಣೆ ಹಾಕಿಸಿ ನಂತರ ಪೂಜೆ ಪುರಸ್ಕಾರನಂತರ ಪೂಜಾರಿ ಮನೆಯಿಂದ ಬಾನವನ್ನು ನಡೆಮುಡಿಯಿಂದ ತಂದು ೯ ಎಡೆ ಹಾಗೂ ಬನ್ನಿಮರಕ್ಕೆ ಎಡೆಹಾಕಿ. ಮಡಿವಾಳ ಮೊದಲ ಮೂಜೆ ನಡೆಸಿ ನಂತರ ಪೂಜಾರಿಯ ಮೈಮೇಲೆ ದೇವಿ ಬಂದು ಅಗ್ನಿಹೊಂಡ ಪ್ರವೇಶಮಾಡುತ್ತಾರೆ ಜೊತೆ ದೇವರ ಪಲ್ಲಕ್ಕಿ ಹೊತ್ತ ಭಕ್ತರು ಸಹ ಪ್ರವೇಶಮಾಡುತ್ತಾರೆ ನೂರಾರು ಭಕ್ತರು ದೇವಿಯ ಅಗ್ನಿಹೊಂಡ ದರ್ಶನ ಪಡೆದು ಪುಳಿಕಿತಗೊಂಡರು,
ದಸರ ಹಾಗೂ ವಿಜಯದಶಮಿ ಹಂಗವಾಗಿ ಮೈಲಾರಲಿಂಗೇಶ್ವರ, ದ್ಯಾಮಲಂಭ ದೇವಸ್ಥಾನ ಆವರಣದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗಿತ್ತು. ಯಲ್ಲಮ ದೇವಸ್ಥಾನದ ಆವರಣದಲ್ಲಿ ಮಣೇವುuh ಹಾಕಿ ಪೂಜೆಯ ನಂತರ ದೇವಸ್ಥಾನದ ಆವರಣದಲ್ಲಿ ಜೋಗೂಟದ ವ್ಯವಸ್ಥೆ ಮಾಡಲಾಗಿತ್ತು ವಿವಿಧ ಗ್ರಾಮಗಳಿಂದ ಭಕ್ತರ ನೂರಾರು ಸಂಖ್ಯೆಯಲ್ಲಿ ಸೇರಿವ ದೇವರ ದರ್ಶನ ಪಡೆದು ಪುನೀತರಾದರು.