ಚಳ್ಳಕೆರೆ: ಪ್ರತಿ ವರ್ಷದಂತೆ ಈ ವರ್ಷವೂ ದಸರಾ ಹಬ್ಬದ ವಿಜಯದಶಮಿಯನ್ನು ತಾಲೂಕಿನ ಜನತೆ ಸಂಭ್ರಮ ಸಡಗರದಿಂದ ಆಚರಿಸಿದರು

ಪಟ್ಟಣದ ಸೂಜಿಮಲ್ಲೇಶ್ವರ ನಗರದ ಹೊರವಲಯದ ಬನ್ನಿ ಮಂಟಪಕ್ಕೆ ಆರಾಧ್ಯ ದೇವತೆಗಳಾದ ವೀರಭದ್ರಸ್ವಾಮಿ, ಚಳ್ಳಕೇರಮ್ಮ ಹಾಗೂ ಉಡುಸುಲಮ್ಮ ದೇವತೆಗಳು ಅಲಂಕಾರಗೊಂಡ ಹೂವಿನ ಪಲ್ಲಕ್ಕಿಯಲ್ಲಿ ವಾದ್ಯಮೇಳ ಹಾಗೂ  ಪುರಂತಪ್ಪರ ವೀರ  ನಾಟ್ಯದೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ಬನ್ನಿ ಮಂಟಪದ ಸುತ್ತ ದೇವರುಗಳ ಪ್ರದಕ್ಷಿಣೆ ನಂತರ ಬನ್ನಿ ಮರಕ್ಕೆ ಪುರಂತಪ್ಪ ಮೊದಲು ಪೂಜೆ ಸಲ್ಲಿಸಿದರು ಪುರೋಹಿತ ವರ್ಗ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು ಪುರಂತಪ್ಪ ಬಾಳೆ ಕಂದನ್ನು ಕತ್ತರಿಸುವ ಮೂಲಕ  ನವರಾತ್ರಿಯ ಹಬ್ಬಕ್ಕೆ ವಿದ್ಯುಕ್ತವಾಗಿ ತೆರೆ ಎಳೆಯಲಾಯಿತು. ನಗರದ ವಿವಿಧ ಕಡೆಗಳಿಂದ ಆಗಮಿಸಿದ ಭಕ್ತರು ದೇವತೆಗಳ ದರ್ಶನ ಪಡೆದು ಪೂಜೆ ಸಲ್ಲಿಸಿ ಬನ್ನಿ ಮರದ ಪತ್ರೆಯನ್ನು ಪುರಂತಪ್ಪನವರಿಂದ ಪಡೆದು ಬಂಧುಗಳು, ಸ್ನೇಹಿತರಿಗೆ ಹಾಗೂ ನೆರೆ ಹೊರೆಯವರಿಗೆ ಹಂಚಿ ಪರಸ್ಪರ ವಿಶ್ವಾಸ ಕೋರಿಕೊಂಡದ್ದು  ವಿಶೇಷವಾಗಿ ಕಂಡು ಬಂದಿತು.

Namma Challakere Local News
error: Content is protected !!