ನಾಯಕನಹಟ್ಟಿ::ತೀರ್ಪುಗಾರರ ಯಾವುದೇ ವ್ಯಕ್ತಿ ಒಬ್ಬನ ಪರವಾಗಿ ತಪ್ಪು ತೀರ್ಪು ನೀಡುವುದರ ಬದಲಾಗಿ ಕ್ರೀಡಪಟುವಿಗೆ ಉತ್ತೇಜನ ನೀಡುವ ದಿಕ್ಕಿನಲ್ಲಿ ತೀರ್ಪು ನೀಡಬೇಕು ಎಂದು ರಾಜ್ಯ ಎಸ್ ಟಿ ಮೋರ್ಚ ಕಾರ್ಯಕಾರಣಿ ಸದಸ್ಯ ಪಾಪೇಶ್ ನಾಯಕ ಹೇಳಿದ್ದಾರೆ.
ಅವರು ಬುಧವಾರ ನಾಯಕನಹಟ್ಟಿ ಪಟ್ಟಣದ ಶ್ರೀ ಏಕಾಂತೇಶ್ವರಿ ಮಠದ ಆವರಣದಲ್ಲಿ ನಾಯಕನಹಟ್ಟಿ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಕ್ರೀಡಾಪಟುಗಳಿಗೆ ಶುಭ ಹಾರೈಸಿ ಮಾತನಾಡಿದ್ದಾರೆ ಜೀವನದಲ್ಲಿ ಪ್ರತಿಯೊಬ್ಬರಿಗೂ ಕ್ರೀಡೆ ಅತ್ಯಮೂಲ್ಯವಾದದ್ದು ಮಾನಸಿಕವಾಗಿ ದೈಹಿಕವಾಗಿ ಯುವಕರು ಸದೃಢರಾಗಲು ಕ್ರೀಡೆ ಉತ್ತಮವಾದದ್ದು . ಕ್ರೀಡೆ ಮನಸ್ಸಿಗೆ ಮೃದ ಹಾಗೂ ದೈಹಿಕವಾಗಿ ಬಲ ನೀಡುವ ಕ್ರೀಡೆ ಆದ್ದರಿಂದ ಮಾಜಿ ಸಚಿವ ಬಿ ಶ್ರೀರಾಮುಲು ರವರು ಈ ಕ್ರೀಡಾಕೂಟಕ್ಕೆ ಆರ್ಥಿಕ ಸಹಾಯವನ್ನು ನೀಡಿರುತ್ತಾರೆ ಆಯೋಜಕರು ನಡೆಸುವ ಹೋಬಳಿ ಮಟ್ಟವು ಮುಂದಿನ ದಿನಗಳಲ್ಲಿ ತಾಲೂಕು ಮಟ್ಟ ಜಿಲ್ಲಾ ಮಟ್ಟದ ಕ್ರಿಕೆಟ್ ಕ್ರೀಡಾಕೂಟ ಈ ಪುಣ್ಯಕ್ಷೇತ್ರದಲ್ಲಿ ನಡೆಯಬೇಕು ಎಂದು ಕ್ರೀಡಾಪಟುಗಳಲ್ಲಿ ಉತ್ಸಾಹ ನೀಡಿದರು.
ಇದೇ ಸಂದರ್ಭದಲ್ಲಿ ನಾಯಕನಹಟ್ಟಿ ಮಂಡಲ ಕಾರ್ಯದರ್ಶಿ ಎಚ್ ಬಿ ಪ್ರಕಾಶ್ ರೆಡ್ಡಿ, ಪಟ್ಟಣ ಪಂಚಾಯತಿ ಸದಸ್ಯ ಎನ್ ಮಹಾಂತಣ್ಣ, ಯುವ ಮುಖಂಡರಾದ ವಿಷ್ಣು, ತ್ರಿಶೂಲ ಕುಮಾರ್, ಪ್ರಹ್ಲಾದ್, ನಿರಂಜನ್, ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಆಯೋಜಕರು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು