ಖಾಯಿಲೆಯಿಂದ ಯಾರೂ ಕೂಡ ಬಳಲುಬಾರದು-ಇಂದಿನಿAದ ಆಯುಷ್ ಸೇವಾ ಗ್ರಾಮ ಕಾರ್ಯಕ್ರಮದಲ್ಲಿ ಪ್ರತಿ 15 ದಿನಕ್ಕೊಮ್ಮೆ ನಿಮ್ಮ ಊರಿಗೆ ವೈದ್ಯರ ಬೇಟಿ ಶಾಸಕ ಟಿ.ರಘುಮೂರ್ತಿ ಅಭಾಯ
ಚಳ್ಳಕೆರೆ : ಇಂದಿನಿAದ ಆಯುಷ್ ಸೇವಾ ಗ್ರಾಮ ಕಾರ್ಯಕ್ರಮದಲ್ಲಿ ಪ್ರತಿ 15 ದಿನಕ್ಕೊಮ್ಮೆ ನಿಮ್ಮ ಊರಿಗೆ ವೈದ್ಯರು ನಿಯಮಿತವಾಗಿ ಆಗಮಿಸಿ ಚಿಕಿತ್ಸೆಯನ್ನು ನೀಡುವರು ಖಾಯಿಲೆಯಿಂದ ಯಾರೂ ಕೂಡ ಬಳಲುಬಾರದು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ತಾಲೂಕಿನ ಪೆತ್ತಮ್ಮರಹಟ್ಟಿಯಲ್ಲಿ ಆಯುಷ್ ಇಲಾಖೆ ವತಿಯಿಂದ ಆಯೋಜಿಸಿದ ಆಯುಷ್ ಸೇವಾ ಗ್ರಾಮ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಆಯುರ್ವೇದವು ಭಾರತದ ವೈದ್ಯ ಪದ್ಧತಿಯಾಗಿದ್ದು ಇಂದು ವಿಶ್ವದಾದ್ಯಂತ ಜನಮನ್ನಣೆಯನ್ನು ಪಡೆದುಕೊಂಡಿದೆ. ಈ ವೈದ್ಯ ಪದ್ಧತಿಯಲ್ಲಿ ಕಾಯಿಲೆಯನ್ನು ಗುಣಪಡಿಸುವುದರ ಜೊತೆಗೆ ದೇಹವು ಸದೃಢವಾಗುವಂತೆ ಚಿಕಿತ್ಸೆಯನ್ನು ನೀಡಲಾಗುವುದು. ಇಂದಿನಿAದ ಆಯುಷ್ ಸೇವಾ ಗ್ರಾಮ ಕಾರ್ಯಕ್ರಮದಲ್ಲಿ ಪ್ರತಿ15 ದಿನಕ್ಕೊಮ್ಮೆ ನಿಮ್ಮ ಊರಿಗೆ ವೈದ್ಯರು ನಿಯಮಿತವಾಗಿ ಆಗಮಿಸಿ ಚಿಕಿತ್ಸೆಯನ್ನು ನೀಡುವರು. ಈ ಕಾರ್ಯಕ್ರಮದ ಪ್ರಯೋಜನವನ್ನು ತಾವೆಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ.ಚಂದ್ರಕಾAತ್ ನಾಗಸಮುದ್ರ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ, ಜನರು ಪ್ರಾಥಮಿಕವಾಗಿ ಮನೆಮದ್ದುಗಳಲ್ಲಿ ಚಿಕಿತ್ಸೆಯನ್ನು ಮನೆಯಲ್ಲೇ ಪಡೆದುಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಕಾಯಿಲೆಯನ್ನು ಕೇವಲ ಔಷಧದಿಂದ ಗುಣಪಡಿಸಲು ಸಾಧ್ಯವಿಲ್ಲ. ಔಷಧದೊಂದಿಗೆ ಮನೆಮದ್ದು ಪಥ್ಯ ಜೀವನಶೈಲಿ ಇವುಗಳನ್ನು ರೂಡಿಸಿಕೊಂಡಲ್ಲಿ ಮಾತ್ರ ಪರಿಪೂರ್ಣ ಆರೋಗ್ಯ ನಿಮ್ಮದಾಗುತ್ತದೆ. ಪರಿಪೂರ್ಣ ಆರೋಗ್ಯಕ್ಕೆ ಅವಶ್ಯಕವಿರುವ ನೈರ್ಮಲ್ಯ, ಮನೆಮದ್ದು ,ಪಥ್ಯ, ಯೋಗ ಆಹಾರ ಪದ್ಧತಿ ಇವೆಲ್ಲವುಗಳನ್ನು ಆಯುಷ್ ಸೇವಾಗ್ರಾಮ ಕಾರ್ಯಕ್ರಮದಲ್ಲಿ ವೈದ್ಯರು ನಿಮ್ಮ ಊರಿಗೆ ಬಂದು ತಿಳಿಸಿಕೊಡಲಿದ್ದಾರೆ ಹಾಗು ಉಚಿತ ತಪಾಸಣೆ,ಔಷಧಿ ನೀಡಲಿದ್ದಾರೆ, ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ಪೂರ್ಣ ಪ್ರಯೋಜನವನ್ನು ಪಡೆದುಕೊಂಡು ಆಯುಷ್ ಇಲಾಖೆಯ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.
ಇನ್ನೂ ವೇದಿಕೆಯ ಮೇಲೆ ನನ್ನಿವಾಳ ಗ್ರಾಮಪಂಚಾಯಿತಿ ಅಧ್ಯಕ್ಷೆ ಶಿವಮ್ಮರಾಜಣ್ಣ, ಉಪಾಧ್ಯಕ್ಷರಾದ ಬಿಬಿ ಜಾನ್, ಗ್ರಾಮ ಪಂಚಾಯತಿ ಸದಸ್ಯರಾದ ದೊರೆ ಬೈಯಣ್ಣ, ಸಣ್ಣಬೋರಮ್ಮ, ಓ.ಚಿನ್ನಯ್ಯ, ಓ.ಓಬಯ್ಯ, ಸೈಯದ್ ಸಮಿವುಲ್ಲಾ ಹಾಗು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಾಲಯ್ಯ ಹಾಜರಿದ್ದರು, ಆಯುಷ್ ಇಲಾಖೆಯ ವೈಧ್ಯಾಧಿನಕಾರಿಗಳಾದ ಡಾ.ಕುಮಾರಸ್ವಾಮಿ, ಡಾ.ಪ್ರಭು, ಡಾ.ಉದಯ ಭಾಸ್ಕರ್, ಡಾ. ಅನಿಲ್‌ಕುಮಾರ್, ಡಾ.ಕಲ್ಪನಾ ಡಾ.ರಘುವೀರ್ ಹಾಗೂ ಸಿಬ್ಬಂದಿಯವರು ಭಾಗವಹಿಸಿದ್ದರು