ಮನುಷ್ಯನ ರೀತಿಯಲ್ಲಿ ಪಶುಗಳಿಗೆ ಅಂಬ್ಯೂಲೆನ್ಸ್ ಸೇವೆ ತುರ್ತು ನೆರವಿಗೆ ಪಶು ಇಲಾಖೆ ಸನ್ನದ್ದು : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಬಯಲು ಸೀಮೆಯಲ್ಲಿ ವಿವಿಧ ರೋಗಗಳಿಂದ ಬಳಲುತ್ತಿರುವ ಜಾನುವಾರುಗಳ ಚಿಕಿತ್ಸೆಯ ನೆರವಿಗಾಗಿ ಆಯಾ ಗ್ರಾಮಕ್ಕೆ ಹೋಗಿ ಚಿಕಿತ್ಸೆ ಸೌಲಭ್ಯ ನೀಡುವುದಕ್ಕಾಗಿ ಸರ್ಕಾರ ತುರ್ತು ಚಿಕಿತ್ಸಾ ವಾಹನದ ಸೌಲಭ್ಯ ನೀಡಿದೆ ಇದನ್ನು ಎಲ್ಲಾ ಪಶು ಪಾಲಕರು ಸದುಪಯೊಗ ಪಡಿಸಿಕೊಳ್ಳಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಬಿಎಂಜಿಹೆಚ್‌ಎಸ್ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಪಶುಸಂಗೋಪನೆ ಇಲಾಖೆಯಿಂದ ಆಯೋಜಿಸಿದ್ದ ಪಶು ಸಂಜೀವಿನಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ಜಾನುವಾರುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡುವ ಅನಿವಾರ್ಯದಿಂದ ಜಾನುವಾರುಗಳು ಇದ್ದಲ್ಲಿಗೆ ತೆರಳಿ ಚಿಕಿತ್ಸೆ ನೀಡುವ ಮಹತ್ವದ ಕಾರ್ಯ ಇದಾಗಿದೆ ಆದ್ದರಿಂದ
ರೈತರು ತಮ್ಮ ರಾಸುಗಳಿಗೆ ರೋಗಗಳಿಗೆ ತುತ್ತಾದಗ ಆಸ್ಪತ್ರೆಗೆ ಕರೆತರಲು ಆಗದೆ ಇರುವ ಸಂದರ್ಭದಲ್ಲಿ ಮನುಷ್ಯರಿಗೆ 108 ಅಂಬ್ಯಲೆನ್ಸ್ ಎಷ್ಟು ಮುಖ್ಯವೋ ಅದೇ ರೀತಿ 1962 ಸಂಖ್ಯೆಗೆ ಕರೆ ಮಾಡಿದರೆ ಸಾಕು ಪಶು ಸಂಜೀವಿನಿ ವಾಹನ ನಿಮ್ಮ ಮನೆ ಬಾಗಿಲಿಗೆ ಬಂದು ಪಶು ವೈದ್ಯಾಧಿಕಾರಿಗಳು ರಾಸುಗಳ ಚಿಕಿತ್ಸೆ ನೀಡುತ್ತಾರೆ.
ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯಾದ್ಯಾಂತ 290 ಅಂಬುಲೆನ್ಸ್ ವಾಹನಗಳನ್ನು ಪಶು ಇಲಾಖೆಗೆ ನೀಡಲಾಗಿದೆ. ಇದರಲ್ಲಿ ತಾಲ್ಲೂಕಿನ ಪಶು ಇಲಾಖೆ 2 ಸಂಚಾರಿ ಪಶು ಚಿಕಿತ್ಸಾ ಘಟಕ ವಾಹನಗಳನ್ನು ನೀಡಲಾಗಿದ್ದು, ಈ ವಾಹನಗಳು ಮುಂಜಾನೆಯಿAದ ಸಂಜೆಯತನಕ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತವೆ. ರೋಗ ಬಂದು ಮೇವು ತಿನ್ನದೆ ನಡೆಯಲು ಬಾರದೆ ನಿಯಂತ್ರಾಣಗೊAಡ ಜಾನುವಾರುಗಳಿಗೆ ಸ್ಥಳಕ್ಕೆ ಪಶು ಸಂಜೀವಿನಿ ವಾಹನ ಬಂದು ಚಿಕಿತ್ಸೆ ನೀಡುತ್ತದೆ. ಇದರ ಸೌಲಭ್ಯವನ್ನು ರೈತರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ರೇವಣ್ಣ ಮಾತನಾಡಿ ಪಶು ಸಂಜೀವಿನಿ ವಾಹನವು ಜನವಾರುಗಳಿಗೆ ತುರ್ತು ಚಿಕಿತ್ಸೆ ನೀಡುವಂತೆ ವಾಹನವಾಗಿದೆ. ಈ ವಾಹನದಲ್ಲಿ ಒಬ್ಬ ಚಾಲಕ ಕಮ್ ಡಿ-ಗ್ರೂಪ್, ಒಬ್ಬ ತಾಂತ್ರಿಕ ಸಿಬ್ಬಂದಿ ಮತ್ತು ಒಬ್ಬರು ಪಶು ವೈದ್ಯರು ಕಾರ್ಯನಿರ್ವಹಿಸುತ್ತದೆ, ತಾಲೂಕಿನಲ್ಲಿ ಒಟ್ಟಾರೆ 80 ಸಾವಿರ ಜಾನೂವಾರಗಳ ಸಂಖ್ಯೆ ಇದೆ, ರೈತರು ತಮ್ಮ ಜಾನುವಾರುಗಳಿಗೆ ರೋಗ-ರುಜಿನಗಳ ಉಂಟಾಗಿ ನಡೆಯಲು ಬಾರದೆ ನಿಯಂತ್ರಾಣಗೊAಡಾಗ ಪಶು ಸಂಜೀವಿನಿ ವಾಹನದ ತುರ್ತು ಸಂಖ್ಯೆ 1962 ಕ್ಕೆ ಕರೆ ಮಾಡಿದರೆ ಸಾಕು ಮನೆ ಮನೆ ಬಾಗಿಲಿಗೆ ಬಂದು ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ವೇಳೆ ತಾಪಂ ಇಓ ಹೊನ್ನಯ್ಯ, ಪಶು ವೈದ್ಯಾಧಿಕಾರಿಗಳು ಮುಂತಾದವರು ಇದ್ದರು.

About The Author

Namma Challakere Local News
error: Content is protected !!