ಚಳ್ಳಕೆರೆ : ಸ್ವಾತಂತ್ರö್ಯಕ್ಕಾಗಿ ಹೋರಾಡಿ ಪ್ರಾಣವನ್ನು ತೆತ್ತ ಅದೇಷ್ಠೋ ವೀರ ಯೋಧರು ನಮ್ಮ ಕಣ್ಣಾ ಮುಂದೆ ಇದ್ದಾರೆ ಅಂತವರಿಗೆ ನಾವು ತೋರುವ ಗೌರವೊಂದೆ ಅವರ ಆತ್ಮಕ್ಕೆ ಶಾಂತಿ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಬಿಎಂಜಿಹೆಚ್ಎಸ್ ಪ್ರೌಢಶಾಲೆಯ ಬಯಲು ರಂಗಮAದಿರದಲ್ಲಿ ತಾಲೂಕು ಪಂಚಾಯಿತ್, ನಗರಸಭೆ, ಹಾಗೂ ಯುವ ಜನ ಕ್ರೀಡಾ ಇಲಾಖೆ ಇವರ ಸಹಯೋಗದೊಂದಿಗೆ 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನನ್ನ ಮಣ್ಣು ನನ್ನ ದೇಶ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸ್ವಾತಂತ್ರö್ಯಕ್ಕಾಗಿ ಹೋರಾಡಿ ಹುತಾತ್ಮರಾದ ಹಾಗೂ ಹೋರಾಟದಲ್ಲಿ ಭಾಗವಹಿಸಿದ ನಾಯಕರನ್ನು ನೆನೆಯುವ ಸಲುವಾಗಿ ದೆಹಲಿಯಲ್ಲಿ ಹುತಾತ್ಮರ ಸ್ಮಾರಕ ನಿರ್ಮಾಣಕ್ಕೆ ದೇಶದ ಎಲ್ಲಾ ಹಳ್ಳಿಗಳಿಗೆ ಎಲ್ಲಾ ಭಾಗಗಳಿಂದ ಮಣ್ಣು ತರುವ ಮೂಲಕ ಕೇವಲ ಮಣ್ಣು ಎಂಬAತಾಗದೆ ದೇಶದ ಒಗ್ಗೂಟ ಕೂಡ ಇದೆ, ಇಂದು ವೀರ ಸೇನಾನಿಗಳ ತ್ಯಾಗ ಬಲಿದಾನಗಳ ಮೂಲಕ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದಲ್ಲಿ ಅಮೃತ ಮಟ್ಟಿ ಮೂಲಕ ದೇಶ ಭಕ್ತಿ ಮೆರೆಯೋಣ, ಮೇರಿ ಮಾಟಿ ಮೇರಿ ದೇಶ ಎಂಬ ಅರ್ಥದಲ್ಲಿ ಉದ್ಘಾಟನೆಯಾದ ಈ ಕಾರ್ಯಕ್ರಮ ಕಳೆದ ಆ.9 ರಿಂದ ಅ.30ರವರೆಗೆ ನಡೆಯುವ ಈ ಕಾರ್ಯಕ್ರಮವಾಗಿದೆ.
ಇನ್ನೂ ತಾಲೂಕು ಪಂಚಾಯಿತ್ ಕಾರ್ಯನಿರ್ವಾಣಾಧಿಕಾರಿ ಇಓ.ಹೊನ್ನಯ್ಯ ಮಾತನಾಡಿ ಗ್ರಾಮೀಣ ಭಾಗದ ಎಲ್ಲಾ ನಮ್ಮ ತಾಲೂಕಿನ ಎಲ್ಲಾ ಗ್ರಾ.ಪಂ ಗಳಿಂದ ಸಂಗ್ರಹಿಸಲಾದ ಮಣ್ಣನ್ನು ರಾಷ್ಟ್ರದ ರಾಜಧಾನಿಯಾದ ನವದೆಹಲಿಗೆ ನಮ್ಮ ದೇಶಕ್ಕಾಗಿ ಶ್ರಮಿಸಿದ, ತ್ಯಾಗ ಮತ್ತು ಬಲಿದಾನವಾದ ವ್ಯಕ್ತಿಗಳ ಸ್ಮರಣೆಗಾಗಿ ಈ ಮಣ್ಣನ್ನು ರಾಷ್ಟ್ರದ ರಾಜಧಾನಿಯಲ್ಲಿ ಯುನೀಕ್ ಪವಿತ್ರವಾದ ಉದ್ಯಾನವನ ನಿರ್ಮಿಸಲು ಉಪಯೋಗಿಸುವುದಕ್ಕಾಗಿ ಕಳುಹಿಸುತ್ತಿರುವುದು ಹೆಮ್ಮೆಯ ವಿಷಯವೆಂದು ಸಂತಸ ವ್ಯಕ್ತಪಡಿಸಿದರು.
ಇನ್ನೂ ನಿವೃತ್ತ ಯೋದ ಗೊವಿಂದ್ ರೆಡ್ಡಿ ಮಾತನಾಡಿದರು, ಕಾರ್ಯಕ್ರಮಕ್ಕೂ ಮುನ್ನ ತಾಲೂಕು ಪಂಚಾಯತ್ ಆವರಣದಿಂದ ವಾಲ್ಮೀಕಿ ವೃತ್ತದಿಂದ ಪ್ರಮುಖ ರಸ್ತೆಯಲ್ಲಿ ನೆಹರು ವೃತ್ತದ ಮೂಲಕ ಅಮೃತ ಕಳಸ, ಕಲಾತಂಡ, ಆಶಾ, ಅಂಗನವಾಡಿ ಕಾರ್ಯಕರ್ತರಿಂದ ಜಾಗೃತಿ ಜಾಥ ನಡೆಸಿ ನಂತರ ಕಾರ್ಯಕ್ರಮದ ವೇಧಿಕೆಗೆ ಸಾಕ್ಷಿಯಾಯಿತು.
ಇದೇ ಸಂಧರ್ಭದಲ್ಲಿ ತಾಲೂಕಿನ ನಿವೃತ್ತ ಯೋಧರಾದ ಮಂಜುನಾಥ್ರೆಡ್ಡಿ, ಗೋವಿಂದರೆಡ್ಡಿ, ಕರಿಯಣ್ಣ, ಮುಕ್ತಹಮ್ಮ್ದ್ ಅಲಿ, ಮಧುಸೂಧನ್, ತಿಮ್ಮಣ್ಣ ಬೆಳೆಗೆರೆ, ವೆಂಕಟೇಶರೆಡ್ಡಿ, ಶಿವಮೂರ್ತಿ, ಮಹದೇವಯ್ಯ, ಜಯರಾಮ್, ಹಾಗೂ ಸುಬ್ಬಯ್ಯರೆಡ್ಡಿ ವರಲಕ್ಷ್ಮಿ, ಸ್ವಾತಂತ್ರ್ಯ ಹೋರಾಟಗಾರರು. ಜೊತೆಗೆ ತಾಲೂಕು ಮಟ್ಟದ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹೊನ್ನಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಕೆಎಸ್.ಸುರೇಶ್, ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ, ಸಿಡಿಪಿಓ.ಹರಿಪ್ರಸಾದ್, ಪಶು ಇಲಾಖೆ ಸಹಾಯಕ ಅಧಿಕಾರಿ ಡಾ.ರೇವಣ್ಣ, ಡಾ.ಕಾಶಿ, ಎಇಇ ಕಾವ್ಯ, ಅರಣ್ಯಅಧಿಕಾರಿ ಬಹುಗುಣ, ತಾಪಂ ಸಹಾಯಕ ನಿರ್ದೇಶಕ ಸಂತೋಷ ಕುಮಾರ್, ಸಂಪತ್ಕುಮಾರ್, ಆರೋಗ್ಯ ಸಹಾಯಕ ಅಧಿಕಾರಿ ಕುದಾಪುರ ತಿಪ್ಪೇಸ್ವಾಮಿ, ಕೃಷಿ ಅಧಿಕಾರಿ ಅಶೋಕ್, ವಿರುಪಾಕ್ಷಪ್ಪ ಇತರರು ಇದ್ದರು.