ಚಳ್ಳಕೆರೆ : ತಡ ರಾತ್ರಿ ಮನೆ ಮುಂದೆ ನಿಲ್ಲಿಸಿರುವ ಬೈಕನ್ನು ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟಿರುವ ಘಟನೆ ಚಳ್ಳಕೆರೆ ನಗರದಲ್ಲಿ ವರದಿಯಾಗಿದೆ.
ನಗರದ ಬಳ್ಳಾರಿ ರಸ್ತೆ ಎರಡನೇ ಕ್ರಾಸ್‌ನಲ್ಲಿ ಬರುವ ರಮೇಶ್ ಆಚಾರ್ ಎಂಬುವರ ಬಂಗಾರದ ಅಂಗಡಿಯ ಮುಂದೆ ನಿಲ್ಲಿಸಿರುವ ಸೂಪರ್ ಸ್ಪೆಂಡರ್ ಬೈಕ್ ಅನ್ನು ಕಿಡಿಗೇಡಿಗಳು ಹಳೆ ವೈಶ್ಯಮ್ಯದ ದ್ವೇಷದಿಂದ ಸುಟ್ಟಾಕಿದ್ದಾರೆ ಎಂದು ಶಂಕಿಸಲಾಗಿದೆ.
ಈ ಬೈಕ್ ಅನ್ನು ವೀರಭದ್ರ ದೇವಸ್ಥಾನದ ರಸ್ತೆಯಲ್ಲಿ ಸುಮಾರು 4 ಗಂಟೆ ಸಮಯದಲ್ಲಿ ಸುಟ್ಟು ಹಾಕಿದ್ದಾರೆ ಎಂದು ಅಂದಾಜಿಸಲಾಗಿದೆ.
ಸೂಪರ್ ಸ್ಪೆಂಡರ್ ಬೈಕು ಸುಟ್ಟು ಕರಕಲಾಗಿದ್ದು ಬೈಕ್ ಮಾಲಿಕ ರಮೇಶ್ ಆಚಾರ್ ಆತಂಕಕ್ಕೆ ಒಳಗಾಗಿದ್ದಾರೆ