ನಾಯಕನಹಟ್ಟಿ: ಮಹಿಳೆಯರು ತಮ್ಮ ಕುಟುಂಬದ ನಿರ್ವಹಣೆಯ ಜವಾಬ್ದಾರಿ ಹೊತ್ತು ಮನೆ ಕೆಲಸಗಳಿಗೆ ಸೀಮಿತ ಎಂಬ ಭಾವನೆಯನ್ನು ತೊಡೆದುಹಾಕಿ ಸಾಲ ಸೌಲಭ್ಯವನ್ನು ನೀಡಿ ಸ್ವಯಂ ಉದ್ಯೋಗವನ್ನು ಕಲ್ಪಿಸಿಕೊಂಡು ಸ್ವಾವಲಂಬನೆ ಜೀವನವನ್ನು ನಡೆಸಲು ಅನುಕೂಲ ಮಾಡಿಕೊಟ್ಟ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯ ಪ್ರಶಂಸನೀಯವಾದದು ಎಂದು ನಾಯಕನಹಟ್ಟಿ ಹೋಬಳಿಯ ಪಿಎಸ್ಐ ದೇವರಾಜ್ ಅಭಿಪ್ರಾಯಪಟ್ಟರು

ಅವರು ಭಾನುವಾರ ಪಟ್ಟಣದ ಅಂಗನವಾಡಿ ,ಬಿ.ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸರ್ಕಾರಿ ಸೌಲಭ್ಯಗಳು ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಧರ್ಮಸ್ಥಳ ಸಂಘವು ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿ ಸಾಲ ಸೌಲಭ್ಯ ನೀಡಿ ಮಹಿಳೆಯರು ಸಹ ದುಡಿಮೆ ಮಾಡಿ ತಮ್ಮ ಕುಟುಂಬದ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸಲು ನೆರವಾಗಿದೆ.

ಪುರುಷ ಪ್ರಧಾನದ ಸಮಾಜದಲ್ಲಿ ಮಹಿಳೆಯರು ಅನೇಕ ಶೋಷಣೆಗಳನ್ನು ಎದುರಿಸುತ್ತಿದ್ದರು ಈಗ ಆ ನಿಯಮಗಳು ಬದಲಾಗಿ ಸರ್ಕಾರ ಮಹಿಳೆಯರ ಶ್ರೇಯೋಭಿವೃದ್ಧಿಗೆ ಮೀಸಲಾತಿಗಳನ್ನು ಕಲ್ಪಿಸಿ ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಮುನ್ನೆಲೆಗೆ ಬರಲು ಮೀಸಲಾತಿಗಳನ್ನು ಕಲ್ಪಿಸಿರುವುದಲ್ಲದೆ ಶಿಕ್ಷಣ ವ್ಯವಸ್ಥೆಯಲ್ಲಿ ಉಚಿತ ಶಿಕ್ಷಣ ನೀಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನೆರವಾಗುತ್ತಿದೆ ಮಹಿಳೆಯರು ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಜೀವನವನ್ನು ಕಟ್ಟಿಕೊಳ್ಳುವತ್ತ ಗಮನಹರಿಸಬೇಕು ಹಾಗೆಯೇ ಕಾನೂನಿನ ವಿಚಾರದಲ್ಲಿ ಎಲ್ಲರಿಗೂ ನ್ಯಾಯ ಪಡೆಯುವ ಅವಕಾಶವಿದ್ದು ಮಹಿಳೆಯರಿಗೆ ಅನ್ಯಾಯವಾದ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ಬರಲು ಭಯಪಡದೆ ನೇರವಾಗಿ ಬಂದು ದೂರು ದಾಖಲಿಸಿ ನ್ಯಾಯವನ್ನು ಪಡೆಯಬೇಕು ಪೊಲೀಸ್ ಇಲಾಖೆ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಸದಾ ಸಿದ್ಧವಿರುತ್ತದೆ ಎಂದು ತಿಳಿಸಿದರು.

ಪತ್ರಕರ್ತ ನಲಗೇತನಹಟ್ಟಿ ಕೆ ಟಿ ಓಬಳೇಶ್ ಮಾತನಾಡಿ ಮಹಿಳೆಯರು ಮದರ್ ತೆರೇಸಾ ಇಂದಿರಾ ಗಾಂಧಿ ಕಲ್ಪನಾ ಚಾವ್ಲಾ ರಹಂತಹ ಮಹಿಳೆಯರನ್ನು ಆದರ್ಶವಾಗಿಟ್ಟುಕೊಂಡು ಸಾಧನೆ ಮಾಡುವತ್ತ ಗಮನಹರಿಸಬೇಕು ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹಗಳನ್ನು ಮಾಡದೆ ಉತ್ತಮ ವಿದ್ಯಾಭ್ಯಾಸ ನೀಡಿ ಅವರನ್ನು ಸಾಧನೆ ಮಾಡಲು ಪ್ರೇರೇಪಿಸಬೇಕು ಆಗ ಮಾತ್ರ ಮಹಿಳೆಯರ ನಿಜವಾದ ಸಬಲೀಕರಣ ಸಾಧ್ಯವಾಗುತ್ತದೆ ಎಂದರು..

ಇದೇ ಸಂದರ್ಭದಲ್ಲಿ ಪಟ್ಟಣದ ಪೊಲೀಸ್ ಠಾಣೆಯ ಪಿ ಎಸ್ ಐ ದೇವರಾಜ್, ಪತ್ರಕರ್ತ ಕೆ ಟಿ ಓಬಳೇಶ್, ಸಮನ್ವಯ ಅಧಿಕಾರಿ ಪಿ.ಯಶೋಧ, ಸೇವಾ ಪ್ರತಿನಿಧಿ ಅಶ್ವಿನಿ, ಸದಸ್ಯರಾದ ಶಾರದಮ್ಮ ನಿಗಿನಾಬಿ,ತಸ್ಲಿಮ್ ಬಾನು, ಸಲ್ಮಾಬಾನು ಶಾಕಿರಬಿ ಸೇರಿದಂತೆ ಇತರರು ಇದ್ದರು

About The Author

Namma Challakere Local News
error: Content is protected !!