ಚಿತ್ರದುರ್ಗ ನಗರದ ಕ್ಷೇತ್ರಸಮನ್ವಯಾಧಿಕಾರಿಗಳ, ಕ್ಷೇತ್ರಸಂಪನ್ಮೂಲ ಕೇಂದ್ರದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬಿಇಒ ಹಾಗೂ ಬಿಆರ್‌ಸಿ ಕಚೇರಿಗಳ ಸಿಬ್ಬಂದಿ ವರ್ಗದವರ ವತಿಯಿಂದ ಶಿಕ್ಷಣ ಇಲಾಖೆಯಲ್ಲಿ ಕಳೆದ ಐದು ವರ್ಷಗಳಿಂದ ಸಿಆರ್‌ಪಿಗಳಾಗಿ ಕರ್ತವ್ಯ ನಿರ್ವಹಿಸಿ ಈಗ ಬೇರೆಡೆ ವರ್ಗವಾದ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು ಬೇರೆಡೆ ವರ್ಗವಾದ ಎಲ್ಲರನ್ನೂ ಗೌರವಿಸಿ ಬೀಳ್ಕೊಡಲಾಯಿತು ಚಿತ್ರದುರ್ಗ ಬಿಇಒ ಎಸ್ ನಾಗಭೂಷಣ, ಬಿಆರ್‌ಸಿ ಈ ಸಂಪತ್‌ಕುಮಾರ, ಬಿಆರ್‌ಪಿ ಖಲಂದರ್, ತಾಲೂಕಿನ ಬಿಆರ್‌ಪಿ, ಇಸಿಒ, ಸಿಆರ್‌ಪಿಗಳು ಶಿಕ್ಷಕರು, ಶಿಕ್ಷಣ ಇಲಾಖೆಯ ಸಿಬ್ಬಂದಿ ಇದ್ದರು ಸಿಆರ್‌ಪಿ ಶ್ವೇತಾ ನಿರೂಪಿಸಿ, ಸಿಆರ್‌ಪಿ ಮೈಲಾರಪ್ಪ ಸ್ವಾಗತಿಸಿ ವಂದಿಸಿದರು