ಚಳ್ಳಕೆರೆ : ಚಳ್ಳಕೆರೆ ತಾಲೂಕು ಸತತ ಬರಗಾಲಕ್ಕೆ ತುತ್ತಾದ ಪ್ರದೇಶ ಇಂತಹ ಪ್ರದೇಶದಲ್ಲಿ ಈಗಾಗಲೇ ಬರಪೀಡಿತ ಪ್ರದೇಶ ಎಂದು ಘೋಷಣೆಯಾಗಿ ಕೇಂದ್ರ ಬರ ಅಧ್ಯಯನ ತಂಡದಿAದ ಸಮೀಕ್ಷೆ ನಡೆಸಿ ಹೋಗಿದೆ ಇನ್ನೂ ಕಾಲಕ್ಕೆ ತಕ್ಕಂತೆ ಮಳೆಯಾಗದೆ ರೈತರು ಕಣ್ಣಿರಲ್ಲಿ ಕೈತೊಳೆಯುತ್ತಿದ್ದಾರೆ ಆದರೆ ಇಂತಹ ಸಮಯದಲ್ಲಿ ವಿದ್ಯುತ್ ಕಟ್ ಮಾಡಿದರೆ ಹೇಗೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಕಿಡಿಕಾರಿದರು.
ಅವರು ನಗರದ ಬೆಸ್ಕಾಂ ಕಛೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಆಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನೂರಾರು ರೈತರು ಧರಣಿ ನಿರತರಾಗಿ ಬೆಸ್ಕಾ ವಿರುದ್ದ ಆಕ್ರೋಶ ಹೊರ ಹಾಕಿದರು. ಚಳ್ಳಕೆರೆ ತಾಲೂಕಿನಲ್ಲಿ ಯಾವುದೇ ನೀರಾವರಿ ಸೌಲಭ್ಯಗಳಿಲ್ಲದೆ ಕೇವಲ ಮಳೆ ಆಶ್ರಿತ ಪ್ರದೇಶವಾಗಿದ್ದು ಬರಗಾಲದಿಂದ ಇಂದು ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಸಿಲುಕಿದೆ ಇದರ ಜೊತೆಗೆ ಸರ್ಕಾರ ರೈತರಿಗೆ ವಿದ್ಯುತ್ ನೀಡದೆ ಇರುವುದರಿಂದ ಪಂಪ್ಸೆಟ್ಟುಗಳ ಮೂಲಕ ನೀರಾವರಿ ಬೆಳೆಗಳನ್ನು ಬೆಳೆಯಲು ಸಹ ಸಾಧ್ಯವಾಗದೆ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ ಸರ್ಕಾರ ಕೂಡಲೇ ರಾಜ್ಯದ ಜನತೆಗೆ ನೀಡಿರುವ ಉಚಿತ ವಿದ್ಯುತ್ ಘೋಷಣೆಯನ್ನು ಹಿಂಪಡೆದು ರೈತರಿಗೆ ನಿರಂತರ ವಿದ್ಯುತ್ ಒದಗಿಸಬೇಕು ಅಕ್ರಮ ಸಕ್ರಮದಲ್ಲಿ ಹಣ ಪಾವತಿಸಿದ ರೈತರಿಗೆ ಕೂಡಲೇ ಸಕ್ರಮಗೊಳಿಸಿ ಕಂಬ ವೈರ್ ಕೊಡಬೇಕು ಮತ್ತು ರಾತ್ರಿ ಸಮಯದಲ್ಲಿ ಕರೆಂಟ್ ತೆಗೆಯದಂತೆ ತೋಟದ ಮನೆಗಳಲ್ಲಿ ವಾಸಿಸುವ ರೈತರಿಗೆ ಮಕ್ಕಳವಿದ್ಯಾಭ್ಯಾಸಕ್ಕೆ ಅಡಿಗೆ ಮಾಡಲಿಕ್ಕೆ ಧನ, ಕರು ಪ್ರಾಣಿಗಳಿಗೆ ನೀರು ಕುಡಿಯಲಿಕ್ಕೆ ವಿದ್ಯುತ್ ಕೊಡಬೇಕೆಂದು ಆಗ್ರಹಿಸಿದರು.
ಪ್ರಗತಿಪರ ರೈತ ಆರ್‌ಎ ದಯಾನಂದ ಮೂರ್ತಿ ಮಾತನಾಡಿ ರಾಜ್ಯದಲ್ಲಿ ಇಂದು ವಿದ್ಯುತ್ ಅಭಾವ ಉಂಟಾಗಿದೆ ಇಂತಹ ಸಂಪತ್ತಿಗೆ ರಾಜ್ಯದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ, ಸರ್ಕಾರ ರೈತರನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ಎದುರಿಸಲು ಸಿದ್ಧರಾಗಬೇಕು ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ ರಾಜ್ಯದಲ್ಲಿ ಜಾಗ ನೀಡಿ ಸೋಲಾರ್ ವಿದ್ಯುತ್ತನ್ನು ಉತ್ಪಾದಿಸಲು ಖಾಸಗಿ ಕಂಪನಿಗಳಿಗೆ ಭೂಮಿ ನೀಡಿದ್ದರೂ ರಾಜ್ಯಕ್ಕೆ ಇದರಿಂದ ಯಾವುದೇ ಉಪಯೋಗವಾಗುತ್ತಿಲ್ಲ ಸೋಲಾರ್ ವಿದ್ಯುತ್ತನ್ನು ಬೇರೆ ರಾಜ್ಯಗಳಿಗೆ ಹೆಚ್ಚಿನ ಬೆಲೆ ಮಾರಿಕೊಳ್ಳಲು ರಾಜ್ಯ ಸರ್ಕಾರ ಅನುವು ಮಾಡಿ ಕೊಟ್ಟಿರುವುದರಿಂದ ರಾಜ್ಯ ಸರ್ಕಾರ ಕೂಡಲೇ ಬರಪೀಡಿತ ಜಿಲ್ಲೆಯಾದ ಚಿತ್ರದುರ್ಗ ಜಿಲ್ಲೆಗೆ ನಿರಂತರ ವಿದ್ಯುತ್ ನೀಡದೆ ಇದ್ದಲ್ಲಿ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳಿಗೂ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಟಿ.ಹಂಪಣ್ಣ, ಪ್ರಧಾನ ಕಾರ್ಯದರ್ಶಿ ಡಿಟಿ.ಮಂಜುನಾಥ, ಶ್ರೀನಿವಾಸ್ ರೆಡ್ಡಿ, ತಿಪ್ಪಯ್ಯ, ಮಂಜುನಾಥ್‌ರೆಡ್ಡಿ, ತಿಪ್ಪೇಸ್ವಾಮಿ, ರಾಮಣ್ಣ, ಗಂಗಾಧರ್, ದೇವರೆಡ್ಡಿಹಳ್ಳಿ, ಮಂಜುನಾಥ್ ರೆಡ್ಡಿ, ಗುರುಮುರ್ತೀ, ಆರ್.ದಯನಾಂದಮೂರ್ತಿ, ಜಯಣ್ಣ, ಕ್ಯಾತಣ್ಣ, ತಿಮ್ಮರೆಡ್ಡಿ, ಮಲ್ಲಯ್ಯ, ಚಿಕ್ಕಳ್ಳಿ ತಿಪ್ಪಣ್ಣ, ಕೃಷ್ಣಪ್ಪ ಶ್ರೀನಿವಾಸ ತಿಮ್ಮಣ್ಣ ಮಲ್ಲಯ್ಯ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು
ಇನ್ನೂ ಪ್ರತಿಭಟನೆಯಲ್ಲಿ ಬೆಸ್ಕಾಂ ಸಹಾಯಕ ಇಂಜಿನಿಯಾರ್ ಎಎಇ ರಾಜುರವರಿಗೆ ಮನವಿ ಸಲ್ಲಿಸಿದರು, ಇದೇ ಸಂಧರ್ಭದಲ್ಲಿ ತಳಕು ಬೆಸ್ಕಾಂ ಇಲಾಖೆಯ ತಿಮ್ಮರಾಜು ಇದ್ದರು,

About The Author

Namma Challakere Local News
error: Content is protected !!