ಚಳ್ಳಕೆರೆ : ಕೇಂದ್ರದ ಬರ ಅಧ್ಯಯನ ತಂಡ ತಾಲೂಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಬರಪೀಡಿತ ಪ್ರದೇಶಕ್ಕೆ ನೀಡುವ ಯಾವುದೇ ಸೌಲಭ್ಯಗಳನ್ನು ತಾಲೂಕಿಗೆ ಇದುವರೆಗೂ ಸರ್ಕಾರ ಮಂಜೂರು ಮಾಡಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆಪಿ ಭೂತಯ್ಯ ಆರೋಪಿಸಿದರು.
ನಗರದ ತಮ್ಮ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರುಗ್ರಾಮೀಣ ಪ್ರದೇಶಗಳಲ್ಲಿ ಮಳೆ ಕೊರತೆ ಕಾಡುತ್ತಿದೆ ರೈತರು ಮಳೆ ಆಶ್ರಯದಲ್ಲಿ ಬಿತ್ತನೆ ಮಾಡಿದ ಶೇಂಗಾ ಬೆಳ ಸಂಪೂರ್ಣವಾಗಿ ಒಣಗಿ ರೈತರಿಗೆ, ಅಪಾರ ನಷ್ಟವಾಗಿದೆ ನೀರಾವರಿಯಲ್ಲಿ ಬೆಳೆ ಬೆಳೆಯಲು ಸರ್ಕಾರ ವಿದ್ಯುತ್ ನೀಡದೆ ಇರುವುದರಿಂದ ಪಂಪ್ಸೆಟ್ಟುಗಳ ಮೂಲಕ ನೀರು ಹಾಯಿಸಲು ಸಾಧ್ಯವಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಏಳು ಗಂಟೆಗಳ ಕಾಲ ವಿದ್ಯುತ್ ನೀಡಬೇಕು ಎಂದು ಮನವಿ ಮಾಡಿದ್ದು ಜಿಲ್ಲಾಧಿಕಾರಿಗಳು ಐದು ಗಂಟೆಗಳ ಕಾಲ ವಿದ್ಯುತ್ ನೀಡಲಾಗುವುದು ಎಂದು ತಿಳಿಸಿದ್ದಾರೆ ಆದರೆ ರೈತರು ಬೆಳೆ ಬೆಳೆಯಲು ಇದು ಸಾಕಾಗುವುದಿಲ್ಲ ಆದ್ದರಿಂದ ಸರ್ಕಾರ ಗೃಹಜೋತಿ ಯೋಜನೆ ಅಡಿಯಲ್ಲಿ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಕಾರ್ಯಕ್ರಮವನ್ನು ರದ್ದು ಮಾಡಿ ಆ ವಿದ್ಯುತ್ತನ್ನು ರೈತರಿಗೆ ನೀಡಿದಲ್ಲಿ ರೈತರ ಜೀವ ಮತ್ತು ಜೀವನವನ್ನು ಉಳಿಸಿದಂತಾಗುತ್ತದೆ ಗ್ರಾಮೀಣ ಪ್ರದೇಶಗಳಲ್ಲಿ ಹಗಲಿನ ವೇಳೆ ನಿರಂತರ ಜ್ಯೋತಿ ಯೋಜನೆಯನ್ನು
ಸ್ಥಗಿತಗೊಳಿಸಿ ಬೆಳಗ್ಗೆ ನಾಲ್ಕು ಹಾಗೂ ಸಂಜೆ ಮೂರು ಗಂಟೆ ವಿದ್ಯುತ್ ಸರಬರಾಜು ಮಾಡಿದಲ್ಲಿ ರೈತರು ಬೆಳೆ ಬೆಳೆಯಲು ಸಹಕಾರಿಯಾಗುತ್ತದೆ ರೈತರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ರಾತ್ರಿಯ ವೇಳೆ ತಮ್ಮ ಜಮೀನುಗಳಲ್ಲಿ ಉಳಿದುಕೊಳ್ಳುತ್ತಿದ್ದು ಅಲ್ಲಿಯೇ ತಮ್ಮ ವಾಸವನ್ನು ಮಾಡುತ್ತಿದ್ದಾರೆ ಹೀಗಾಗಿ ವಿದ್ಯುತ್ ಕಡಿತಗೊಳಿಸುವುದರಿಂದ ರೈತರ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗುತ್ತಿಲ್ಲ ರೈತರು ಜೀವನ ನಡೆಸಲು ಸಹ ತೊಂದರೆಯಾಗುತ್ತಿದೆ ಆದ್ದರಿಂದ ಸರ್ಕಾರ 7 ಗಂಟೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡುವಂತೆ ಒತ್ತಾಯಿಸಿ ಅ.16ರ ಸೋಮವಾರದಂದು ರೈತ ಸಂಘ ಮತ್ತು ಸಾರ್ವಜನಿಕರು ಮಹಿಳೆಯರು ಪಕ್ಷಾತೀತವಾಗಿ ಬೆಸ್ಕಾಂ ಇಲಾಖೆಯ ಮುಂದೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.