ಚಿತ್ರದುರ್ಗ(ಕರ್ನಾಟಕ ವಾರ್ತೆ)ಅ.07:
ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಯೋಜನೆ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿಯ ಕಿರು ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ದೋಬಿ, ಇಸ್ತ್ರಿ ಸೇವೆ, ಹಳೆ ಪಾತ್ರೆಗಳ ವ್ಯಾಪಾರ, ಬಡಗಿ, ಬೀದಿರಿನ ಬುಟ್ಟಿ, ಬೊಂಬು, ಏಣಿ ವ್ಯಾಪಾರ, ಹೂವಿನ ಕುಂಡಗಳ ವ್ಯಾಪಾರ, ಮಡಿಕೆ ವ್ಯಾಪಾರ, ಆಹಾರ ತಯಾರಿಸಿ ಮಾರಾಟ ಮಾಡುವರು(ಕ್ಯಾಟರಿಂಗ್), ದಿನ ಪತ್ರಿಕೆ ಹಂಚಿಕೆ ಮತ್ತು ಹಾಲು ಮಾರಾಟ ಮಾಡುವವರು ಪಿಎಂ-ಸ್ವಾನಿಧಿ ಯೋಜನೆಯಡಿ ದೊರೆಯುವ ಸಾಲ ಸೌಲಭ್ಯಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.