ಚಳ್ಳಕೆರೆ : ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹೊರಮಠದ ದೇವಾಲಯದ ಆವರಣದಲ್ಲಿ ಕಂದಾಯ ಇಲಾಖೆ ಮತ್ತು ಕೆನರಾ ಬ್ಯಾಂಕ್ ಸಿಬ್ಬಂದಿಗಳು ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.
ಮಧ್ಯಕರ್ನಾಟಕದ ಭಾಗದ ಐತಿಹಾಸಿಕ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಭಕ್ತರು ನೀಡಿದ ಕಾಣಿಕೆಯನ್ನು ತಾಲೂಕು ಆಡಳಿತ ಸಿಬ್ಬಂದಿ ಹಾಗೂ ಮುಜಾರಾಯಿ ಇಲಾಖೆ ಇಓ ಗಂಗಾಧರ್ ನೇತೃತ್ವದಲ್ಲಿ ಶುಕ್ರವಾರ ಹುಂಡಿ ಎಣಿಕೆ ಕಾರ್ಯ ನಡೆಯಿತು
ಮೊದಲು ಹೊರಮಠ ದೇವಾಲಯದಲ್ಲಿ ಬೆಳಗ್ಗೆ 10 ಗಂಟೆಗೆ ಶುರುವಾದ ಎಣಿಕೆ ಕಾರ್ಯ ಮಧ್ಯಾಹ್ನ 12 ಗಂಟೆಗೆ ಮುಕ್ತಾಯವಾಯಿತು.
ನಂತರ ಒಳಮಠದಲ್ಲಿ ಆರಂಭವಾದ ಎಣಿಕೆ ಕಾರ್ಯ ಸಂಜೆ 6 ಕ್ಕೆ ಮುಕ್ತಾಯವಾಯಿತು.
ಹೊರಮಠದಲ್ಲಿ ₹6,62,132 ಲಕ್ಷ
ಒಳಮಠದಲ್ಲಿ₹ 30,94,200 ಲಕ್ಷ ದೇವಾಲಯದ ದಾಸೋಹ ₹2,72,740 ಮಂದಿರದ ಹುಂಡಿಯಲ್ಲಿ ಸಂಗ್ರಹವಾದ ಒಟ್ಟಾರೆ
₹ 40,29,072 ಲಕ್ಷ ಸಂಗ್ರಹವಾಗಿದೆ.
ಹೊರಮಠ ಮತ್ತು ಒಳಮಠ ಹುಂಡಿಯಲ್ಲಿ ಕೆಲವು ಬೆಳ್ಳಿ ನಾಣ್ಯಗಳು ಬೆಳ್ಳಿ ತೊಟ್ಟಿಲುಗಳು ಬೆಳ್ಳಿ ಆಭರಣಗಳು ಸಿಕ್ಕಿದ್ದು ವಿಶೇಷವಾಗಿತ್ತು.
ಇನ್ನು ಇದೇ ವೇಳೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್.ಗಂಗಾಧರಪ್ಪ ಮಾತನಾಡಿ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಅವರ ಆದೇಶದ ಮೇರೆಗೆ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ದೇವಸ್ಥಾನದ ಹುಂಡಿ ಎಣಿಕೆಯನ್ನು ಪ್ರಾರಂಭಿಸಲಾಗಿದೆ, ಎಂದಿನAತೆ ಅಧಿಕಾರಿಗಳು ಹುಂಡಿ ಎಣಿಕೆ ಮಾಡಿದ್ದು ಇದನ್ನು ಬ್ಯಾಂಕ್ ನಲ್ಲಿ ಇಂದೇ ಜಮಾ ಮಾಡಲಾಗುವುದು ಎಂದು ಮಾಧ್ಯಮದೊಂದಿಗೆ ಮಾತನಾಡಿದರು.
ಈ ಸಂದರ್ಭದಲ್ಲಿ ದೇವಾಲಯದ ಕಾರ್ಯ ನಿರ್ವಾಣ ಅಧಿಕಾರಿ ಎಚ್ ಗಂಗಾಧರಪ್ಪ. ನಾಡಕಚೇರಿ ಉಪ ತಹಶೀಲ್ದಾರ್ ಬಿ.ಶಕುಂತಲಾ, ಸಿರಸ್ತೆದಾರ್ ಸದಾಶಿವಪ್ಪ, ಆರ್‌ಐ.ಚೇತನ್‌ಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳಾದ, ಜಗದೀಶ್, ಶಂಕರ್, ಪುಷ್ಪಲತಾ, ಶರಣಬಸಪ್ಪ ,ಜೈರಾಮ್, ವಿ.ಎ.ಪದ್ಮಾಜ, ಲಕ್ಷಿö್ಮ, ಸರಸ್ವಪತಿ, ಮಂಜುಳಾ, ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ರಾಮ್ ಮೋಹನ್, ಮತ್ತು ಸಿಬ್ಬಂದಿಗಳು.
ಗ್ರಾಮ ಸಹಾಯಕರಾದ ಚನ್ನಬಸಪ್ಪ, ಓಬಣ್ಣ, ಹರೀಶ್, ಹೇಮಂತ್ ನಾಯ್ಕ, ಕುಮಾರ್, ನಾಗರಾಜ್,ಇತರರಿದ್ದರು.

ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಹೊರಮಠ-ಒಳಮಠದ ದೇವಾಲಯದ ಹುಂಡಿಯಲ್ಲಿ ₹ 40,29,072 ಲಕ್ಷ ಸಂಗ್ರಹ

.

About The Author

Namma Challakere Local News
error: Content is protected !!