ಚಳ್ಳಕೆರೆ : ತಾಲೂಕಿನ ದೊಡ್ಡುಳ್ಳಾರ್ತಿ ಗ್ರಾಮದಲ್ಲಿ ಬಸ್ ನಿಲ್ದಾಣ ಇದ್ದರು ಇಲ್ಲದಂತಾಗಿದೆ.
ಹೌದು ಗ್ರಾಮದ ಹೃದಯ ಭಾಗದಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ ಆದರೆ ನಿರ್ವಹಣೆ ಇಲ್ಲದೆ ಅವಸನದ ಅಂಚಿಗೆ ತಲುಪಿದೆ.
ಸ್ವಚ್ಚತೆ ಮಾಡಬೇಕಾದ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಇಲ್ಲಿನ ಸಮಸ್ಯೆ ನೋಡಿದರೆ ತಿಳಿಯುತ್ತಿದೆ.
ಈ ಬಸ್ ನಿಲ್ದಾಣದಲ್ಲಿ ಕಡುಕರ ಹಾವಳಿಯಿಂದ ಬಾಟಲಿಗಳು, ಇನ್ನೂ ತ್ಯಾಜ್ಯ, ಹಾಗೂ ಶೌಚಾಲಯ ಕೂಡ ಇಲ್ಲಿ ಮಾಡಿರುವುದರಿಂದ ಕಸದ ಕೊಂಪೆಯಾಗಿದೆ ಮಾರ್ಪಟ್ಟಿದೆ ಇನ್ನದರೂ ಸಂಬಂಧಿಸಿದ ಪಟ್ಟ ಅಧಿಕಾರಿಗಳು ಸ್ವಚ್ಛತೆಗೆ ಮುಂದಾಗುವರೋ ಕಾದು ನೋಡಬೇಕಿದೆ.