ನಾಯಕನಹಟ್ಟಿ ಅ.5.ಈಗಾಗಲೆ ಬೆಳೆ ನಷ್ಟದ ವರದಿಯ ಸಂಪೂರ್ಣ ವರದಿಯನ್ನು ಸರಕಾರ ನೀಡಿದ್ದು ಅ.7 ರಂದು ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ ಒಣಗಿದ ಬೆಳೆಗಳನ್ನು ವೀಕ್ಷಣೆ ಮಾಡಿ ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಸುವ ಸಾಧ್ಯತೆ ಇದೆ ಎಂದು ಅಪಾರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಹೇಳಿದರು. ಜಿಲ್ಲೆಗೆ ಅ.7 ರಂದು ಬರ ಅಧ್ಯನ ತಂಡ ಭೇಟಿ ನೀಡಿ ವೀಕ್ಷಣೆ ಮಾಡುವ ಪ್ರದೇಶಗಳಿಗೆ ಭೇಟಿ ಪರಿಶೀಲನೆ ನಡೆಸಿ ಮಾತನಾಡಿದರು. ರೈತರು ಬಿತ್ತನೆ ಮಾಡಿದ ಶೇಂಗಾ.ತೊಗರಿ.ರಾಗಿ.ಜೋಳ ಸೇರಿದಂತೆ ಇತರ ಬೆಳೆಗಳು ಮಳೆ ಬಾರದೆ ಅತಿವೃಷ್ಠಿ ಹಾಗೂ ಅನಾ ವೃಷ್ಠಿಗೆ ಸಿಲುಕಿ ಸಂಪೂರ್ಣ ಒಣಗಿರುವುದರಿಂದ ಜಿಲ್ಲೆಯಲ್ಲಿ2.40 ಲಕ್ಷ ಹೆಕ್ಟೇರ್ ನಷ್ಟು ಬೆಳೆಗಳು ನಷ್ಟವಾಗಿದ್ದು ಈಗಾಗಲೆ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿರುವುದರಿಂದ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲನೆ ನಡಸಿ ಸರಕಾರಕ್ಕೆ ವರದಿ ಸಲ್ಲಿಸಲಿದೆ ತಂಡ ಬಂದಾಗ ರೈತರೊಂದಿಗೆ ಸಂವಾದ ನಡೆಸುವ ಮೂಲಕ ಅಂದಾಜು ನಷ್ಟದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಎಂದು ತಿಳಿಸಿದರು. ಜಿಪಂ ಸಿಇಒ ಸೋಮಶೇಖರ್ ಮಾತನಾಡಿ ಜಿಲ್ಲೆಯಲ್ಲಿ ಬರಗಾಲ ವಿರುವುದರಿಂದ ನರೇಗಾ ಯೋಜನೆಯಡಿ ರೈತರಿಗೆ ಹಾಗೂ ದುಡಿಯುವ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಲಾಗುವುದು. ಈಗಾಗಲೆ ಉದ್ಯೋಗ ಖಾತ್ರಿ ಅನುಷ್ಠಾನಗೊಂಡ ಕಾಮಗಾರಿಗಳನ್ನು ಕೆರೆಗಳನ್ನು ವೀಕ್ಷಣೆ ಮಾಡಲಿದ್ದಾರೆ ಎಂದು ತಿಳಿಸಿದರು. ಕೃಷಿ ಜಂಟಿ
ನಿರ್ದೇಶಕ ಬಿ.ಮಂಜುನಾಥ್ ಮಾತನಾಡಿ ಜಿಲ್ಲೆಯಲ್ಲಿ 2.40 ಲಕ್ಷ ಹೆಕ್ಟೇರ್
ಬೆಳೆಯುತ್ತದೆ ಹಾನಿಯಾಗಿರುವ ಕುರಿತು
ಸರಕಾರಕ್ಕೆ ವರದಿ ಕೊಟ್ಟಿದ್ದು, ಜಿಲ್ಲೆಯ
ಪ್ರಮುಖ ಬೆಳೆಗಳಾದ ಶೇಂಗಾ,
ಮೆಕ್ಕೆಜೋಳ, ರಾಗಿ, ತೊಗರಿ ಬೆಳೆಗಳು
ಸೇರಿದಂತೆ ಮಳೆ ಕೊರತೆಯಿಂದ ಬರ
ಬಂದಿರುವ ಕುರಿತು ಅ.7ರಂದು ಭೇಟಿ
ನೀಡುತ್ತಿರುವ ಬರ ಅಧ್ಯಯನ ತಂಡಕ್ಕೆ
ಬೆಳೆಗಳ ಸ್ಥಿತಿಗತಿಯ ವಾಸ್ತವ ಮನವರಿಕೆ
ಮಾಡಲಾಗುವುದು ಆದ್ದರಿಂದ ಭೇಟಿ ನೀಡುವ ಸ್ಥಳಗನ್ನು ಜಿಲ್ಲಾಢಳಿತವತಿಯಿಂದ ಪರಿಶೀಲನೆ ನಡೆಸಲು ಕಂದಾಯ.
ಕೃಷಿ ಇಲಾಖೆವತಿಯಿಂದ ಪೂರ್ವಭಾವಿಯಾಗಿ ಜಂಟಿ ಸಮೀಕ್ಷೆ ಕೈಕೊಳ್ಳಲಾಗಿದೆ ಎಂದರು.
ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯಲ್ಲಿ ಅಕ್ಟೋಬರ್ 7ನೇ ತಾರೀಖಿನಂದು ಕೇಂದ್ರ ಬರ ಅಧ್ಯಯನ ಸಮಿತಿ ಚಿತ್ರದುರ್ಗ ಮತ್ತು ಚಳ್ಳಕೆರೆ ತಾಲ್ಲೂಕು ಭಾಗಗಳಲ್ಲಿ ಬರಕ್ಕೆ ತುತ್ತಾದ ಬೆಳೆಗಳನ್ನು ಮತ್ತು ನೀರಿಲ್ಲದ ಕೆರೆಗಳನ್ನು ವೀಕ್ಷಣೆ ಮಾಡಿ ಕೇಂದ್ರಕ್ಕೆ ವರದಿ ನೀಡಲಿದ್ದಾರೆ ಪೂರ್ವಭಾವಿಯಾಗಿ ಇಂದು ಚಿತ್ರದುರ್ಗ ಮತ್ತು ಚಳ್ಳಕೆರೆ ತಾಲೂಕಿನ ಸ್ಥಳಗಳಿಗೆ ಜಿಲ್ಲಾ ಕಾರ್ಯನಿರ್ವಾಣ ಅಧಿಕಾರಿ ನೇತೃತ್ವದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ ಶೇಂಗಾ ತೊಗರಿ ಸೇರಿದಂತೆ ವೀಕ್ಷಣೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಕೃಷಿ ಉಪ ನಿರ್ದೇಶಕ ಶಿವಕುಮಾರ್, ಬಿ ಎನ್ ಪ್ರಭಾಕರ್ .ಡಿಡಿಎ ಕೃಷಿ, ತೋಟಗಾರಿಕೆ ಡಿಡಿ ಸವಿತಾ, ಅಶೋಕ್ ಕುಮಾರ್ ಎಡಿ, ಕೃಷಿ ಅಧಿಕಾರಿ ಹೇಮಂತ್ ನಾಯ್ಕ, ಪಟ್ಟಣದ ನಾಡಕಚೇರಿ ಆರ್ ಐ ಚೇತನ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳಾದ ಹರೀಶ್ ,ಜಗದೀಶ್, ಇತರರಿದ್ದರು.