ಅಂಚೆ ಇಲಾಖೆಯ ಎಲ್ಲಾ ಯೋಜನೆಗಳು ಗ್ರಾಹಕ ಸ್ನೇಹಿಯಾಗಿದ್ದು ನಂಬಿಕೆ ಹಾಗೂ ವಿಶ್ವಾಸಕ್ಕೆ ಪಾತ್ರವಾಗಿವೆ ಎಂದ ಚಿತ್ರದುರ್ಗ ವಿಭಾಗದ ಅಧೀಕ್ಷಕರಾದ ವಿರೂಪಾಕ್ಷಪ್ಪ ಹೇಳಿದರು.
ನಾಯಕನಹಟ್ಟಿ:: ಹೋಬಳಿ ಗುಂತಕೋಲಮ್ಮನಹಳ್ಳಿ ಗ್ರಾಮದಲ್ಲಿ ನೂತನ ಶಾಖಾ ಅಂಚೆ ಕಛೇರಿಯನ್ನು ಲೋಕಾರುಗೊಳಿಸಿ ನಂತರ ಮಾತನಾಡಿ,
ಅವರು ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಲೆಂದು ಪ್ರಧಾನ ಮಂತ್ರಿ ಅವರ ಆಶಯದಂತೆ ಹಾಗೂ ಕಚೇರಿ ನಿರ್ದೇಶನದ ಬಂದ ಮೇರೆಗೆ ಯಾವ ಗ್ರಾಮಗಳಲ್ಲಿ ಸುತ್ತಮುತ್ತ ಆರು ಕಿಲೋಮೀಟರ್ ಅಲ್ಲಿ ಯಾವುದೇ ತರಹದ ಬ್ಯಾಂಕ್ ಗಳ ಸೌಲಭ್ಯವಿರುವುದಿಲ್ಲ ಹಂತಹ ಗ್ರಾಮಗಳಲ್ಲಿ ಶಾಖೆ ಅಂಚೆ ಕಚೇರಿ ಪ್ರಾರಂಭಿಸಬೇಕು ಎಂಬ ನೆರೆಗೆ ಇಂದು ಚಳ್ಳಕೆರೆಯ ಗುಂತಕೋಲಮ್ಮನಹಳ್ಳಿ ಸೇರಿದಂತೆ ಒಬ್ಬೇನಹಳ್ಳಿ ಹಾಗೂ ಮೊಳಕಾಲ್ಮೂರು ಕೊಂಡ್ಲಹಳ್ಳಿ ಹತ್ತಿರದ ದೇವನಹಳ್ಳಿ ಸೇರಿದಂತೆ ರಾಂಪುರದ ಕಣಿವೆ ಶಾಖೆಗಳನ್ನು ತೆರೆಯಲಾಗುವುದು, ಶಾಖೆ ಅಂಚೆ ಕಚೇರಿಯ ಸುತ್ತಮುತ್ತಿನ ಗ್ರಾಮದ ಜನರು ಖಾತೆಗಳನ್ನು ತೆರೆಯುವ ಮೂಲಕ ಪೂರ್ಣ ಪ್ರಮಾಣದಲ್ಲಿ ಸದುಪಯೋಗಪಡಿಸಿಕೊಳ್ಳಬೇಕೆಂದು ಗ್ರಾಮದ ಜನರಲ್ಲಿ ಮನವಿ ಮಾಡಿದರು.
ದೇಶದ ಪ್ರತಿ ಪುಜೆಯೂ ಇಲಾಖೆಯು ನೀಡುವ ಸೇವೆಯನ್ನು ಪಡೆಯುವಂತಾಗಬೇಕು ಎಂದರು.
ಅಂಚೆ ನಿರೀಕ್ಷಕ ರಾಜನ ಕುಮಾರ್ ಮಾತನಾಡಿ,ಭಾರತೀಯ ಅಂಚ ಇಲಾಖೆಯು ಗ್ರಾಹಕರ ಮನೆಯ ಬಾಗಿಲಿಗೆ ಬಂದು ಸೇವೆ ನೀಡಿ, ಜನತೆಯ ವಿಶ್ವಾಸಕ್ಕೆ ಪಾತ್ರವಾಗಿದೆ. ಇಲಾಖೆಯ ಎಲ್ಲಾ ಸೇವೆಗಳನ್ನು ಊರಿನ ಎಲ್ಲಾ ಕುಟುಂಬಗಳು ಪಡೆಯುವಂತಾಗಬೇಕೆಂದರು.
ಉಪಾಧ್ಯಕ್ಷ ಬಿ ಅನಿತಮ್ಮ ಮಾತನಾಡಿ, ಪುತಿ ಮನೆಗಳಿಗೂ ಅಂಚೆ ಇಲಾಖೆಯ ಎಲ್ಲಾ ಯೋಜನಗಳು ತಲುಪಲಿ ಮತ್ತು ಎಲ್ಲಾ ನಾಗರಿಕರೂ ಖಾತೆಗಳನ್ನು ತೆರೆಯುವ ಮೂಲಕ ಹಣ ಉಳಿತಾಯ ಮಾಡಬೇಕೆಂದು ಹೇಳಿದರು.
ಇನ್ನೂ ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಬಿ ಅನಿತಮ್ಮ ಜಿ ಎಂ ಜಯಣ್ಣ, ಸದಸ್ಯರಾದ ಬಿ.ಗುಂಡಯ್ಯ, ಸಿದ್ದಲಿಂಗಮ್ಮ ಗುಂಡಯ್ಯ, ಮಂಜಮ್ಮ ದುರುಗೇಶ್, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಕೆ ಟಿ ಮಲ್ಲಿಕಾರ್ಜುನ್, ಎನ್ ತಿಪ್ಪೇಸ್ವಾಮಿ ಜೆಸಿಬಿ, ಪಾಪಣ್ಣ, ಗ್ರಾಮಸ್ಥರಾದ ಎಂ ಓ ಸೂರಯ್ಯ, ಗೊಂಚಿಪಾಲಯ್ಯ, ಹೊಸ ಕಪಿಲೆ ಬೋರಯ್ಯ, ಬೂಟ್ ತಿಪ್ಪೇಸ್ವಾಮಿ, ಅಂಚೆ ನಿರೀಕ್ಷಕ ರಾಜನ ಕುಮಾರ್ ಚಳ್ಳಕೆರೆ,
ಅಂಚೆ ಕಚೇರಿಯ ಸಿಬ್ಬಂದಿಗಳಾದ ನಲಗೇತನಹಟ್ಟಿ ಎಂ ಒ ಚನ್ನಮ್ಮ, ಶ್ವೇತಾ , ಜಮುನ, ರಾಜಣ್ಣ, ಲಾವಣ್ಯ, ಸ್ವಪ್ನ, ಭವಾನಿ ,ಶಂಕರ್, ಅನುಷ್,
ಕೆ ಸಿ ಮಹಾಂತೇಶ್, ಜಿ ಟಿ ಕುಮಾರ್, ಚೇತನ್ ಸೇರಿದಂತೆ ಇನ್ನೂ ಮುಂತಾದವರು ಇದ್ದರು.