ಚಳ್ಳಕೆರೆ ನಗರದ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಚಳ್ಳಕೆರೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಕ್ರಿಕೆಟ್ ಟೂರ್ನಮೆಂಟ್ ಕಳೆದ ಹಲವು ದಿನಗಳಿಂದ ಪಂದಾವಳಿಗಳು ನಡೆದಿದ್ದು ಅತ್ಯುತ್ತಮ್ಮವಾಗಿ ಪ್ರದರ್ಶಿಸಿದ ಪಂದ್ಯಕ್ಕೆ ಪ್ರಥಮ ಶ್ರೇಣಿ, ದ್ವಿತೀಯ ಶ್ರೇಣಿ ತೃತೀಯ ಶ್ರೇಣಿಯವರಿಗೆ ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ
ಬಹುಮಾನ ವಿತರಿಸಿ ಮಾತನಾಡಿದರು
ಕ್ರೀಡೆಯಲ್ಲಿ ಸೋಲು ಗೆಲುವು ಒಂದು ನಾಣ್ಯದ ಎರಡು ಮುಖಗಳಿದ್ದ ಹಾಗೆ ಸೋತೆನೆಂದು ಹತಾಶರಾಗದೆ ಸತತ ಪ್ರಯತ್ನದಿಂದ ಜಯಶೀಲರಾಗಲು ಸಾಧ್ಯ, ಇದು ಅಲ್ಲದೆ ಕ್ರೀಡೆಗೆ ಎಷ್ಟು ಆಸಕ್ತಿ ತೋರಿಸುತ್ತಿರೋ ,ಅಷ್ಟೇ ಆಸಕ್ತಿಯನ್ನು ಶಿಕ್ಷಣದ ಕಡೆ ಹೆಚ್ಚು ಹೊತ್ತು ಕೊಡಬೇಕು ಅಂದಾಗ ಮಾತ್ರ ನೀವು ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯ ಎಂದು ಅಭಿಪ್ರಾಯಪಟ್ಟರು
ಜಿಟಿಎಸ್ ತಂಡದ ಮಾಲೀಕರಾದ ಜಿ.ಟಿ. ವೀರಭ್ರಸ್ವಾಮಿ, ಮಾತನಾಡಿ ಕ್ರೀಡೆಯಲ್ಲಿ ಗ್ರಾಮೀಣ ಪ್ರದೇಶದ ಯುವಕರಿಗೆ ಹೆಚ್ಚಿನ ಒತ್ತು ಕೊಡಬೇಕು ಸತತ ಏಳು ದಿನಗಳ ಕಾಲ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟನ್ನು 10 ಪಂದ್ಯಗಳು ನಿರಂತರ ಪರಿಶ್ರಮದಿಂದ ಕ್ರೀಡೆಯನ್ನು ಆಡಿ ವಿಜಯಶಾಲಿಯಾಗಿದ್ದೀರಿ ಕ್ರೀಡಾಪಟುಗಳು ಮುಂದಿನ ದಿನಗಳಲ್ಲಿ ಟೆನಿಸ್ ಬಾಲ್ ಜೊತೆಗೆ ಲೆದರ್ ಬಾಲ್ ಪ್ರಾಕ್ಟೀಸ್ ಮಾಡಿ ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಹೋಗಿ ನಿಮ್ಮ ವಿಜಯಶಾಲಿಯಾಗಿ ತಾಲೂಕಿನ ಹಿರಿಮೆಯನ್ನು ಹೆಚ್ಚಿಸಿ ಎಂದರು.
ಇನ್ನು ಈ ವೇಳೆ ಪ್ರಥಮ ಬಹುಮಾನ 55,550, ದ್ವಿತೀಯ ಬಹುಮಾನ 33,300, ತೃತೀಯ ಬಹುಮಾನ 22,200, ಮೂರು ತಂಡಗಳಿಗೆ ಚೆಕ್ ಮೂಲಕ ಫ್ರಾನ್ಸಿಗಳಿಗೆ ಬಹುಮಾನ ವಿತರಿಸಲಾಯಿತು
ಇನ್ನು ಈ ವೇದಿಕೆಯಲ್ಲಿ ಅರಣ್ಯ ಅಧಿಕಾರಿ ಬಹುಗುಣ, ಸಂತೋಷ್ ನಾಯಕ್, ರಾಧ ಡೆವೆಲ್‌ರ‍್ಸ್ ಅಣ್ಣಪ್ಪ, ಪೋತರಾಜ್, ತಿಪ್ಪೇಸ್ವಾಮಿ, ನಾಗರಾಜ್ ಉಪನ್ಯಾಸಕ ಮಂಜುನಾಥ್, ಶ್ರೀನಿವಾಸ್, ಸೇರಿದಂತೆ ಅನೇಕ ಕ್ರೀಡಾಪಟುಗಳು ಭಾಗಿಯಾಗಿದ್ದರು