ಚಳ್ಳಕೆರೆ : ತಾಲೂಕು ಬರಗಾಲಕ್ಕೆ ತುತ್ತಾಗಿ ಇಲ್ಲಿನ ರೈತಾಪಿ ವರ್ಗ ಕಣ್ಣಿರಿನಲ್ಲಿ ಕೈತೊಳೆಯುತ್ತಿದೆ ಆದ್ದರಿಂದ ಇಲ್ಲಿನ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದAತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ತಾಲ್ಲೂಕು ಆಡಳಿತದ ವತಿಯಿಂದ ಸಾಣೀಕೆರೆ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮ ಹಾಗೂ 11ನೇ ಜನ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಪರಿಹಾರ ಕಲ್ಪಿಸುವಂತೆ ಸಂಭAದಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂಧರ್ಭದಲ್ಲಿ ಸಾಣಿಕೆರೆ ಗ್ರಾಮ ಪಂಚಾಯಿತಿಯಲ್ಲಿ ಸಾವಿರಾರು ಜನ ಸಂಖ್ಯೆ ಇರುವ ಗ್ರಾಮದಲ್ಲಿ ಶುದ್ದ ಕುಡಿಯುವ ನೀರು ಅದಗೆಟ್ಟು ಹಲವು ತಿಂಗಳುಗಳೆ ಕಳೆದವು ಆದರೆ ಪ್ಲೋರೈಡ್ ಯುಕ್ತ ನೀರು ಗತಿಯಾಗಿದೆ ಇನ್ನೂ ಶುದ್ದ ಕುಡಿಯುವ ನೀರು ಸಿಗುವುದು ಮರಿಚಿಕೆಯಾಗಿದೆ ಇನ್ನಾದರೂ ನಿಮ್ಮ ಸಾರಥ್ಯದಲ್ಲಿ ಕುಡಿಯಲು ನೀರು ಕೊಡಿ ಸ್ವಾಮಿ ಎಂದು ಶಾಸಕ ಟಿ.ರಘುಮೂರ್ತಿಗೆ ಸಾರ್ವಜನಿಕರು ಮನವಿ ಮಾಡಿಕೊಂಡರು.
ಇದಕ್ಕೆ ಸ್ಪಂಧಿಸಿದ ಶಾಸಕರು ಅಧಿಕಾರಿಗಳನ್ನು ಕೇಳಿದರೆ, ಕುಡಿಯುವ ನೀರು ಸರಬರಾಜು ಇಲಾಕೆಯ ತಿಪ್ಪೆಸ್ವಾಮಿ ಮಾತನಾಡಿ, ಸಾಣಿಕೆರೆ ಗ್ರಾಪಂ. ವ್ಯಾಪ್ತಿಯಲ್ಲಿ ಸುಮಾರು 9ಆರ್‌ಓ ಪ್ಲಾಂಟ್‌ಗಳು ಇವೆ ಆದರಲ್ಲಿ ಸುಮಾರು 5 ಕಾರ್ಯಚರಣೆಯಲ್ಲಿ ಇವೆ ಇನ್ನೂ 4 ಘಟಕಗಳು ಮಾತ್ರ ದುರಸ್ಥಿಯಲ್ಲಿವೆ ಇನ್ನೂ ನಾಳೆಯೇ ಸಾಣಿಕೆರೆ ಹಾಗೂ ಕಂಡೆನಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಘಟಕವನ್ನು ದುರಸ್ಥಿ ಮಾಡಿಸಿ ಶುದ್ಧ ಕುಡಿಯುವ ನೀರು ಕೊಡಲಾಗುವುದು ಎಂದರು.
ಐದು ಗ್ಯಾರಂಟಿ ಯೋಜನೆಯಲ್ಲಿ ಕೆಲವು ಕಾರ್ಯರೂಪಕ್ಕೆ ಬಂದರು ನಮಗೆ ಅದರ ಯೋಜನೆ ಕೈಗೆಟುಕುತ್ತಿಲ್ಲ ಗೃಹಲಕ್ಷಿö್ಮ ಯೋಜನೆ ಹಣ ನಮಗೆ ಬಂದಿಲ್ಲ ಸ್ವಾಮಿ, ನಮಗೆ ತಿನ್ನಲು ಅಕ್ಕಿನೂ ಬಂದಿಲ್ಲ, ಹಣನು ಬಂದಿಲ್ಲ ಎಂದು ಶಾಸಕರಿಗೆ ಮಹಿಳೆಯರು ಮನವಿ ಮಾಡಿದರು.
ಸಂಜೆಯಾದರೆ ಸಾಕು ಕತ್ತಲು ಕವಿದ ವಾತವರಣ ಗ್ರಾಮದಲ್ಲಿ ನಿರ್ಮಾಣವಾಗುತ್ತಿದೆ ಇದರಿಂದ ವ್ಯಾಸಂಗ ಮಾಡುವ ಮಕ್ಕಳಿಂದ ವಯೋವೃದ್ದವರಿಗೆ ತುಂಬಾ ತೊಂದರೆಯಾಗುತ್ತಿದೆ, ಬೆಸ್ಕಾಂ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರು ನಮ್ಮ ಮನವಿಗೆ ಸ್ಪಂಧಿಸುತ್ತಿಲ್ಲ ಎಂದು ಸ್ಥಳೀಯರು ಬೆಸ್ಕಾಂ ವಿರುದ್ಧ ಶಾಸಕರಿಗೆ ದೂರಿದರು.
ಇದಕ್ಕೆ ಉತ್ತರಿಸಿದ ಬೆಸ್ಕಾಂ ಇಳಾಖೆ ಎಇಇ ರಾಜು ಮಾತನಾಡಿ ರೈತರ ಮೂರು ಪೆಸ್‌ವಿದ್ಯುತ್ ಹಾಗೂ ಗ್ರಾಮಕ್ಕೆ ಸರಬಾರಾಜು ಹಾಗುವ ವಿದ್ಯುತ್ ಒಂದೇ ಹಾಗಿರುವುದರಿಂದ ಇಲ್ಲಿ ವ್ಯತ್ಯಾಯವಾಗುತ್ತಿದೆ ಇನ್ನೂ ಬೆಸ್ಕಾಂ ಯೋಜನೆಯಲ್ಲಿ ನಿಮಗೆ ನಿರಂತರ ಜ್ಯೋತಿಯ ಅನುಕೂಲ ಮಾಡಿಕೊಡಲಾಗುವುದು ಈ ಸಮಸ್ಯೆ ತಲೆದೂರದು ಎಂದು ಭರವಸೆ ನೀಡಿದರು.
ಇನ್ನೂ ಸ್ವಾಮಿ ಕಳೆದ ಹಲವು ವರ್ಷಗಳಿಂದ ನೂರಾರು ಕುಟುಂಬಗಳು ಖಾಸಗಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ಜೀವನ ಕಟ್ಟಿಕೊಂಡಿವಿ ಆದರೆ ಈಗಾ ಏಕಾಏಕಿ ಮಾಲೀಕರು ಬಂದ ಒಕ್ಕಲು ಎಬ್ಬಿಸಿದರೆ ನಾವು ಎಲ್ಲಿಗೆ ಹೋಗಬೇಕು ಎಂದು ಶಾಸಕರ ಬಳಿ ಅಳಳು ತೋಡಿಕೊಂಡ ಮಹಿಳೆಯರಿಗೆ ಸ್ಥಳದಲ್ಲೆ ಶಾಸಕರು ತಹಶೀಲ್ದಾರ್ ರೇಹಾನ ಪಾಷ ಹಾಗೂ ಅಧಿಕಾರಿಗಳಿಂದ ಉತ್ತರ ಪಡೆಯುವ ಮೂಲಕ ಭರವಸೆಯ ಬೆಳಕು ನೀಡಿದರು.
ಇನ್ನೂ ಸುಮಾರು 200 ಕುಟುಂಬಗಳ ನಿವೇಶನ ರಹಿತರ ಪಟ್ಟಿ ಸಲ್ಲಿಸಿದರೆ ಸುಮಾರು ಎಕರೆಯಷ್ಟು ಜಾಗವನ್ನು ನಿಗಧಿ ಪಡಿಸಿ ನಂತರ ಬಡವರ ಸೂರಿಗಾಗಿ ಹಕ್ಕು ಪತ್ರ ವಿತರಣೆ ಮಾಡಲಾಗುವುದು ಎಂದು ಅಧಿಕಾರಿಗಳು ಉತ್ತರಿಸಿದರು.
ಇನ್ನೂ ಜಡೆಕುಂಟೆ ಗ್ರಾಮದ ಬಿಎಲ್‌ಗೌಡ ನಗರದಲ್ಲಿ ಈರಮ್ಮ ಎನ್ನುವವರ ಹೆಸರಿಗೆ ಖಾತೆಹಾಗಿದ್ದರೂ ಕೂಡ ಮತ್ತೆ ಇನ್ನೋಬ್ಬರು ಬಂದು ನಮ್ಮ ಜಾಗದಲ್ಲಿ ಒತ್ತುವರಿ ಮಾಡುತ್ತಿದ್ದಾರೆ ಇದರ ಬಗ್ಗೆ ಮೂಲ ದಾಖಲಾತಿಗಳು ನೀಡಿದ್ದೆವೆ ಆದರೆ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ಈರಮ್ಮ ಅರ್ಜಿಯನ್ನು ಸಲ್ಲಿಸಿದರು.
ಇನ್ನೂ ಪೊಲೀಸ್ ಇಲಾಖೆ ಸಂಪೂರ್ಣವಾಗಿ ನಿಷಿಕ್ರಿಯೆಯಾಗಿದೆ ಎಂದು ಒಬ್ಬ ಮಹಿಳೆ ಹಲವು ಬಾರಿ ಗ್ರಾಮದ ಇತರರೊಂದಿಗೆ ಜಗಳವಾಡಿದರು ಅವರಿಗೆ ಪ್ರಕರಣ ದಾಖಲು ಮಾಡಿಲ್ಲ ಎಂದರೆ ಏನು..? ನಿಮ್ಮ ಕೈಲಾಗಲ್ಲ ಎಂದರೆ ನಾನು ಎಸ್ಪಿ,. ಯತ್ತಿರ ಮಾತನಾಡುವೆ, ಈ ಕೂಡಲೆ ಜನಸಂಪರ್ಕ ಸಭೆಯಲ್ಲಿ ಇವರ ಮನವಿಯನ್ನು ಮನಗಂಡು ಪ್ರಕರಣ ದಾಖಲು ಮಾಡಿಕೊಂಡು ಇವರಿಗೆ ನ್ಯಾಯ ದೊರಕಿಸಿಕೊಡಿ ಎಂದು ಇನ್ಸ್ಪೆಕ್ಟೆರ್ ಆರ್.ಎಪ್.ದೇಸಾಯಿಗೆ ಶಾಸಕರು ಸೂಚಿಸಿದರು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ರೇಹಾನ್ ಪಾಷಾ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗರಾಜ್, ಉಪಾಧ್ಯಕ್ಷರಾದ ಶಶಿಕಲಾ, ಸದಸ್ಯರುಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾದ ಹೆಚ್.ಆಂಜನೇಯ, ಮಂಜುನಾಥ, ಲಕ್ಷ್ಮಣ, ವೀರಣ್ಣ, ತಿಪ್ಪೇರುದ್ರಪ್ಪ, ಮಹಾಲಿಂಗಪ್ಪ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು