ಚಳ್ಳಕೆರೆ : ತೊಟ್ಟಿಯಲ್ಲಿ ಇರುವ ಕಲುಷಿತಗೊಂಡ ನೀರನ್ನು ಜಾನುವಾರುಗಳಿಗೆ ಪೂರೈಕೆ
ಚಳ್ಳಕೆರೆ: ತಾಲೂಕಿನ ಸಾಣಿಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗೆರೆ ಗ್ರಾಮದಲ್ಲಿ ಅನೇಕ ರೈತರುಗಳು ಜಾನುವಾರುಗಳನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ.
ಆದರೆ ಜಾನುವಾರುಗಳಿಗೆ ಪ್ರತಿನಿತ್ಯ ನೀರು ಕುಡಿಸುವ ತಟ್ಟಿಯಲ್ಲಿ ಕಲುಷಿತ ನೀರಿದ್ದು ಜಾನುವಾರುಗಳು ಪ್ರತಿನಿತ್ಯ ಅವೇ ನೀರನ್ನು ಸೇವನೆ ಮಾಡುತ್ತಿದ್ದಾವೇ ಇದರಿಂದ ಕೆಲ ದಿನಗಳ ಹಿಂದೆ ನಾಲ್ಕು ಹಸುಗಳು ಅಸ್ವಸ್ಥಗೊಂಡಿದ್ದು ಪಶು ಅಧಿಕಾರಿಗಳ ಸಹಾಯದಿಂದ ಹಸುವನ್ನು ಉಳಿಸಿ ಕೊಂಡಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದರು.
ಗ್ರಾಮಸ್ಥರು ನೀರಗಂಟೆಯು ಸರಿಯಾದ ರೀತಿ ತಟ್ಟಿಯನ್ನು ಸ್ವಚ್ಛಗೊಳಿಸದೆ ಇರುವುದರಿಂದ ಜಾನುವಾರುಗಳು ಕಲುಷಿತ ನೀರನ್ನು ಸೇವಿಸಿ ಅಸ್ವಸ್ಥ ಗೊಳ್ಳುತ್ತಿವೆ. ಇದರಿಂದ ರೈತರು ಗ್ರಾಮದಲ್ಲಿ ಭಯದಿಂದ ಜಾನುವಾರುಗಳನ್ನು ಸಾಕುತ್ತಿದ್ದೇವೆ. ಎಂದು ಗ್ರಾ.ಪ.ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈಗಲಾದರೂ ಸಂಭಂದಪಟ್ಟ ಅಧಿಕಾರಿಗಳು ಇದ್ದ ಕಡೆ ಗಮನ ಹರಿಸಿ ತಟ್ಟಿಯನ್ನು ಸ್ವಚ್ಛಗೊಳಿಸಿ ಜಾನುವಾರಿಗಳಿಗೆ ಅನುಕೂಲ ಮಾಡಿ ಕೊಡುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡರು.