ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಜಿಲ್ಲಾ ಜನಜಾಗೃತಿ ವೇದಿಕೆ ತ್ರೈಮಾಸಿಕ ಸಭೆಯನ್ನು ಜೈನ ಸಮುದಾಯ ಭವನದಲ್ಲಿ

ಮಧ್ಯವರ್ಜನ ಶಿಬಿರಗಳನ್ನು ಪ್ರತಿ ತಾಲೂಕಿನಲ್ಲಿ ಹೋಬಳಿ ಮಟ್ಟದಲ್ಲಿ ಕಾಲಕ್ಕೆ ಸರಿಯಾಗಿ ನಡೆಸುವುದು ಮತ್ತು ದುಶ್ಚಟ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವುದು ಎಲ್ಲರೂ ಕೈಗೊಳ್ಳಬೇಕು ಎಂದು ಮನವಿ ಮಾಡಿದರು

ಇನ್ನೂ ಎಲ್ಲಾ ಶಾಲಾ ಕಾಲೇಜುಗಳಲ್ಲಿ ದುಶ್ಚಟಗಳಿಂದ ದೂರವಿರುವಿಡುವ ಯಾವ ರೀತಿ ಏನೆಲ್ಲಾ ತೊಂದರೆ ಆಗುತ್ತೆ ಅನ್ನೋ ಒಂದು ವಿಚಾರವನ್ನು ಸೂಕ್ತ ಸಲಹೆ ಮಾರ್ಗದರ್ಶನವನ್ನು ವಿಶೇಷ ಅಧಿಕಾರಿಗಳಿಂದ ತಿಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂತನ ಜಿಲ್ಲಾ ಜನಜಾಗೃತಿ ವೇದಿಕೆಯ ಹೊಸದುರ್ಗದ ಬಿ.ಪಿ. ಓಂಕಾರಪ್ಪ ವಹಿಸಿದ್ದರು, ಉಪಾಧ್ಯಕ್ಷರಾದ ಮಂಜುನಾಥ್, ನಿಕಟ ಪೂರ್ವ ಅಧ್ಯಕ್ಷರಾದ ಮಾರುತೇಶ್, ಉಪಾಧ್ಯಕ್ಷರಾದ ಕಿರಣ್ ಜೈನ್ ಮತ್ತು ಚಿತ್ರದುರ್ಗ ಜಿಲ್ಲಾ ನಿರ್ದೇಶಕರಾದ ದಿನೇಶ್ ಪೂಜಾರಿ, ಹಿರಿಯೂರು ಜಿಲ್ಲಾ ಪ್ರಾದೇಶಿಕ ಜಿಲ್ಲಾ ನಿರ್ದೇಶಕರಾದ ವಿನಯ್ ಕುಮಾರ್, ಸುವರ್ಣ , ಚಳ್ಳಕೆರೆ ಜನಜಾಗೃತಿ ವೇದಿಕೆ ಸದಸ್ಯರಾದ ಜಗದೀಶ್ , ನೇತಾಜಿ ಪ್ರಸನ್ನ
ಚಿತ್ರದುರ್ಗದ ಸಂಗಮ, ರೂಪ,
ಹೊಸದುರ್ಗದ ಬಸವರಾಜ್
ಮತ್ತು ಜಿಲ್ಲೆಯ ಎಲ್ಲ ತಾಲೂಕಿನ ಯೋಜನಾಧಿಕಾರಿಗಳು ಮತ್ತು ಜನಜಾಗೃತಿಯ ಎಲ್ಲ ತಾಲೂಕಿನ ಸರ್ವ ಸದಸ್ಯರು ಭಾಗವಹಿಸಿದರು.

About The Author

Namma Challakere Local News
error: Content is protected !!