ಚಳ್ಳಕೆರೆ :
ವರದಿಗೆ ಎಚ್ಚೆತ್ತುಕೊಂಡ ಅಧಿಕಾರಿಗಳು ಗಿಡಗಂಟಿಗಳಿಂದ ಕೂಡಿದ ಚರಂಡಿ ಮಣ್ಣಿನಲ್ಲಿ ಮುಚ್ಚಿದ ಚರಂಡಿಯನ್ನು ಸ್ವಚ್ಛತೆ ಮಾಡಿಸಲು ಮುಂದಾಗಿದ್ದಾರೆ
ಚಳ್ಳಕೆರೆ: ತಾಲೂಕಿನ ಸಾಣಿಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗೆರೆ ಗ್ರಾಮದಲ್ಲಿ ಸರಿಯಾದ ರೀತಿ ಚರಂಡಿಗಳಿಲ್ಲದೆ ರಸ್ತೆಗಳೆಲ್ಲ ಗುಂಡಿ ಬಿಂದು ನೀರು ನಿಂತಿರುವುದರಿಂದ ಸೊಳ್ಳೆಗಳು ಹೆಚ್ಚಾಗುತ್ತಿದ್ದು ಇದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿದೆ ಎಂದು ಗ್ರಾಮಸ್ಥರು ಗ್ರಾ.ಪ.ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದನು.
ವರದಿ ಬಿತ್ತರಿಸಿದ್ದು ವರದಿಗೆ ಎತ್ತುಕೊಂಡ ಅಧಿಕಾರಿಗಳು ಚರಂಡಿಯ ಸ್ವಚ್ಛತೆ ಗಿಡಗಂಟಿ ಬೆಳೆದ ಚರಂಡಿಯ ಪಕ್ಕದಲ್ಲಿ ಸ್ವಚ್ಛತೆ ಮುಚ್ಚಿ ಹೋಗಿರುವ ಚರಂಡಿಯನ್ನು ಮತ್ತೆ ತೇಗೆಸುತ್ತಿದ್ದಾರೆ.
ಗ್ರಾಮಸ್ಥರು ಗ್ರಾಮದಲ್ಲಿ ಸರಿಯಾದ ರೀತಿಯಲ್ಲಿ ಚರಂಡಿ ಇಲ್ಲ ಚರಂಡಿ ಇದ್ದರು ಸಹ ಗಿಡ ಗಂಟೀಗಳಿಂದ ಮುಚ್ಚಿ ಹೋಗಿದೆ ಇದರಿಂದ ಗ್ರಾಮದಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ ಬಹಳ ತೊಂದರೆ ಆಗುತ್ತಿದೆ. ಹಾಗೂ ಕೆಮ್ಮು, ನೆಗಡಿ, ಜ್ವರ, ಮಲೇರಿಯಾ, ಟೈಪೆಡ್, ಡೆಂಗ್ಯೂ, ಗ್ರಾಮದಲ್ಲಿ ಹೆಚ್ಚಾಗುತ್ತಿದೆ. ಇದರಿಂದ ಗಿಡಗಳಿಂದ ಮುಚ್ಚಿ ಹೋಗಿರುವ ಚರಂಡಿಯನ್ನು ತೆಗೆಸಿ ಚರಂಡಿ ನೀರು ರಸ್ತೆಯಲ್ಲಿ ನಿಲ್ಲದ ಹಾಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದನು.
ಕಳೆದ ನಾಲ್ಕು ದಿನಗಳ ಹಿಂದೆ ಬಿತ್ತರಿಸಿದ್ದು ಎಚ್ಚೆತ್ತುಕೊಂಡ ಅಧಿಕಾರಿಗಳು ಗ್ರಾಮದಲ್ಲಿ ಸ್ವಚ್ಛತೆ ಮಾಡಿಸಲು ಮುಂದಾಗಿದ್ದಾರೆ.